Thursday, December 26, 2024

Latest Posts

Recipe: ಕ್ಯಾಪ್ಸಿಕಂ ರೈಸ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 1 ಅಥವಾ 2 ಕ್ಯಾಪ್ಸಿಕಂ, 2 ಈರುಳ್ಳಿ, 2 ಹಸಿಮೆಣಸು, ಅನ್ನ, 4 ಸ್ಪೂನ್ ಎಣ್ಣೆ, 10 ಎಸಳು ಬೆಳ್ಳುಳ್ಳಿ, ಖಾರದ ಪುಡಿ, ಚಿಟಿಕೆ ಅರಿಶಿನ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಕಡಲೆ ಬೇಳೆ.

ಮಾಡುವ ವಿಧಾನ: ಮೊದಲು ಬೆಳ್ಳುಳ್ಳಿ ಮತ್ತು ಒಂದು ಈರುಳ್ಳಿಯನ್ನು ಸುಡಬೇಡು. ಕೆಂಡದಲ್ಲಿ ಸುಟ್ಟ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಖಾರದಪುಡಿಯೊಂದಿಗೆ ನೀರು ಹಾಕದೇ, ತರಿ ತರಿಯಾಗಿ ಪುಡಿ ಮಾಡಿಕೊಳ್ಳಬೇಕು. ಈ ವೇಳೆ ಉಪ್ಪು ಹಾಕಿ ಪುಡಿ ಮಾಡಿದರೆ, ನೀವು ಸಾರು, ಪಲ್ಯ ಮಾಡುವಾಗಲೂ ಇದನ್ನು ಸೇರಿಸಿಕೊಳ್ಳಬಹುದು. ಅಥವಾ ಅನ್ನದೊಂದಿಗೆ ಚಟ್ನಿ ಪುಡಿಯ ರೀತಿ ಕಲಿಸಿ ತಿನ್ನಬಹುದು.

ಬಳಿಕ ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡಲೆಬೇಳೆ, ಕರಿಬೇವು, ಹಸಿಮೆಣಸು ಹಾಕಿ ಒಗ್ಗರಣೆ ರೆಡಿ ಮಾಡಿ. ನಂತರ ಉಳಿದ ಒಂದು ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿ, ಸೇರಿಸಿ ಹುರಿಯಿರಿ. ಬಳಿಕ ಕ್ಯಾಪ್ಸಿಕಂ ಹಾಕಿ ಹುರಿಯಿರಿ. ನಂತರ ರೆಡಿ ಮಾಡಿದ ಖಾರದ ಪುಡಿ, ಅರಿಶಿನ, ಉಪ್ಪು, ಅನ್ನ ಹಾಕಿ ಮಿಕ್ಸ್ ಮಾಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಸೇರಿಸಿದರೆ, ಕ್ಯಾಪ್ಸಿಕಂ ರೈಸ್ ರೆಡಿ. ಸಿಹಿ ಬೇಕಾದಲ್ಲಿ ಒಂದು ಸ್ಪೂನ್ ಸಕ್ಕರೆ ಅಥವಾ ಬೆಲ್ಲ ಸೇರಿಸಿಕೊಳ್ಳಿ. ಖಾರ ಕಡಿಮೆ ಮಾಡಬೇಕಾಗಿದ್ದಲ್ಲಿ, ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪು ಸೇರಿಸುವಾಗ, ನಿಂಬೆರಸ ಅಥವಾ ತುಪ್ಪ ಸೇರಿಸಿಕೊಳ್ಳಿ.

- Advertisement -

Latest Posts

Don't Miss