Thursday, December 5, 2024

Latest Posts

ಕ್ಯಾನ್ಸರ್ ಇದೆ, ವಿಚಾರಣೆಗೆ ಬರಲು ಸಾಧ್ಯವಿಲ್ಲವೆಂದು ಪೊಲೀಸರಿಗೆ ಪತ್ರ ಬರೆದ ಚಂದ್ರಶೇಖರ ಸ್ವಾಮೀಜಿ

- Advertisement -

Bengaluru News: ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಒಕ್ಕಲಿಗ ಮಹಾ ಸಂಸ್ಥಾನದ ಚಂದ್ರಶೇಖರನಾಥ ಸ್ವಾಮೀಜಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೀಗಾಗಿ ಸ್ವಾಮೀಜಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಆದರೆ ಸ್ವಾಮೀಜಿಗಳು, ತಮಗೆ ಕ್ಯಾನ್ಸರ್ ಇದೆ, ಈಗ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲವೆಂದು ಪತ್ರ ಬರೆದಿದ್ದಾರೆ.

ಪೊಲೀಸರಿಗೆ ಬರೆದ ಪತ್ರದಲ್ಲಿ, ನಾನು ಮಾರಕ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದೇನೆ. ವೈದ್ಯರು ನನಗೆ ಹತ್ತು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಡಿಸೆಂಬರ್ 18ರಂದು ವಿಚಾರಣೆಗೆ ಬರುತ್ತೇನೆ. ಅಲ್ಲಿಯತನಕ ಬರಲು ಸಾಧ್ಯವಿಲ್ಲ. ಅಷ್ಟರೊಳಗೆ ವಿಚಾರಣೆ ನಡೆಸಲೇಬೇಕು ಎಂದಲ್ಲಿ, ನೀವು ಮಠಕ್ಕೆ ಬರಬಹುದು. ಮಠಕ್ಕೆ ಬಂದು ನನ್ನ ಹೇಳಿಕೆ ಪಡೆಯಬಹುದು ಎಂದು ಹೇಳಿದ್ದಾರೆ.

ಇನ್ನು ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಿಸಲು ಕಾರಣವೇನು ಎಂದರೆ, ಸ್ವಾಮೀಜಿ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನದಲ್ಲಿ ಬೇರೆಯವರಿಗೆ ಓಟ್ ಹಾಕಲು ಅವಕಾಶವಿಲ್ಲ. ಅದೇ ರೀತಿ ಭಾರದಲ್ಲಿ ಮುಸ್ಲಿಂಮರಿಗೆ ಓಟ್ ಹಾಕುವ ಅವಕಾಶ ಕೊಡಬಾರದು. ವಕ್ಫ್ ಅನ್ನುವುದನ್ನೇ ತೆಗೆದು ಹಾಕಬೇಕು. ಅವರು ಅವರಷ್ಟಕ್ಕೆ ಇದ್ದರೆ, ನಮ್ಮ ದೇಶ ಚೆನ್ನಾಗಿರುತ್ತದೆ. ನಾವೆಲ್ಲರೂ ನೆಮ್ಮದಿಯಾಗಿ ಇರಬಹುದು ಎಂದು ಹೇಳಿದ್ದರು.

ಈ ಹೇಳಿಕೆ ವಿರೋಧಿಸಿ, ಸಯ್ಯದ್ ಅಬ್ಬಾಸ್ ಎಂಬುವವರು ಶ್ರೀಗಳ ವಿರುದ್ಧ ದೂರು ನೀಡಿದ್ದರು. ಇವರ ದೂರನ್ನು ಆಧರಿಸಿ, ಶ್ರೀಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.

- Advertisement -

Latest Posts

Don't Miss