Thursday, November 14, 2024

Latest Posts

ತುಳಸಿ ವಿವಾಹ ಯಾಕೆ ಮಾಡಬೇಕು..? ತುಳಸಿ ಪೂಜೆಯ ಮಹತ್ವವೇನು..?

- Advertisement -

Spiritual: ಕಾರ್ತಿಕ ಮಾಸದಲ್ಲಿ ದ್ವಾದಶಿಯ ದಿನದಂದು ತುಳಸಿ ಪೂಜೆ ಮಾಡಲಾಗುತ್ತದೆ. ಇದನ್ನು ತುಳಸಿ ಪೂಜೆ, ತುಳಸಿ ವಿವಾಹವೆಂದು ಕರೆಯುತ್ತಾರೆ. ಸಾಲಿಗ್ರಾಮದೊಂದಿಗೆ ತುಳಸಿಯ ವಿವಾಹ ಮಾಡಲಾಗುತ್ತದೆ. ಹತ್ತಿಯ ಹೂವನ್ನು ಮಾಡಿ, ದೀಪ ಹಚ್ಚಿ, ನೈವೇದ್ಯವನ್ನು ತಯಾರಿಸಿ, ತುಳಸಿ ಗಿಡಕ್ಕೆ ಶೃಂಗಾರ ಮಾಡಿ, ಪೂಜೆ ಮಾಡುವುದು ಪದ್ಧತಿ. ಹಾಗಾದ್ರೆ ಯಾಕೆ ತುಳಸಿ ವಿವಾಹ ಮಾಡಲಾಗುತ್ತದೆ ಅಂತಾ ತಿಳಿಯೋಣ ಬನ್ನಿ.

ಪದ್ಮಪುರಾಣದ ಪ್ರಕಾರ, ತುಳಸಿ ಶ್ರೀ ಲಕ್ಷ್ಮೀಯ ರೂಪವಾಗಿದ್ದಾಳೆ. ಮತ್ತು ಸಾಲಿಗ್ರಾಮ ಶ್ರೀವಿಷ್ಣುವಿನ ರೂಪ. ಹಾಗಾಗಿ ದೀಪಾವಳಿಗೆ ಲಕ್ಷ್ಮೀ ಪೂಜೆ ಮಾಡುವುದು ಎಷ್ಟು ಮುಖ್ಯವೋ, ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವುದು ಕೂಡ ಅಷ್ಟೇ ಮುಖ್ಯ.

ತುಳಸಿ ವಿವಾಹ ಮಾಡುವ ವ್ಯಕ್ತಿಗೆ ಮತ್ತು ಮಾಡಿಸುವ ವ್ಯಕ್ತಿಗೆ 1 ಸಾವಿರ ಅಶ್ವಮೇಧ ಯಾಗ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಿರಿಯರು ಹೇಳುವ ಪ್ರಕಾರ, ಪ್ರತೀ ಮನುಷ್ಯನಿಗೂ ಹೆಣ್ಣು ಮಕ್ಕಳಿರಬೇಕು. ಏಕೆಂದರೆ, ಆ ಪ್ರತೀ ಪುರುಷ ಬೇರೆ ಮನೆಯಿಂದ ಕನ್ಯೆ ತಂದಾಗಲೇ, ಅವನ ಕುಟುಂಬ ಬೆಳಗುತ್ತದೆ. ಮತ್ತು ಮಕ್ಕಳಾಗುತ್ತದೆ. ಆಗ ಬೇರೆಯವರ ಮನೆಯಿಂದ ಕನ್ಯೆ ತಂದ ಋಣ ಅವನ ಮೇಲಿರುತ್ತದೆ. ಹಾಗಾಗಿ ಆ ಋಣ ಸಂದಾಯವಾಗಬೇಕು ಅಂದ್ರೆ, ಅವನಿಗೊಂದು ಹೆಣ್ಣು ಹುಟ್ಟಿ, ಆಕೆಯನ್ನು ಆತ ಕನ್ಯಾ ದಾನ ಮಾಡಬೇಕು.

ಆದರೆ ಗಂಡು ಮಕ್ಕಳಿರುವ ಪೋಷಕರಿಗೆ ಋಣವಿರಬಾರದು ಅಂದ್ರೆ, ಅವರು ಪ್ರತೀ ವರ್ಷ ತಪ್ಪದೇ ಭಕ್ತಿಯಿಂದ ತುಳಸಿ ವಿವಾಹ ಮಾಡಬೇಕು. ಇದರಿಂದ ಕನ್ಯಾದಾನ ಮಾಡಿದ ಪುಣ್ಯ ಬರುತ್ತದೆ.

- Advertisement -

Latest Posts

Don't Miss