ಮೇಕ್ ಇನ್ ಇಂಡಿಯಾ ರೀತಿ ವೆಡ್ ಇನ್ ಇಂಡಿಯಾಗೂ ಬೆಂಬಲ ಕೊಡಿ ಅಂತಿದ್ದಾರೆ ಮೋದಿ

Political News: ಮೇಕ್ ಇನ್ ಇಂಡಿಯಾ ಪ್ರಧಾನಿ ಮೋದಿಯ ಕನಸಾಗಿದ್ದು, ಈ ಕನಸು ಶೀಘ್ರದಲ್ಲೇ ಸಂಪೂರ್ಣ ಪ್ರಮಾಣದಲ್ಲಿ ನನಸಾಗುವಂತೆ ಕಾಣುತ್ತಿದೆ. ಅಂದ್ರೆ ಹಲವು ವಸ್ತುಗಳನ್ನು ನಾವು ಭಾರತದಲ್ಲೇ ತಯಾರಿಸಬೇಕು. ವಿದೇಶದಿಂದ ಆಮದು ಮಾಡುವುದನ್ನು ತಪ್ಪಿಸಬೇಕು ಅನ್ನೋದು ಮೋದಿ ಕನಸು. ಅದೇ ರೀತಿ ಹಲವು ವಸ್ತುಗಳನ್ನು ಭಾರತ, ಬೇರೆ ದೇಶಗಳಿಂದ ಆಮದಿ ಮಾಡಿಕೊಳ್ಳುವುದನ್ನು ಕಡಿಮೆ ಮಾಡಿದೆ. ಇದರಿಂದ ಹಲವು ಭಾರತೀಯರಿಗೆ ಕೆಲಸ ಸಿಕ್ಕಿರುವುದಲ್ಲದೇ, ಭಾರತದ ಆರ್ಥಿಕತೆ ಉತ್ತುಂಗಕ್ಕೇರಲು ಸಹಾಯವಾಗುತ್ತಿದೆ. ಅದೇ ರೀತಿ ಮೋದಿ ಇನ್ನೊಂದು ಕರೆ ಕೊಟ್ಟಿದ್ದು, ವೆಡ್ ಇನ್ ಇಂಡಿಯಾಗೂ ಬೆಂಬಲಿಸಿ ಎಂದಿದ್ದಾರೆ.

ಏನಿದು ವೆಡ್ ಇನ್ ಇಂಡಿಯಾ..?

ವೆಡ್ ಇನ್ ಇಂಡಿಯಾ ಅಂದ್ರೆ, ಭಾರತದಲ್ಲೇ ಮದುವೆ ಮಾಡಿ ಎಂದರ್ಥ. ಈ ಮಾತು ಮೋದಿಜಿ ಯಾಕೆ ಹೇಳಿದ್ದು ಅಂದ್ರೆ, ಮದುವೆ ಇಂಡಸ್ಟ್ರಿ ಭಾರತದ ಅತ್ಯುತ್ತಮ 4ನೇ ಉದ್ಯಮವಾಗಿದೆ. ಭಾರತದಲ್ಲಿ ಮದುವೆ ಮಾಡುವುದರಿಂದ ಕೋಟಿ ಕೋಟಿ ಲಾಭ ಬರುತ್ತದೆ. ಬರೀ 23 ದಿನಗಳಲ್ಲಿ ನಡೆದ ಮದುವೆಯಿಂದ 5 ಲಕ್ಷ ಕೋಟಿ ರೂಪಾಯಿ ಲಾಭವಾಗಿದೆ.

ಕೇಟರಿಂಗ್, ಹೂ ಮಾರುವವರು, ಡೆಕೋರೆಷನ್, ಬ್ಯೂಟಿಷಿಯನ್, ಹೀಗೆ ಮದುವೆಯಲ್ಲಿ ಕೆಲಸ ಮಾಡಬಲ್ಲ ಹಲವರು ಭಾರತದಲ್ಲಿ ನಡೆಯುವ ಮದುವೆಯಿಂದ ಉದ್ಧಾರವಾಗಿದ್ದಾರೆ. ಹಾಗಾಗಿ ಭಾರತದಲ್ಲಿಯೇ ಮದುವೆ ಮಾಡಿ, ಮತ್ತು ಇಲ್ಲಿನ ಉದ್ಯೋಗಿಗಳ, ಉದ್ಯಮಿಗಳಿಗೆ ಲಾಭ ಮಾಡಿಕೊಡಿ ಎಂದು ಮೋದಿ ಹೇಳಿದ್ದಾರೆ.

ಯಾಕಂದ್ರೆ ಕೆಲ ವರ್ಷಗಳಿಂದ ಭಾರತದ ಅತೀ ಶ್ರೀಮಂತರು, ಭಾರತಕ್ಕಿಂತ ಹೆಚ್ಚಾಗಿ, ಹೊರದೇಶಗಳಲ್ಲಿ ತಮ್ಮ ಮದುವೆ ಮಾಡಿಕೊಳ್ಳುತ್ತಿದ್ದಾರೆ. ವರ್ಷಕ್ಕೆ 5 ಸಾವಿರ ಮದುವೆ ವಿದೇಶದಲ್ಲಿ ನಡೆಯುತ್ತಿದೆ. ಇದರಿಂದ ಭಾರತಕ್ಕೆ 1 ಲಕ್ಷ ಕೋಟಿ ಲಾಸ್ ಆಗುತ್ತಿದೆ. ಶ್ರೀಮಂತರು ವಿದೇಶದಲ್ಲಿ ಮದುವೆ ಮಾಡಿ, ವಿದೇಶಕ್ಕೆ ಲಾಭ ಮಾಡಿಕೊಡುತ್ತಿದ್ದಾರೆ. ಅನುಷ್ಕಾ ವಿರಾಟ್, ದೀಪಿಕಾ- ರಣ್ವೀರ್ ಸೇರಿ ಹಲವು ಗಣ್ಯರು ಇಟಲಿಯಲ್ಲಿ ವಿವಾಹವಾಗಿದ್ದಾರೆ. ಇದರಿಂದ ಇಟಲಿಯಲ್ಲಿರುವವರಿಗೆ ಲಾಭವಾಗುತ್ತದೆ ಹೊರತು, ಭಾರತೀಯರಿಗಲ್ಲ.

ಹಾಗಾಗಿ ಭಾರತದಲ್ಲಿರುವ ಶ್ರೀಮಂತರು, ಭಾರತದಲ್ಲಿರುವ ಉದ್ಯಮಿಗಳಿಗೆ, ಕೆಲಸಗಾರರಿಗೆ ಲಾಭವಾಗುವಂತೆ, ಭಾರತದಲ್ಲೇ ಮದುವೆ ಮಾಡಲಿ ಎಂಬುದು ಮೋದಿ ಆಶಯ. ಇದರಿಂದ ಕೆಲಸಗಾರರಿಗೆ ಕೆಲಸ ಸಿಗುವುದಲ್ಲದೇ, ಭಾರತದ ಆರ್ಥಿಕತೆಗೆ ಸಹಾಯವಾಗುತ್ತದೆ.

About The Author