Thursday, December 5, 2024

Latest Posts

ಪತಿ-ಪತ್ನಿ ನಡುವಿನ ವಯಸ್ಸಿನ ಅಂತರದ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ ನೋಡಿ..

- Advertisement -

Spiritual: ಪತಿ- ಪತ್ನಿ ನಡುವಿನ ವಯಸ್ಸಿನ ಅಂತರ ಹೆಚ್ಚೂ ಇರಬಾರದು, ಕಡಿಮೆಯೂ ಇರಬಾರದು. ವರನಿಗಿಂದ ವಧು 5 ವರ್ಷ ಚಿಕ್ಕವಳಿದ್ದರೆ ಉತ್ತಮ. ಅದಕ್ಕಿಂತ ಹೆಚ್ಚು ಚಿಕ್ಕವಳಿರಬಾರದು. ಇನ್ನು ಇತ್ತೀಚೆಗೆ ಯುವತಿಯರು ಮುದುಕರನ್ನು ವಿವಾಹವಾಗುತ್ತಿದ್ದಾರೆ. ಅಲ್ಲದೇ ಕೆಲ ಯುವಕರೂ ಮಹಿಳೆಯರನ್ನು ವರಿಸುತ್ತಿದ್ದಾರೆ. ಇಂಥ ಸಂಬಂಧದ ಬಗ್ಗೆ ಚಾಣಕ್ಯರು ವಿವರಣೆ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಪತಿ- ಪತ್ನಿ ನಡುವಿನ ವಯಸ್ಸಿನ ಅಂತರ ಹೆಚ್ಚಿರಬಾರದು ಅಂತಾರೆ ಚಾಣಕ್ಯರು. ಪತಿಗಿಂತ ಪತ್ನಿ 5 ವರ್ಷ ಚಿಕ್ಕವಳಿದ್ದರೆ, ಉತ್ತಮ. ಚಾಣಕ್ಯರ ಪ್ರಕಾರ, ವೃದ್ಧನಾದವನು ಯುವತಿಯನ್ನು ವಿವಾಹವಾಗಬಾರದು. ಯುವಕನಾದವನು ಮಹಿಳೆಯನ್ನು ವರಿಸಬಾರದು. ಹೀಗಾದರೆ, ಸರಿಯಾಗಿ ಸುಖ ಸಂಸಾರ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಇದು ಪ್ರಕೃತಿಗೆ ವಿರುದ್ಧವಾಗಿರುತ್ತದೆ.

ಇಂಥ ಸಂಬಂಧಗಳು ಹೆಚ್ಚು ದಿನ ಬಾಳುವುದಿಲ್ಲ ಅಂತಾರೆ ಚಾಣಕ್ಯರು. ಪತಿ-ಪತ್ನಿ ಇಬ್ಬರು ಒಬ್ಬರಿಗೊಬ್ಬರು ಗೌರವ, ಪ್ರೀತಿ, ಕಾಳಜಿ ನೀಡಬೇಕಾಗುತ್ತದೆ. ಆದರೆ ವಯಸ್ಸಿನ ಅಂತರ ಹೆಚ್ಚಾಗಿದ್ದಲ್ಲಿ, ಆ ಗೌರವ, ಕಾಳಜಿ, ಪ್ರೀತಿ ಸಿಗುವುದಿಲ್ಲ. ಅಲ್ಲದೇ, ದೈಹಿಕ ಸುಖವೂ ಮುಖ್ಯವಾಗಿರುವ ಕಾರಣ, ಆ ಸಂದರ್ಭದಲ್ಲಿಯೂ ನಿರಾಸೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪತಿ ಪತ್ನಿ ಮಧ್ಯೆ ಹೆಚ್ಚು ವಯಸ್ಸಿನ ಅಂತರವಿರಬಾರದು ಅಂತಾರೆ ಚಾಣಕ್ಯರು.

- Advertisement -

Latest Posts

Don't Miss