Health Tips: ಪ್ರತಿದಿನ ಕೆಲಸಕ್ಕೆ ಹೋಗುವವರಲ್ಲಿ ಕೆಲವರಿಗೆ ಇರುವ ಸಮಸ್ಯೆ ಅಂದ್ರೆ ದುರ್ಗಂಧದ ಸಮಸ್ಯೆ. ಯಾವ ಪರ್ಫ್ಯೂಮ್ ಬಳಸಿದ್ರೂ, ಕೆಲವೊಮ್ಮೆ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ. ಹಾಗಾಗಿ ನಾವಿಂದು ಬೆವರಿನ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ಸ್ನಾನಕ್ಕೂ ಮುನ್ನ, ಒಣ ಟವೆಲ್‌ನಿಂದ ನಿಮ್ಮ ಮೈ ಒರೆಸಿಕೊಳ್ಳಿ. ಅಥವಾ ಬಾತಿಂಗ್ ಬ್ರೆಶ್‌ನಿಂದ ನಿಮ್ಮ ಮೈ ನಿಧಾನವಾಗಿ ಉಜ್ಜಿಕೊಳ್ಳಿ. ಇದರಿಂದ ನಿಮ್ಮ ದೇಹದಲ್ಲಿರುವ ಕೊಳೆ ಹೊರಬರುತ್ತದೆ. ಸ್ಕಿನ್ ಚೆನ್ನಾಗಿರುತ್ತದೆ. ಬಳಿಕ ನೀರು ಬಳಸಿ ಸ್ನಾನ ಮಾಡಿ.
ಎರಡನೇಯದಾಗಿ ಸ್ನಾನದ ನೀರಿಗೆ ಕೊಂಚ ಉಪ್ಪು ಬೆರೆಸಿ. ದಪ್ಪ ಉಪ್ಪು ಬಳಸಬೇಕು. ಅಥವಾ ಸ್ನಾನ ಮಾಡಲು ಬಳಸಲೆಂದೇ ಇತ್ತೀಚೆಗೆ ಸುಗಂಧಭರಿತವಾದ ಉಪ್ಪು ಸಿಗುತ್ತದೆ. ಅಂಥ ಉಪ್ಪು ಬಳಸಿದರೂ ಉತ್ತಮ. ಇದರಿಂದ ನಿಮ್ಮ ದೇಹದ ದುರ್ವಾಸನೆ ಕಡಿಮೆಯಾಗುತ್ತದೆ.
ಸ್ನಾನಕ್ಕೂ ಮುನ್ನ ಸ್ವಲ್ಪ ಬೇವಿನ ಎಲೆ ಮತ್ತು ಸ್ವಲ್ಪ ತುಳಸಿ ಎಲೆ ಮಿಕ್ಸ್ ಮಾಡಿ, ಪೇಸ್ಟ್ ತಯಾರಿಸಿ, ದೇಹಕ್ಕೆ ಹಚ್ಚಿಕೊಂಡು, ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿ. ಪ್ರತಿದಿನ ಹೀಗೆ ಮಾಡಲಾಗದಿದ್ದಲ್ಲಿ, ಕೊಂಚ ಬೇವಿನ ಎಲೆ ಮತ್ತು ತುಳಸಿ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ, ಸ್ನಾನ ಮಾಡಿ. ತುಳಸಿ ಮತ್ತು ಬೇವಿನಲ್ಲಿ ದೇಹದ ದುರ್ಗಂಧ ತೆಗೆದು ಹಾಕುವ ಶಕ್ತಿ ಇರುತ್ತದೆ.
ಇನ್ನು ಊಟದಲ್ಲಿ ಅಗತ್ಯಕ್ಕಿಂತ ಹೆಚ್ಚು ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸಿದ್ದಲ್ಲಿ, ದೇಹದಲ್ಲಿ ದುರ್ಗಂಧ ಹೆಚ್ಚಾಗುತ್ತದೆ. ಅಲ್ಲದೇ ಪ್ರತಿದಿನ ಸರಿಯಾಗಿ ಸ್ನಾನ ಮಾಡಬೇಕು. ಕೊಳಕಾದೇ ಇರುವ ಸ್ವಚ್ಛ ಬಟ್ಟೆ ಧರಿಸಬೇಕು. ವಾರಕ್ಕೊಮ್ಮೆಯಾದರೂ ಎಣ್ಣೆ ಮಸಾಜ್ ಮಾಡಿ, ಸ್ನಾನ ಮಾಡಬೇಕು. ಇದರಿಂದ ದೇಹದಲ್ಲಿ ಹೆಚ್ಚು ದುರ್ಗಂಧ ಬರುವುದಿಲ್ಲ.