- Advertisement -
ಬೇಕಾಗುವ ಸಾಮಗ್ರಿ: ಒಂದು ಕಪ್ ಮೈದಾ, ಕಾಲು ಕಪ್ ತುಪ್ಪ, ಖಾರದ ಪುಡಿ, ವೋಮ, ಉಪ್ಪು, ಪೆರಿ ಪೆರಿ ಪೌಡರ್, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಮೈದಾ, ತುಪ್ಪ ಮತ್ತು ಉಪ್ಪು, ಖಾರದ ಪುಡಿ, ನೀರು ಹಾಕಿ, ಚಪಾತಿ ಹಿಟ್ಟಿದ ಹದಕ್ಕೆ ಕಲಿಸಿಕೊಳ್ಳಿ. ಬಳಿಕ ಚೌಕಾಕಾರದ ಚಿಪ್ಸ್ ಶೇಪ್‌ನಲ್ಲಿ ಕತ್ತರಿಸಿ, ಅದರ ಮೇಲೆ ಫೋರ್ಕ್‌ನಿಂದ ಚುಕ್ಕೆ ಮಾಡಿ. ಇದರಿಂದ ಚಿಪ್ಸ್ ಉಬ್ಬುವುದಿಲ್ಲ.
ಬಳಿಕ ಎಣ್ಣೆಯಲ್ಲಿ ತಿಳಿ ಕಂದುಬಣ್ಣ ಬರುವವರೆಗೂ ಕರಿಯಿರಿ. ಇದರ ಮೇಲೆ ಪೆರಿ ಪೆರಿ ಮಸಾಲೆ ಹಾಕಿ ಮಿಕ್ಸ್ ಮಾಡಿದರೆ, ಪೆರಿ ಪೆರಿ ಚಿಪ್ಸ್ ರೆಡಿ. ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್ ತರುವ ಬದಲು, ಟೀ ಟೈಮ್‌ಗೆ ಇಂಥ ತಿಂಡಿ ಮಾಡಿ ಸವಿಯಬಹುದು.
- Advertisement -