Health Tips: ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಉತ್ತಮ ಲಾಭವಿಗೆ ಗೊತ್ತಾ..?

Health Tips: ಊಟದ ಜತೆಗೆ ಈರುಳ್ಳಿ ಇದ್ದರೆ ಅದರ ರುಚಿಯೇ ಬೇರೆ. ಅದರಲ್ಲೂ ನೀವು ಉತ್ತರಕರ್ನಾಟಕ ಶೈಲಿಯ ಊಟ ಮಾಡುವಾಗ ಈರುಳ್ಳಿ ಇರಲೇಬೇಕು. ಇನ್ನು ಚಾಟ್ಸ್, ಬಿರಿಯಾನಿ ಏನೇ ಇದ್ದರೂ ಅಲ್ಲಿ ಈರುಳ್ಳಿ ಇದ್ದೇ ಇರುತ್ತದೆ. ಆದರೆ ಈರುಳ್ಳಿ ಬರೀ ರುಚಿ ಹೆಚ್ಚಿಸಲು ಸೇವಿಸುವ ತರಕಾರಿಯಲ್ಲ ಬದಲಾಗಿ, ಇದರಿಂದ ಹಲವು ಆರೋಗ್ಯ ಲಾಭಗಳೂ ಇದೆ. ಈರುಳ್ಳಿ ಸೇವನೆಯಿಂದಾಗುವ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.

ಈರುಳ್ಳಿ ಸೇವನೆಯಿಂದ ಆಗುವ ಪ್ರಪ್ರಥಮ ಲಾಭವೆಂದರೆ, ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ನಿಮಗೆ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಏನನ್ನು ಸೇವಿಸದಿದ್ದರೂ, ಸರಿಯಾದ ಸಮಯಕ್ಕೆ ಮಲ ವಿಸರ್ಜನೆಯಾಗುತ್ತದೆ ಎಂದಲ್ಲಿ. ನಿಮ್ಮ ಆರೋಗ್ಯ ಅತ್ಯುತ್ತಮವಾಗಿದೆ ಎಂದರ್ಥ.

ಮಲವಿಸರ್ಜನೆ ಸರಿಯಾಗಿ ಆಗಬೇಕು ಅಂದ್ರೆ, ನಮ್ಮ ಜೀರ್ಣಕ್ರಿಯೆ ಸರಿಯಾಗಿ ಕೆಲಸ ಮಾಡಬೇಕು. ಹಾಗಾಗಬೇಕು ಅಂದ್ರೆ ನಾವು ಉತ್ತಮ ಆಹಾರ ಸೇವನೆ ಮಾಡಬೇಕು. ಅಂಥ ಆರೋಗ್ಯಕರ ಆಹಾರಗಳಲ್ಲಿ ಈರುಳ್ಳಿ ಕೂಡ 1. ಹಾಗಾಗಿ ಊಟ ಮಾಡುವಾಗ 2 ತುಂಡು ಈರುಳ್ಳಿ ಖಂಡಿತವಾಗಿಯೂ ಸೇವಿಸಿ.

ಈರುಳ್ಳಿ ಸೇವನೆಯಿಂದ ನಮ್ಮ ಹೃದಯದ ಆರೋಗ್ಯ ಕೂಡ ಅತ್ಯುತ್ತಮವಾಗಿರುತ್ತದೆ. ಬಿಪಿ, ಶುಗರ್ ಸಮಸ್ಯೆ ಇದ್ದಾಗಲೇ ನಮ್ಮ ಹೃದಯ ವೀಕ್ ಆಗುತ್ತದೆ. ಆದರೆ ನಾವು ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರ ಸೇವಿಸಿ, ಬಿಪಿ, ಶುಗರ್ ಸಮಸ್ಯೆಯಿಂದ ಬಚಾವಾಗಬಹುದು. ಹಾಗಾಗಿ ಹೃದಯದ ಆರೋಗ್ಯ ಕಾಪಾಡುವ ಈರುಳ್ಳಿ ಸೇವನೆ ಮಾಡಬಹುದು.

ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಪದೇ ಪದೇ ಶೀತ, ನೆಗಡಿ, ಕೆಮ್ಮು, ಜ್ವರ ಬರುತ್ತಿದ್ದರೆ, ನೀವು ಊಟದಲ್ಲಿ ಪ್ರತಿದಿನ ತಪ್ಪದೇ, ಈರುಳ್ಳಿ ಸೇವನೆ ಮಾಡಿ. ಆದರೆ ಈರುಳ್ಳಿ ಮೇಲಿರುವ ಕಪ್ಪು ಕಲೆಯನ್ನು ಕ್ಲೀನ್ ಮಾಡಿ ನೀವು ಈರುಳ್ಳಿ ಸೇವಿಸಿ. ಈರುಳ್ಳಿ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಈರುಳ್ಳಿ ಸೇವನೆಯಿಂದ ಪದೇ ಪದೇ ಜ್ವರ ಬರುವುದು ತಪ್ಪುತ್ತದೆ.

ಆದರೆ ಈರುಳ್ಳಿ ತಿಂದರೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ವಿಚಾರಿಸಿ, ಬಳಿಕ ಈರುಳ್ಳಿ ಸೇವನೆ ಮಾಡಿ.

About The Author