Thursday, December 26, 2024

Latest Posts

ಕಾಂಗ್ರೆಸ್‌ನವರು ಹೊಸ ಎಂಜಿನ್ ಹಾಕಿ ಉಡಾಯಿಸಿದರೂ, ಅವರ ವಿಮಾನ ಕೆಳಗೆ ಬೀಳುತ್ತದೆ: ಜೋಶಿ ವ್ಯಂಗ್ಯ

- Advertisement -

Dharwad News: ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡದಲ್ಲಿ ಮಾತನಾಡಿದ್ದು, ಶಿಗ್ಗಾವಿ ಕ್ಷೇತ್ರದಲ್ಲಿ ಗೆಲುವಿನ ಭರವಸೆ ಇತ್ತು. ಆದರೆ ಏನು ತಪ್ಪಾಗಿದೆ ಅಂತಾ ನೋಡುತ್ತೇವೆ. ಎರಡು ಕ್ಷೇತ್ರದಲ್ಲಿ ನಮ್ಮ‌ಪಕ್ಷ. ಒಂದು ಕ್ಷೇತ್ರದಲ್ಲಿ ನಿಖಿಲ್. ಏನಾಗಿದೆ ಅಂತಾ ಪರಿಶೀಲನೆ ಮಾಡುತ್ತೇವೆ. ಉಪಚುನಾವಣೆ ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಜನ ಹೋಗುತ್ತಾರೆ. ಆಡಳಿತ ಪಕ್ಷದಿಂದ ಅನುದಾನ ಅನುಕೂಲ ಎಂಬುದು ಸಾಮಾನ್ಯ ವಿಚಾರ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕಂಡು ಕೇಳರಿಯದ ರೀತಿಯಲ್ಲಿ ಹಣ ಹಂಚಿಕೆಯಾಗಿದೆ. ಗ್ರಾ.ಪಂ.ಗಳಿಗೂ ಶಿಗ್ಗಾವಿದಲ್ಲಿ ಒಬ್ಬೊಬ್ಬ ಮಂತ್ರಿ ಹಾಕಿದ್ದರು. ಜನ ತೀರ್ಮಾನ ಮಾಡಿದ್ರ ಗೆಲ್ಲಬಹುದಿತ್ತು. ಎಲ್ಲ ಉಪಚುನಾವಣೆ ನಾವು ಗೆದ್ದಿದ್ದೇವೆ. ಇವಿಎಂ ದೋಷ ಎಂದು ಹೇಳುವುದಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚುತ್ತಿದೆ. ಮಹಾರಾಷ್ಟ್ರದಲ್ಲಿ ವಿಪಕ್ಷ ಆಗಲು ಅರ್ಹತೆ ಇಲ್ಲದ ಸ್ಥಿತಿಗೆ ಬಂದಿದ್ದಾರೆ. ಜಾರ್ಖಂಡನಲ್ಲಿ ಜೆಎಂಎಂ ಎರಕೊಳ್ಳುವಾಗ ಹೋಗಿ ಡೊಗ್ಗಿ ನಿಂತರು. ಅಲ್ಲಿ ಜೆಎಂಎಂ ಹತ್ತು ಸೀಟು ಬಂದಿವೆ. ಜಾರ್ಖಂಡ್ ನಲ್ಲಿ ಜೆಎಂಎಂ ನಾವು ಸಮಬಲವಾಗಿದ್ದೇವು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತೊಬ್ಬರ ದೇಹ ಹೊತ್ತ ಅತೃಪ್ತ ಆತ್ಮ. ಪರಜೀವಿ ಪಾರ್ಟಿ ಆಗಿ ಕಾಂಗ್ರೆಸ್‌ ಇದೆ. ಕಾಂಗ್ರೆಸ್ ಯಾರನ್ನೂ ಹಿಡಿಕೊಳ್ಳುತ್ತಾರೋ ಅವರನ್ನು ಮುಳಗಿಸುತ್ತಾರೆ. ಎಸ್ಪಿ ಮುಳುಗಿಸಿಸ್ರು, ಶರದ ಪವಾರ, ಠಾಕ್ರೆಮುಳುಗಿಸಿದ್ರು. ಯಾರ ಜೊತೆ ಹೋಗುತ್ತಾರೋ ಅವರನ್ನು ಮುಳುಗಿಸುತ್ತಾರೆ. ಮತ್ತೊಮ್ಮೆ ಕಾಂಗ್ರೆಸ್ ಲಾಂಚಿಂಗ್ ಫೇಲ್ ಆಗಿದೆ. ಭಟ್ಟಿಂಗತನ. ಹೊಸ ಹೊಸ ಎಂಜಿನ್ ಹಾಕಿ ಹಾರಿಸುತ್ತಾರೆ. ಆ ವಿಮಾನ ಕೆಳಗೆ ಬೀಳುತ್ತದೆ. ಮತ್ತೊಮ್ಮೆ ರಾಹುಲ್ ಗಾಂಧಿ ವಿಫಲ ನಾಯಕ ಆಗಿ ಹೊರಹೊಮ್ಮಿದ್ದಾರೆ ಎಂದು ಕಾಂಗ್ರೆಸ್ ಮತ್ತು ರಾಹುಲ್ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ವಕ್ಫ್ ವಿರುದ್ಧ ಹೋರಾಟ ಮಾಡಿದರೂ ಬಿಜೆಪಿಗೆ ಸೋಲು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, ಹಾಗಾದ್ರೆ ಕಾಂಗ್ರೆಸ್ ಈಗ ವಕ್ಫ್ ಮುಂದಿವರಿಸ್ತಾರಂತಾ? ವಕ್ಪ್ ಹೋರಾಟ ಮುಂದುವರೆಯುತ್ತದೆ ಎಂದು ಜೋಶಿ ಪ್ರತಿಕ್ರಿಯಿಸಿದ್ದಾರೆ.

- Advertisement -

Latest Posts

Don't Miss