Tuesday, December 10, 2024

Latest Posts

ಆರೋಗ್ಯಕರ ಕೂದಲಿಗಾಗಿ ಮನೆಯಲ್ಲೇ ತಯಾರಿಸಿ ಈ ಹರ್ಬಲ್‌ ಹೇರ್ ಆಯಿಲ್‌

- Advertisement -

Beauty Tips: ತಲೆಗೂದಲು ಉದುರುವ ಸಮಸ್ಯೆಗೆ ಇಂದು ನಾವು ಮನೆಯಲ್ಲೇ ತಯಾರಿಸಬಹುದಾದ ಎಣ್ಣೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮೊದಲು 2 ಟೇಬಲ್ ಸ್ಪೂನ್ ಮೆಂತ್ಯೆಗೆ ನೀರು ಹಾಕಿ 1 ಗಂಟೆ ನೆನೆಸಿಡಿ. ಬಳಿಕ ಮಿಕ್ಸಿ ಜಾರ್‌ಗೆ 2 ಈರುಳ್ಳಿ, ಅಥವಾ 4 ಚಿಕ್ಕ ಚಿಕ್ಕ ಈರುಳ್ಳಿ, ಒಂದು ಮುಷ್ಠಿ ಕರಿಬೇವಿನ ಎಲೆ, ಸ್ವಲ್ಪ ನ್ಯಾಚುರಲ್ ಆಲ್ಯೋವೆರಾ ಜೆಲ್, ಮೆಹಂದಿ ಸೊಪ್ಪು, ನಾಲ್ಕು ತಿನ್ನುವ ಎಲೆ, ನೆನೆಸಿಟ್ಟ ಮೆಂತ್ಯೆ, 5 ಬೀಜ ತೆಗೆದ ನೆಲ್ಲಿಕಾಯಿ, 10 ದಾಸವಾಳದ ಎಲೆ, ತುಳಸಿ ಎಲೆ, ಬೇವಿನ ಎಲೆ, 10 ದಾಸವಾಳದ ಎಲೆ ಹಾಕಿ, ಚೆನ್ನಾಗಿ ಪೇಸ್ಟ್ ತಯಾರಿಸಿಕೊಳ್ಳಿ.

ಇಪೇಸ್ಟ್‌ನ್ನು ಒಂದು ಪ್ಯಾನ್‌ಗೆ ಹಾಕಿ, ಅದಕ್ಕೆ ಬೇಕಾದಷ್ಟು ತೆಂಗಿನ ಎಣ್ಣೆ ಹಾಕಿ, ಇವೆರಡೂ ಮಿಶ್ರಣವನ್ನು ಚೆನ್ನಾಗಿ ಕುದಿಸಬೇಕು. ಹಸಿ ವಾಸನೆ ಹೋಗುವವರೆಗೂ ಈ ಮಿಶ್ರಣ ಕುದಿಯುತ್ತಿರಬೇಕು. ನೆನಪಿರಲಿ ಈ ಎಣ್ಣೆ ಅಡಿ ಹಿಡಿಯದ ಹಾಗೆ, ಕೈಯಾಡುತ್ತಿರಬೇಕು. ಇಲ್ಲವಾದಲ್ಲಿ ಪರಿಮಳ ಬರಬೇಕಾದ ಎಣ್ಣೆ ವಾಸನೆ ಬರುತ್ತದೆ.  ಎಣ್ಣೆ ಚೆನ್ನಾಗಿ ಕುದಿ ಬಂದ ಬಳಿಕ, ಒಂದು ಕಾಟನ್ ಬಟ್ಟೆಯ ಸಹಾಯದಿಂದ ಗಾಜಿನ ಡಬ್ಬದಲ್ಲಿ ಎಣ್ಣೆಯನ್ನು ಸೋಸಿ, ತುಂಬಿಸಿಡಿ.

ಮೊದಲು ಕೂದಲಿಗೆ ಎಣ್ಣೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ. ಎಣ್ಣೆ ಹಚ್ಚಿ ಮೃದುವಾಗಿ ಮಸಾಜ್ ಮಾಡುವುದರಿಂದ, ನಿಮ್ಮ ತಲೆಯಲ್ಲಿ ರಕ್ತ ಸಂಚಲನ ಉತ್ತಮವಾಗುತ್ತದೆ. ಒಂದು ಗಂಟೆ ಬಿಟ್ಟು, ಕೆಮಿಕಲ್ ಇಲ್ಲದ ಶ್ಯಾಂಪೂವಿನಿಂದ ಕೂದಲು ವಾಶ್ ಮಾಡಿ. ವಾರಕ್ಕೆ ಎರಡು ಬಾರಿ ಈ ಎಣ್ಣೆ ಬಳಸುವುದರಿಂದ ನಿಮ್ಮ ಕೂದಲ ಆರೋಗ್ಯ ಚೆನ್ನಾಗಿರುತ್ತದೆ.

- Advertisement -

Latest Posts

Don't Miss