Thursday, December 5, 2024

Latest Posts

ಪುರುಷರಲ್ಲಿ ಈ ಗುಣವಿದ್ದರೆ ಮಹಿಳೆಯರು ಬೇಗ ಆಕರ್ಷಿತರಾಗುತ್ತಾರೆ

- Advertisement -

Spiritual: ಕೆಲವು ಪುರುಷರ ಪ್ರಕಾರ ತಾವು ಕಾಣಲು ಸುಂದರವಾಗಿದ್ದರೆ, ಸ್ಟೈಲ್ ಮಾಡಿದರೆ, ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಹ್ಯಾಂಡ್ಸಮ್ ಆಗಿ ಡ್ರೆಸ್ ಮಾಡಿಕೊಂಡರೆ, ಆಕರ್ಷಿತರಾಗುತ್ತಾರೆ ಎಂದು ತಪ್ಪು ತಿಳಿದಿದ್ದಾರೆ. ಆದರೆ ಹೆಣ್ಣು ಮಕ್ಕಳು ನಿಮ್ಮ ಬಟ್ಟೆ, ಸ್ಟೈಲ್, ಸ್ಮೈಲ್ ನೋದಿ ಫಿದಾ ಆಗೋದಿಲ್ಲ. ಬದಲಾಗಿ ನಿಮ್ಮಲ್ಲಿರುವ ಕೆಲ ಗುಣಗಳಿಂದ ಆಕರ್ಷಿತರಾಗುತ್ತಾರೆ. ಆ ಗುಣಗಳು ಯಾವುದು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಶಾಂತ ಸ್ವಭಾವ. ಹೆಣ್ಣು ಮಕ್ಕಳನ್ನು ಕಂಡರೆ, ಪೆದ್ದು ಪೆದ್ದಾಗಿ ಆಡುವುದು, ನಗುವುದು. ತಮಾಷೆ ಮಾಡುವುದು. ಇಂಥ ಗುಣವಿರುವ ವ್ಯಕ್ತಿಯನ್ನು ಹೆಣ್ಣು ಮಕ್ಕಳು ಇಷ್ಟಪಡುವುದಿಲ್ಲ. ಹೆಣ್ಣು ಮಕ್ಕಳಿಗೆ ಶಾಂತ ಸ್ವಭಾವದ ಗಂಭೀರವಾಗಿರುವ ಪುರುಷರನ್ನು ಕಂಡರೆ ಇಷ್ಟವಾಗುತ್ತದೆ. ಹಾಗಾಗಿ ಸುಂದರ ಹೆಣ್ಣು ಮಕ್ಕಳನ್ನು ಕಂಡು, ತಮ್ಮ ಮನಸ್ಥಿತಿಯನ್ನು ಕಂಟ್ರೋಲಿನಲ್ಲಿ ಇರಿಸಿ, ಶಾಂತವಾಗಿ, ಗಂಭೀರವಾಗಿರುವವರೇ ಹೆಚ್ಚು ಆಕರ್ಷಿತರಾಗಿ ಕಾಣುತ್ತಾರೆ.

ಪ್ರಾಮಾಣಿಕತೆ. ಎಲ್ಲ ಹೆಣ್ಣು ಮಕ್ಕಳನ್ನು ನೋಡುವುದು, ನೋಡಿದ ಹೆಣ್ಣು ಮಕ್ಕಳನ್ನೆಲ್ಲ ಇಷ್ಟಪಡುವುದು, ಇಷ್ಟ ಪಟ್ಟವರಿಗೆಲ್ಲರಿಗೂ ಪ್ರಪೋಸ್ ಮಾಡುವುದು. ಇಂಥ ಪುರುಷರನ್ನು ಕಂಡರೆ, ಯಾವ ಹಣ್ಣು ಮಕ್ಕಳಿಗೂ ಇಷ್ಟವಾಗುವುದಿಲ್ಲ. ಏಕೆಂದರೆ, ಮುಂದೊಂದು ದಿನ ವಿವಾಹದ ಬಳಿಕವೂ, ಈ ಕೆಟ್ಟ ಸ್ವಭಾವ ಮುಂದುವರಿಯುತ್ತದೆ ಎಂಬುದು ಹೆಣ್ಣು ಮಕ್ಕಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಪ್ರಾಮಾಣಿಕವಾಗಿರುವ ಪುರುಷರನ್ನಷ್ಟೇ ಹೆಣ್ಣು ಮಕ್ಕಳು ಇಷ್ಟಪಡುತ್ತಾರೆ.

ಹೆಣ್ಣು ಮಕ್ಕಳಿಗೆ, ಅವರ ಮಾತಿಗೆ ಗೌರವ ನೀಡುವುದು. ಯಾವ ಪುರುಷ ಮನೆಯಲ್ಲಿರುವ ತಾಯಿ, ತಂಗಿ, ಅಕ್ಕನಿಗೆ, ಅವರ ಮಾತಿಗೆ ಗೌರವ ನೀಡುತ್ತಾರೋ, ಅಂಥ ಪುರುಷರು ಮುಂದೆ ಪತ್ನಿಯ ಮಾತಿಗೂ ಅಷ್ಟೇ ಗೌರವ ನೀಡುತ್ತಾರೆ. ಹಾಗಾಗಿ ಹೆಣ್ಣು ಮಕ್ಕಳಿಗೆ, ಅವರ ಮಾತಿಗೆ ಗೌರವ ನೀಡುವ, ಶಾಂತವಾಗಿ ಅವರ ಮಾತನ್ನು ಕೇಳಿಸಿಕೊಳ್ಳುವ ಪುರುಷರೇ ಇಷ್ಟವಾಗೋದು.

ಉತ್ತಮ ವ್ಯಕ್ತಿತ್ವ. ವಿವಾಹವಾದ ಬಳಿಕ ಜೀವನ ಎಂಜಾಯ್ ಮಾಡುವುದಷ್ಟೇ ಅಲ್ಲ, ನಮ್ಮ ನಮ್ಮ ಜವಾಬ್ದಾರಿ ನಿಭಾಯಿಸುವ ಅರ್ಹತೆ ನಮಗಿರಬೇಕು. ಅಂಥ ಅರ್ಹತೆ ಇರುವ ವ್ಯಕ್ತಿಯನ್ನು ಪ್ರತೀ ಹೆಣ್ಣೂ ಮೆಚ್ಚುತ್ತಾಳೆ. ಅಲ್ಲದೇ, ಜವಾಬ್ದಾರಿ ಇರುವ ಪತಿ ಇರುವ ಮಹಿಳೆ ಸದಾ ಖುಷಿ ಖುಷಿಯಾಗಿರುತ್ತಾಳೆ.

- Advertisement -

Latest Posts

Don't Miss