Tuesday, December 3, 2024

Latest Posts

ಬಿಜೆಪಿ ನಿರಂತರ ಆಪರೇಷನ್ ಕಮಲ ಮಾಡುತ್ತಿದೆ: ಕಾರ್ಮಿಕ ಸಚಿವ ಸಂತೋಷ ಲಾಡ್ ವಾಗ್ದಾಳಿ

- Advertisement -

Hubli News: ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಸರ್ಕಾರ ಆಪರೇಷನ್ ಕಮಲ ನಿರಂತರ ಪ್ರಯತ್ನ ಮಾಡುತ್ತಿದೆ. ಆಪರೇಷನ್ ಕಮಲ ಮಾಡುವುದರಲ್ಲಿ ಬಿಜೆಪಿ‌ ನಿಸ್ಸಿಮರು. ಕಳೆದ 16 ತಿಂಗಳಿಂದ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ತಮ್ಮ ಜೊತೆ ಜನ ಬೆಂಬಲ ಇದೆ ಅದನ್ನೇ ಹೇಳಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೂರು ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿದ್ರು, ಏನಾಗಿದೆ ಎಲ್ಲಿದೆ ಸ್ಮಾರ್ಟ್ ? ಬಿಜೆಪಿಯವರು ಉತ್ತರ ಕೊಡಲಿ. ಬಿಜೆಪಿ ಅಧಿಕಾರದಲ್ಲಿ ಮಾಡಿದ ಹೆದ್ದಾರಿ, ಏರ್ಪೋರ್ಟ್ ಕಿತ್ತುಕೊಂಡು ಹೋಗಿವೆ. ಬಿಜೆಪಿಯವರು ಕಟ್ಟಿದ ಬಿಲ್ಡಿಂಗ್ 10-11 ವರ್ಷದಲ್ಲಿ ಬಿದ್ದು ಹೋಗುತ್ತಿವೆ. ಇದಕ್ಕೆ ಮೋದಿಯವರು ಉತ್ತರ ಕೊಡಬೇಕು ಎಂದರು.

ಬಿಜೆಪಿಯವರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ‌ ನಂಬಿಕೆ ಇಲ್ಲ. ನ್ಯಾಯಾದೀಶರ ಬಗ್ಗೆ ಈ ತರಹ ಮಾತನಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಾರಿಗೆ ಸಚಿವ ರಾಮಲಿಂಗ ರಡ್ಡಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಭಾಗಕ್ಕೆ 120 ಹೊಸ ಬಸ್ ಗಳನ್ನು ನೀಡುತ್ತಿದ್ದಾರೆ. ನೂತನ ಬಸ್ ಗಳನ್ನು ಇಂದು ಲೋಕಾರ್ಪಣೆ ಮಾಡಲಿದ್ದೇವೆ. ಕನ್ನಡಿಗರಿಗೆ ಮೀಸಲಾತಿ ವಾಪಸು ಪಡೆದಿಲ್ಲ. ಎಲ್ಲ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುತ್ತೇವೆ ಎಂದರು.

- Advertisement -

Latest Posts

Don't Miss