Thursday, November 21, 2024

Latest Posts

ಸದಾಕಾಲ ಫ್ಯಾಷನ್ ಮಾಡಲು ಇಚ್ಛಿಸುತ್ತೀರಾ..? ಹಾಗಾದ್ರೆ ಈ ವಸ್ತುಗಳು ನಿಮ್ಮ ಬಳಿ ಮುಖ್ಯವಾಗಿರಬೇಕು.

- Advertisement -

Beauty Tips: ಇಂದಿನ ಕಾಲದಲ್ಲಿ ಸಿಂಪಲ್ ಆಗಿರುವ ಹೆಣ್ಣು ಮಕ್ಕಳು ಕಾಣಸಿಗುವುದೇ ಕಡಿಮೆ. ಯಾಕಂದ್ರೆ ಎಲ್ಲರಿಗೂ ಚೆಂದಗಾಣಿಸುವ ಆಸೆ. ಆದರೆ ನೀವು ಸದಾಕಾಲ ಫ್ಯಾಷನ್ ಮಾಡಬೇಕು, ನಾಲ್ಕು ಜನರ ಮಧ್ಯೆ ಅಟ್ರ್ಯಾಕ್ಟಿವ್ ಆಗಿ ಕಾಣಬೇಕು ಅಂತಾ ಬಯಸಿದರೆ, ನಿಮ್ಮ ಬಳಿ ಕೆಲವು ವಸ್ತುಗಳು ಇರಲೇಬೇಕು. ಹಾಗಾದ್ರೆ ಅದು ಯಾವ ವಸ್ತು.? ಯಾಕಿರಬೇಕು ಅಂತಾ ತಿಳಿಯೋಣ ಬನ್ನಿ..

ಕ್ಲಚ್‌, ಹ್ಯಾಂಡ್ ಬ್ಯಾಗ್. ನೀವು ಏನೇ ಫ್ಯಾಷನ್ ಮಾಡಿದ್ರೂ, ನಿಮ್ಮ ಬಳಿ ಕ್ಲಚ್, ಪರ್ಸ್ ಅಥವಾ ಹ್ಯಾಂಡ್ ಬ್ಯಾಗ್ ಇಲ್ಲಾ ಅಂತಾ ಹೇಳಿದ್ರೆ, ಫ್ಯಾಶನ್ ಅಪೂರ್ಣವೆನ್ನಿಸುತ್ತದೆ. ಹಾಾಗಾಗಿ ನಿಮ್ಮ ಬಳಿ ಪುಟ್ಟದಾದ ಕ್ಲಚ್, ಪರ್ಸ್, ಸಣ್ಣ ಹ್ಯಾಂಡ್‌ ಬ್ಯಾಗ್ ಮತ್ತೊಂದು ದೊಡ್ಡ ಹ್ಯಾಂಡ್‌ ಬ್ಯಾಗ್ ಇರಲೇಬೇಕು.

ಕೂಲಿಂಗ್ ಗ್ಲಾಸ್. ಕೂಲಿಂಗ್ ಗ್ಲಾಸ್‌ ಬರೀ ಮಾಡರ್ನ್ ಡ್ರೆಸ್ ಹಾಕಿದಾಗ ಮಾತ್ರವಲ್ಲ. ಬದಲಾಗಿ ಸೀರೆಯುಟ್ಟಾಗಲೂ ಧರಿಸಬಹುದು. ಹಾಗಾಗಿ ನಿಮ್ಮ ಮುಖಕ್ಕೆ ಮ್ಯಾಚ್ ಆಗುವ ಉತ್ತಮ ಕ್ವಾಲಿಟಿ, ಬ್ರ್ಯಾಂಡ್‌ನ ಕೂಲಿಂಗ್ ಗ್ಲಾಸ್ ಖರೀದಿಸುವುದು ಉತ್ತಮ.

