Saturday, December 7, 2024

Latest Posts

Spiritual: ಸತ್ತ ವ್ಯಕ್ತಿಯ ಈ ವಸ್ತುಗಳನ್ನು ಬಳಸಲೇಬಾರದಂತೆ

- Advertisement -

Spiritual: ಮನೆಯಲ್ಲಿ ಯಾರಾದರೂ ಸತ್ತಾಗ, ಅವರ ವಸ್ತುಗಳನ್ನು ಆ ಮನೆಯ ಜನ ಬಳಸುತ್ತಾರೆ. ಅಥವಾ ಯಾರಿಗಾದರೂ ಆ ವಸ್ತು ಬಳಕೆಯಾಗಲಿ ಎಂದು ಕೊಡುತ್ತಾರೆ. ಆದರೆ, ಸತ್ತು ಹೋದವರ ಕೆಲವು ವಸ್ತುಗಳನ್ನು ಬದುಕಿರುವವರು ಬಳಸಬಾರದು ಎಂಬ ನಿಯಮವಿದೆ. ಹಾಗಾದ್ರೆ ಯಾವ ವಸ್ತುಗಳನ್ನು ನಾವು ಬಳಸಬಾರದು ಅಂತಾ ತಿಳಿಯೋಣ ಬನ್ನಿ..

ಪಾದರಕ್ಷೆ: ಚಪ್ಪಲಿ ಯಾರದ್ದೇ ಆಗಲಿ, ಬದುಕಿದ್ದಾಗ ಸಹ ಬೇರೆಯವರ ಚಪ್ಪಲಿ ಧರಿಸಬಾರದು. ಏಕೆಂದರೆ, ಇನ್ನೊಬ್ಬರ ಚಪ್ಪಲಿ ಧರಿಸುವುದರಿಂದ ನಮಗೆ ನಕಾರಾತ್ಮಕತೆ ಬರುತ್ತದೆ. ಯಾವ ಕೆಲಸದಲ್ಲೂ ಅಭಿವೃದ್ಧಿ ಇರುವುದಿಲ್ಲ.

ಕೈಗಡಿಯಾರ: ಸತ್ತವರು ಬದುಕಿದ್ದಾಗ ಬಳಸುತ್ತಿದ್ದ ವಾಚ್‌ನ್ನು ಆ ಮನೆಯವರು ಧರಿಸಬಾರದು ಅಥವಾ ಇರಿಸಿಕೊಳ್ಳಬಾರದು ಅಂತಾ ಹೇಳಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ನಕಾರಾತ್ಮಕತೆ ಬರುತ್ತದೆ. ನಿಮ್ಮ ಸಮಯ ಸರಿಯಾಗಿರುವುದಿಲ್ಲವೆಂಬ ನಂಬಿಕೆ ಇದೆ, ಏಳಿಗೆ ಹೊಂದಲು ಸಾಧ್ಯವಿಲ್ಲ ಎನ್ನಲಾಗಿದೆ. ಹಾಗಾಗಿ ಕೈಗಡಿಯಾರವನ್ನು ನದಿಗೆ ಹಾಕಬೇಕು.

ಬಟ್ಟೆ: ಸತ್ತವರು ಬಳಸುತ್ತಿದ್ದ ಬಟ್ಟೆಯನ್ನು ಬಳಸಬಾರದು. ಹಾಗಾಗಿಯೇ ಆ ಬಟ್ಟೆಗಳನ್ನು ದಾನದ ರೂಪದಲ್ಲಿ ನೀಡಲಾಗುತ್ತದೆ. ಅಥವಾ ನದಿಗೆ ಹಾಕಲಾಗುತ್ತದೆ. ಅಥವಾ ಸುಟ್ಟು ಹಾಕಲಾಗುತ್ತದೆ. ಅಂಥ ಬಟ್ಟೆಯನ್ನು ಮನೆ ಮಂದಿ ಬಳಸುವುದರಿಂದ ಸತ್ತವರಿಗೆ ಬದುಕಿದ್ದಾಗ ಇದ್ದ ಆಲೋಚನೆ, ಟೆನ್ಶನ್ ಎಲ್ಲವೂ ನಮ್ಮ ಪಾಲಾಗುತ್ತದೆ. ಹಾಗಾಗಿ ಸತ್ತವರ ಬಟ್ಟೆ ಬಳಸಬಾರದು.

ಚಿನ್ನ: ಸಾಮಾನ್ಯವಾಗಿ ಚಿನ್ನವನ್ನು ಯಾರೂ ದಾನ ಮಾಡುವುದಿಲ್ಲ. ಆದರೆ ಸತ್ತವರು ಬಳಸುತ್ತಿದ್ದ ಚಿನ್ನವನ್ನು ಬದುಕಿದವರು ಬಳಸಬಾರದು. ಏಕೆಂದರೆ, ಸತ್ತವರಿಗೆ ಆ ಚಿನ್ನದ ಮೇಲೆ ಪ್ರೀತಿ ಇದ್ದಿತ್ತು. ಹಾಗಾಗಿ ಅಂಥ ಚಿನ್ನವನ್ನು ಕೊಟ್ಟು ಬೇರೆ ಚಿನ್ನ ಖರೀದಿಸಿ. ಅಥವಾ ಆ ಚಿನ್ನ ಮಾರಿ, ಅದರಿಂದ ಬಂದ ದುಡ್ಡನ್ನು ಉಪಯೋಗಿಸಿ.

- Advertisement -

Latest Posts

Don't Miss