Friday, December 6, 2024

Latest Posts

ಲೆಬಿನಾನ್‌ನಲ್ಲಿ ಇಸ್ರೇಲ್ ದಾಳಿ 11 ಮಂದಿ ಸಾ*ವು, 48 ಮಂದಿಗೆ ಗಾಯ

- Advertisement -

International News: ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದ್ದು, ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 48ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಲೆಬನಾನ್ ನ ದಕ್ಷಿಣ ಪ್ರದೇಶವಾದ ಟೈರ್‌ನಲ್ಲಿ ಇಸ್ರೇಲ್ ದಾಳಿ ನಡೆಸಿತ್ತು.

ಭಾನುವಾರದ ದಿನ ಲೆಬನಾನ್‌ ರಾಜಧಾನಿ ಬೈರುತ್ ಮೇಲೂ ಇಸ್ರೇಲ್ ದಾಳಿ ನಡೆಸಿತ್ತು. ಲೆಬಿನಾನ್ ಸರ್ಕಾರ ಮತ್ತು ಬೈರುತ್ ಮೇಲೆ ಒತ್ತಡ ಹೇರುವುದು ಇಸ್ರೇಲ್ ಉದ್ದೇಶವಾಗಿದ್ದು, ಯಾವಾಗಲೂ ಹೊರವಲಯ ಟಾರ್ಗೇಟ್ ಮಾಡುತ್ತಿದ್ದ ಇಸ್ರೇಲ್ ಈ ಬಾರಿ ಲೆಬಿನಾನ್ ರಾಜಧಾನಿ ಭೈರುತ್ ಮೇಲೆ ದಾಳಿ ಮಾಡಿದೆ.

ಇನ್ನು ಈ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. 7 ಅಂತಸ್ತಿನ ಕಟ್ಟಡವನ್ನು ಟಾರ್ಗೇಟ್ ಮಾಡಿ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದು, ಕಟ್ಟಡ ಕುಸಿದ ಬಳಿಕ, ಅದರ ಅಡಿಯಲ್ಲಿದ್ದ ಕೆಲವನ್ನು ಹೊರತೆಗೆದು ಜೀವ ಉಳಿಸಲಾಗಿತ್ತು. ಆ ಕಟ್ಟದಲ್ಲಿ ಹಿಜ್ಬುಲ್ಲಾ ಮಾಧ್ಯಮ ಕಚೇರಿ ಮುಖ್ಯಸ್ಥ ಮೊಹಮ್ಮದ್ ಅಫೀಕ್ ಇದ್ದಿದ್ದು, ಅವರನ್ನು ಮಾತ್ರ ಉಳಿಸಲಾಗದೇ, ಸಾವನ್ನಪ್ಪಿದ್ದಾರೆ.

- Advertisement -

Latest Posts

Don't Miss