Tuesday, December 3, 2024

Latest Posts

ಲಾರೆನ್ಸ್ ಗ್ಯಾಂಗ್‌ನ ಹಿಟ್ ಲೀಸ್ಟ್‌ನಲ್ಲಿದ್ದಾನೆ ಶ್ರದ್ಧಾ ಹ* ಆರೋಪಿ ಅಫ್ತಾಬ್‌

- Advertisement -

Delhi News: 2022ರಲ್ಲಿ ದೇಶಾದ್ಯಂತ ಒಂದು ಪ್ರಕರಣ ಸದ್ದು ಮಾಡಿತ್ತು. ಲವ್ ಜಿಹಾದ್‌ಗೆ ಬಲಿಯಾಗಿದ್ದ ಓರ್ವ ಯುವತಿ ಪ್ರಿಜ್‌ ಒಳಗೆ 35 ತುಂಡುಗಳಾಗಿ ಸಿಕ್ಕಿದ್ದಳು. ಆಕೆಯನ್ನು ಕೊಲ್ಲಲು ಆಕೆಯ ಬಾಯ್‌ಫ್ರೆಂಡ್ ಖತರ್ನಾಕ್ ಐಡಿಯಾವನ್ನೇ ಮಾಡಿದ್ದ. ಕೊನೆಗೂ ಸತ್ಯ ಗೊತ್ತಾಗಿ, ಪೊಲೀಸರು ಆತನನ್ನು ಜೈಲಿಗಟ್ಟಿದ್ದಾರೆ. ಆದರೆ ಇಂಥವರಿಗೆಲ್ಲ ಜೈಲು ಶಿಕ್ಷೆ ಸಾಕಾಗುವುದಿಲ್ಲವೆಂದು, ಲಾರೆನ್ಸ್ ಬಿಷ್ಣೋಯ್ ತಂಡ ತಮ್ಮ ಹಿಟ್ ಲೀಸ್ಟ್‌ನಲ್ಲಿ ಈ ಕೊಲೆ ಆರೋಪಿಯ ಹೆಸರನ್ನು ಸೇರಿಸಿಕೊಂಡಿದೆ.

ದೆಹಲಿಯ ಹುಡುಗಿ ಶ್ರದ್ಧಾ ವಾಕರ್ ಅಫ್ತಾಬ್ ಪೂನಾವಾಲಾ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಅಲ್ಲದೇ ಹಲವು ವರ್ಷಗಳಿಂದ ಅವನೊಂದಿಗೆ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿ ಇದ್ದಳು. ಆದರೆ ಮನಸ್ತಾಪವಾದ ಕಾರಣ, ಇಬ್ಬರೂ ಜಗಳವಾಡಿಕೊಂಡಿದ್ದು, ಆ ಜಗಳ ಕೊಲೆಯಾಗಿ ಮಾರ್ಪಟ್ಟಿತ್ತು. ಅಫ್ತಾಬ್ ಶ್ರದ್ಧಾಳನ್ನು ಕೊಲೆ ಮಾಡಿದ್ದ. ಬಾಡಿ ಸಿಕ್ಕರೆ, ತನ್ನ ಬಂಡವಾಳ ಬಯಲಿಗೆ ಬರುತ್ತದೆ ಎಂದು, ಆಕೆಯ ದೇಹವನ್ನು 35 ಭಾಗಗಳಾಗಿ ಕುಯ್ದು, ಫ್ರಿಜ್‌ನಲ್ಲಿ ತುಂಬಿಸಿಟ್ಟಿದ್ದ. ಕೊನೆಗೆ ಶ್ರದ್ಧಾ ತಂದೆ ತಾಯಿ ಆಕೆ ಕಾಣಯಾದ ಬಗ್ಗೆ ಪ್ರಕರಣ ದಾಖಲಿಸಿ, ಆ ಬಗ್ಗೆ ತನಿಖೆಯಾದಾಗ, ಸತ್ಯ ಬಯಲಿಗೆ ಬಂದಿತ್ತು.

ಇದೀಗ ದೇಶದಲ್ಲಿರುವ ಹಿಂದೂ ವಿರೋಧಿಗಳನ್ನು ಬಗ್ಗುಬಡಿಯಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಶುರು ಮಾಡಿದೆ. ಮೊದಲು ಬರೀ ಸಲ್ಮಾನ್ ಖಾನ್ ಅಷ್ಟೇ ಲಾರೆನ್ಸ್ ಗ್ಯಾಂಗ್‌ನ ಟಾರ್ಗೇಟ್ ಆಗಿದ್ದರು. ಆದರೆ ಇದೀಗ ದೇಶದಲ್ಲಿ ಹಿಂದೂ ವಿರೋಧಿ ಚಟುವಟಿಕೆ ಮಾಡುವ, ಹಿಂದೂಗಳ ವಿರುದ್ಧ ಹೇಳಿಕೆ ಕೊಡುವ, ಹಿಂದೂ ಹೆಣ್ಣು ಮಕ್ಕಳ ಸುದ್ದಿಗೆ ಬರುವವರು ಕೂಡ ಇವರ ಹಿಟ್ ಲೀಸ್ಟ್‌ನಲ್ಲಿ ಇದ್ದಾರೆ. ಅದೇ ರೀತಿ ಈ ಪ್ರಕರಣದ ಆರೋಪಿ ಅಫ್ತಾಬ್ ಕೂಡ ಇವರ ಹಿಟ್‌ ಲೀಸ್ಟ್‌ನಲ್ಲಿ ಇದ್ದಾನೆ.

ಬಾಬಾ ಸಿದ್ಧಿಕಿ ಹತ್ಯೆಯಾದ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹಲವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಬಿಷ್ಣೋಯ್ ಗ್ಯಾಂಗ್ ಸದಸ್ಯರು ಕೆಲವು ಹೆಸರನ್ನು ಹೇಳಿದ್ದಾರೆ. ಹಾಗಾಗಿ ಅವರ ಹಿಟ್ ಲೀಸ್ಟ್‌ನಲ್ಲಿ ಇನ್ನೂ ಯಾರ್ಯಾರು ಇದ್ದಾರೆ ಅನ್ನೋದು ಗೊತ್ತಾಗಿದೆ.

- Advertisement -

Latest Posts

Don't Miss