ಬೇಕಾಗುವ ಸಾಮಗ್ರಿ: ನಾಲ್ಕು ಕಪ್ ಸಕ್ಕರೆ, ನಾಲ್ಕು ಕಪ್ ನೀರು, 250 ಗ್ರಾಂ ಖೋಯಾ, 100 ಗ್ರಾಂ ಪನೀರ್ ತುರಿ, ಕಾಲು ಕಪ್ ಮೈದಾ, ಅವಶ್ಯಕತೆ ಇದ್ದಲ್ಲಿ 1 ಸ್ಪೂನ್ ಬೇಕಿಂಗ್ ಪೌಡರ್ ಬಳಸಬಹುದು.
ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ಸಕ್ಕರೆ ಮತ್ತು ನೀರು ಸೇರಿಸಿ, ಪಾಕ ತಯಾರಿಸಿಕೊಳ್ಳಿ. ಪಾಕ ಹೆಚ್ಚು ಗಟ್ಟಿಯಾಗಲೂಬಾರದು, ಹೆಚ್ಚು ತೆಳುವಾಗಲೂಬಾರದು. ಸಕ್ಕರೆ ಪಾಕ ತಯಾರಾದ ಬಳಿಕ, ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಕೇಸರಿ ದಳವಿದ್ದರೆ, ಅದನ್ನೂ ಬಳಸಬಹುದು.
ಈಗ ಒಂದು ಅಗಲದ ಪ್ಲೇಟ್ ಅಥವಾ ಹರಿವಾಣ ತೆಗೆದುಕೊಂಡು ಖೋಯಾವನ್ನು ಹಾಕಿ, ಚೆನ್ನಾಗಿ ನಾದಿಕೊಳ್ಳಿ. ಚಪಾತಿ ಹಿಟ್ಟು ನಾದಿದ ಹಾಗೆ ಖೋಯಾವನ್ನು ನಾದಿಕೊಳ್ಳಬೇಕು. ಬಳಿಕ ತುರಿದ ಪನೀರ್ ಸೇರಿಸಿಕೊಳ್ಳಿ. ಬಳಿಕ ಕೊಂಚ ಕೊಂಚ ಮೈದಾವನ್ನು ಸೇರಿಸಿ, ಚೆನ್ನಾಗಿ ನಾದಿ. ಗುಲಾಬ್ ಜಾಮೂನ್ ಮಾಡುವಾಗ ಹಿಟ್ಟು ಸಾಫ್ಟ್ ಆಗುವುದು ಮುಖ್ಯ. ಹಾಗಾಗಿ ಕೊಂಚ ಹಾಲು ಸೇರಿಸಿಕೊಳ್ಳಬಹುದು.
ಈಗ ಈ ಹಿಟ್ಟಿನಿಂದ ಉಂಡೆಯ ರೀತಿ ಶೇಪ್ ಕೊಟ್ಟು, ಎಣ್ಣೆಯಲ್ಲಿ ಕರಿಯಿರಿ. ನಂತರ ಸಕ್ಕರೆ ಪಾಕಕ್ಕೆ ಹಾಕಿ 5ರಿಂದ 6 ಗಂಟೆ ನೆನೆಸಿಡಿ. ಬಳಿಕ ಸಾಫ್ಟ್ ಆಗಿರುವ ಗುಲಾಬ್ ಜಾಮೂನ್ ರೆಡಿ.