Saturday, January 18, 2025

Latest Posts

Recipe: ರವಾದಿಂದ ತಯಾರಿಸಬಹುದು ಈ ರುಚಿಕರ ಖಾರಾ ಸ್ನ್ಯಾಕ್ಸ್

- Advertisement -

Recipe: ಬೇಕಾಗುವ ಸಾಮಗ್ರಿ: 2 ಕಪ್ ರವಾ, ಅರ್ಧ ಕಪ್ ಗೋದಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ. ಬೇರೆ ಬೇರೆ ಮಸಾಲೆ ಪುಡಿ, ಖಾರದ ಪುಡಿ.

ಮಾಡುವ ವಿಧಾನ: ಮೊದಲು ಮಿಕ್ಸಿ ಜಾರ್‌ಗೆ ರವಾ, ಗೋಧಿ ಹಿಟ್ಟು ಹಾಕಿ, ಪುಡಿ ಮಾಡಿಕೊಳ್ಳಿ. ಈಗ ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ, ಉಪ್ಪು, ಬಿಸಿ ಮಾಡಿದ ಎಣ್ಣೆ, ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ಹಿಟ್ಟು ಕಲಿಸಿಕೊಳ್ಳಿ.

ಹತ್ತು ನಿಮಿಷ ಒದ್ದೆ ಕಾಟನ್ ಬಟ್ಟೆಯಿಂದ ಈ ಹಿಟ್ಟನ್ನು ಮುಚ್ಚಿಡಿ. ಬಳಿಕ ಇದನ್ನು ಚಪಾತಿಯ ಹಾಗೆ ಲಟ್ಟಿಸಿ. ಬಳಿಕ ಶಂಕರಪೋಳಿಯಾಕಾರದಲ್ಲಿ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಬಳಿಕ ಕಾದ ಎಣ್ಣೆಯಲ್ಲಿ ಇದನ್ನು ಕರೆಯಿರಿ.

ಕರಿದಿದ್ದನ್ನು ಮೂರು ಭಾಗಗಳಾಗಿ ವಿಂಗಡಿಸಿ. ಮೂರು ಭಾಗಕ್ಕೂ ಬೇರೆ ಬೇರೆ ಮಸಾಲೆ ಹಾಕಿ ಮಿಕ್ಸ್ ಮಾಡಿ. ಖಾರಾಪುಡಿ, ಚಾಟ್ ಮಸಾಲೆ, ಪುದೀನಾ ಪುಡಿ, ಬೆಳ್ಳುಳ್ಳಿ ಪುಡಿ, ಪೆರಿ ಪೆರಿ ಮಸಾಲಾ ಹೀಗೆ ವಿವಿಧ ಮಸಾಲೆಗಳನ್ನು ಹಾಕಿ, ಮಿಕ್ಸ್ ಮಾಡಿದ್ರೆ, ರವಾದ ರುಚಿಕರ ಸ್ನ್ಯಾಕ್ಸ್ ರೆಡಿ.

- Advertisement -

Latest Posts

Don't Miss