Sunday, November 16, 2025

Latest Posts

ಎಲ್ಲದಕ್ಕೂ ಸಿನಿಮಾ ದೂಷಿಸಿದರೇ ಹೇಗೆ? ಸಿನಿಮಾ ಕೇವಲ ಮನರಂಜನಾ ಮಾಧ್ಯಮ: ಡಾ.ಶಿವರಾಜ್‌ಕುಮಾರ್

- Advertisement -

Dharwad News: ಧಾರವಾಡ: ಇಂದು ಭೈರತಿ ರಣಗಲ್ ಸಿನಿಮಾ ಪ್ರಮೋಷನ್ ಸಲುವಾಗಿ ಹುಬ್ಬಳ್ಳಿ- ಧಾರವಾಡಕ್ಕೆ ಬಂದಿದ್ದ ಡಾ.ಶಿವರಾಜ್‌ಕುಮಾರ್, ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿದ್ದರು.

ಬಳಿಕ ಮಾತನಾಡಿದ ಶಿವರಾಜ್‌ಕುಮಾರ್, ಇದರ ಬಗ್ಗೆ ಜಾಗೃತಿ ಮೂಡಿಸೋಕೆ ನಾನು ಬಂದಿರುವೆ. ಹು-ಧಾ ಪೊಲೀಸ್ ಆಯುಕ್ತರು ಕೇಳಿಕೊಂಡಿದ್ದರು. ಹೀಗಾಗಿ ನಾನೂ ಈ ಜಾಗೃತಿಯಲ್ಲಿ ಭಾಗಿಯಾಗಿದ್ದೇನೆ. ಇಂತಹ ಅಭಿಯಾನಕ್ಕೆ ಬೆಂಬಲ ಕೊಡುವೆ. ಮಾದಕ ವಸ್ತು ವಿರೋಧಿಗಾಗಿ ಜಾಥಾ ಮಾಡಬೇಕು. ಇಲ್ಲಿ ಯಾವುದೇ ಜಾಥಾ ಮಾಡಿದರೆ ನಾನು ಭಾಗಿಯಾಗುವೆ. ಇಂತಹ ಅಭಿಯಾನಗಳಿಗೆ ಸಿನಿಮಾ ನಟರು ಬರಬೇಕು. ಮಾದಕ ವಸ್ತುಗಳು ಇರಲೇಬಾರದು. ಸಿನಿಮಾದಿಂದಲೇ ಯುವಪೀಳಿಗೆ ದಾರಿ ಬಿಡುತ್ತದೆ ಎನ್ನುವುದು ತಪ್ಪು. ಎಲ್ಲದಕ್ಕೂ ಸಿನಿಮಾ ದೂಷಿಸಿದರೇ ಹೇಗೆ? ಸಿನಿಮಾ ಕೇವಲ ಮನರಂಜನಾ ಮಾಧ್ಯಮ. ಸಿನಿಮಾದಲ್ಲಿಯೂ ಸಂದೇಶ ಕೊಡುತ್ತೇವೆ ಎಂದು ಡಾ.ಶಿವರಾಜ್‌ಕುಮಾರ್ ಹೇಳಿದರು.

ಭೈರತಿ ರಣಗಲ್‌ಗೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ಇದೆ. ಒಳ್ಳೆ ಸಿನಿಮಾ ಜನ ಬೆಂಬಲಿಸಿದ್ದಾರೆ. ಇತ್ತೀಚೆಗೆ ಚಿತ್ರಮಂದಿರಕ್ಕೆ ಜನ ಬರೋದು ಕಡಿಮೆಯಾಗಿತ್ತು. ಈಗ 3-4 ಸಿನಿಮಾಗಳಿಂದ ಜನ ಬರುತ್ತಿದ್ದಾರೆ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

- Advertisement -

Latest Posts

Don't Miss