ಥಿನ್‌ ಬೆಲ್ಟ್. ಥಿನ್ ಬೆಲ್ಟ್ ಸೀರೆಯಿಂದ ಹಿಡಿದು ಜೀನ್ಸ್ ತನಕವೂ ಮ್ಯಾಚ್ ಆಗುವ ಬೆಲ್ಟ್. ಸೀರೆಯುಟ್ಟು ಸೊಂಟ ಪಟ್ಟಿಯ ರೀತಿ, ಟೀ ಶರ್ಟ್‌ನೊಂದಿಗೆ ಬ್ಲೇಸರ್ ಹಾಕಿ ಅದಕ್ಕೂ ಸೊಂಟ ಪಟ್ಟಿಯ ರೀತಿ ನೀವು ಈ ಥಿನ್ ಬೆಲ್ಟ್ ಬಳಸಬಹುದು. ಕಪ್ಪು ಅಥವಾ ಕಂದು ಬಣ್ಣದ ಬೆಲ್ಟ್ ಇದ್ದರೆ, ಎಲ್ಲಾ ಕಲರ್ ಬಟ್ಟೆಗೂ ಮ್ಯಾಚ್ ಆಗುತ್ತದೆ.

ಕ್ಲಾಸಿ ವಾಚ್. ನಿಮ್ಮ ಬಳಿ ಒಂದೆರಡು ವಾಚ್ ಇದ್ದರೂ, ಅದು ಎಲ್ಲ ಉಡುಗೆಗೂ ಮ್ಯಾಚ್ ಆಗುವಂತಿರಬೇಕು. ಹಾಗಾಗಿ ಅಂಥದ್ದೊಂದು ಕ್ಲಾಸಿ ವಾಚ್ ಇದ್ದರೂ ಸಾಕು. ಸಿಂಪಲ್ ರಿಂಗ್, ಬ್ರಾಸ್‌ಲೆಟ್ನೊಂದಿಗೆ ವಾಚ್ ಸಖತ್ ಆಗಿ ಮ್ಯಾಚ್ ಆಗತ್ತೆ.

ಸಿಂಪಲ್ ಆಗಿರುವ ಒಡವೆಗಳು. ಒಡವೆಗಳು ಅಂದ್ರೆ, ಭಾರವಾದ ಬಳೆ, ಸರ, ಕಿವಿಯೋಲೆ ಅಲ್ಲ. ಚಿನ್ನ, ಪ್ಲಾಟಿನಂ ಅಥವಾ ಉತ್ತಮ ಕ್ವಾಲಿಟಿಯ ಒಡವೆ. ಸಿಂಪಲ್ ಆಗಿರುವ ಕಿವಿಯ ಬೊಟ್ಟು, ಕುತ್ತಿಗೆಗೆ ಚೈನ್, ಸಿಂಪಲ್ ಆಗಿರುವ ರಿಂಗ್. ಇವೆಲ್ಲವೂ ಉತ್ತಮ ಕ್ವಾಲಿಟಿಯದ್ದಾಗಿದ್ದರೂ, ನಿಮ್ಮ ಚೆಂದವನ್ನು ಇಮ್ಮಡಿಗೊಳಿಸುತ್ತದೆ.

ಎಲ್ಲ ಬಟ್ಟೆಗಳಿಗೂ ಮ್ಯಾಚ್ ಆಗುವ ಶೂ ಮತ್ತು ಚಪ್ಪಲಿ: ನೀವು ಹಹೆಚ್ಚು ದುಡ್ಡು ಖರ್ಚು ಮಾಡಿ, ಬೇರೆ ಬೇರೆ ರೀತಿಯ ಚಪ್ಪಲಿ, ಶೂ ಖರೀದಿಸಿದರೆ, ಅದರಿಂದ ನಿಮ್ಮ ಕಾಲಿನ ಅಂದ ಹೆಚ್ಚಾಗುವುದಿಲ್ಲ. ಅದರ ಬದಲು, ಕಾಸ್ಟ್ಲಿಯಾದರೂ, ಸಿಂಪಲ್ ಆಗಿರುವ, ನೋಡಿದರೆ ಕ್ಲಾಸಿ ಎನ್ನಿಸುವ ಚಪ್ಪಲಿ, ಶೂ ನಿಮ್ಮ ಬಳಿ ಇರಬೇಕು. ಹಾಗಾಗಿ ಒಂದು ಶೂ ಮತ್ತು ಒಂದು ಚಪ್ಪಲಿ ಇದ್ದರೂ, ಅದು ಒಳ್ಳೆಯ ಬ್ರ್ಯಾಂಡ್, ಕ್ವಾಲಿಟಿ ಮತತ್ತು ಸಿಂಪಲ್ ಆಗಿದ್ರೆ ಸಾಕು. ನಿಮ್ಮೆಲ್ಲ ಉಡುಪಿಗೂ ಅದು ಮ್ಯಾಚ್ ಆಗುತ್ತದೆ.

- Advertisement -

Latest Posts

Don't Miss