Friday, December 6, 2024

Latest Posts

Beauty Tips: ತ್ರಿಫಲಾ ಚೂರ್ಣ ಬಳಸಿ ನಿಮ್ಮ ಕೂದಲನ್ನು ಸಧೃಡಗೊಳಿಸಿ

- Advertisement -

Health Tips: ಕೂದಲು ಉದುರುವ ಸಮಸ್ಯೆಯಿಂದ ಇಂದಿನ ಯುವ ಪೀಳಿಗೆಯವರು ಅದ್ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರೆ, ಕೆಲವರು ಡಿಪ್ರೆಶನ್‌ಗೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಕಂಡಿಶನರ್, ಎಣ್ಣೆ ಎಲ್ಲವೂ ಬಳಸಿ, ಕೊನೆಗೆ ಇರುವ ಕೂದಲನ್ನೂ ಕಳೆದುಕೊಂಡು, ಇರುವ ಸೌಂದರ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ನಾವಿಂದು ತ್ರಿಫಲಾ ಚೂರ್ಣ ಉಪಯೋಗಿಸಿ, ಯಾವ ರೀತಿ ಕೂದಲಿನ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಲಿದ್ದೇವೆ.

ತ್ರಿಫಲಾ ಎಂದರೆ ಮೂರು ಫಲ ಎಂದರ್ಥ. ಕಪ್ಪು ಮೈರೋಬಾಲನ್‌, ನೆಲ್ಲಿಕಾಯಿ, ಬೆಲ್ಲೆರಿಕಾ. ಈ ಮೂರು ಹಣ್ಣುಗಳನ್ನು ತ್ರಿಫಲಾ ಎನ್ನುತ್ತಾರೆ. ಇದನ್ನು ಒಣಗಿಸಿ, ಪೂಡಿ ಮಾಡಿದಾಗಲೇ, ತ್ರಿಫಲಾ ಚೂರ್ಣವಾಗುತ್ತದೆ. ಅಂದ್ರೆ ತ್ರಿಫಲಾ ಪುಡಿ.

ಈ ಮೂರು ಫಲಗಳು ಕೂದಲಿನ ಆರೋಗ್ಯವನ್ನು ಚೆನ್ನಾಗಿರಿಸುತ್ತದೆ. ಕೂದಲು ಉದುರುವಿಕೆ, ಬಿಳಿ ಕೂದಲಾಗುವುದು ಇತ್ಯಾದಿ ಆರೋಗ್ಯಕರ ಲಾಭಗಳನ್ನು ತ್ರಿಫಲಾ ನೀಡುತ್ತದೆ. ಹೇರ್ ಪ್ಯಾಕ್ ತಯಾರಿಸಲು, ಒಂದು ಬೌಲ್‌ಗೆ 1 ದೊಡ್ಡ ಸ್ಪೂನ್ ತ್ರಿಫಲಾ ಪುಡಿ ಮತ್ತು 1 ದೊಡ್ಡ ಚಮಚ ನೀರು ಅಥವಾ ತೆಂಗಿನ ಎಣ್ಣೆ ಹಾಕಿ ಮಿಕ್ಸ್ ಮಾಡಿ. ನೀವು ಎಣ್ಣೆ ಅಥವಾ ನೀರಿನ ಬದಲಾಗಿ, ಆ್ಯಲೋವೆರಾ ಜೆಲ್ ಬಳಸಿದರೂ ಉತ್ತಮ. ಇದನನ್ನು ಮಿಕ್ಸ್ ಮಾಡಿ ಕೊಂಚ ಹೊತ್ತು ಬಿಟ್ಟು, ಹೇರ್ ಪ್ಾಕ್ ಹಾಕಿ, ಇದು ಒಣಗಿದ ಬಳಿಕ, ತಲೆ ಸ್ನಾನ ಮಾಡಿ.

ಇನ್ನು ಪ್ರತಿದಿನ ಕೊಂಚ ಬಿಸಿ ನೀರಿಗೆ, 1 ಸ್ಪೂನ್ ತ್ರಿಫಲಾ ಚೂರ್ಣ ಬೆರೆಸಿ, ಕುಡಿದರೆ, ನಿಮ್ಮ ಜೀರ್ಣಶಕ್ತಿ ಉತ್ತಮವಾಗಿರುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಈ ಪೇಯ ಕುಡಿದರೆ, ನಿಮಗೆ ಲೂಸ್ ಮೋಷನ್ ಆಗುವ ಸಾಧ್ಯತೆ ಹೆಚ್ಚು. ಇನ್ನು ಇದೆಲ್ಲದರ ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ, ಹಣ್ಣು, ಎಳನೀರಿನ ಸೇವನೆ ಮಾಡಿ. ತರಕಾರಿ ತಿನ್ನಿ. ಸಮಯಕ್ಕೆ ಸರಿಯಾಗಿ ಊಟ ನಿದ್ದೆ ಮಾಡಿ.

- Advertisement -

Latest Posts

Don't Miss