ಯಾರಿಗಾದ್ರೂ ಗಿಫ್ಟ್ ಕೊಡೊದಿದ್ರೆ ಬಟ್ಟೆ, ವಾಚ್, ಬಳೆ, ಸರ, ಬುಕ್, ಪೆನ್, ರಿಂಗ್, ಹೂವಿನ ಬೊಕ್ಕೆ, ಇತ್ಯಾದಿ ಇತ್ಯಾದಿ ಕೊಡುವುದು ಹಳೆಯದಾಗಿ ಹೋಯ್ತು. ಈಗೇನಿದ್ರೂ ಕೀಬಂಚ್, ಪಿಲ್ಲೋ, ಟೀ ಮಗ್, ಟೀ ಶರ್ಟ್ ಕೊಡೊದು ಟ್ರೆಂಡ್ ಆಗಿದೆ.
ಅರೇ ಇದೇನಪ್ಪ ಕೀಬಂಚ್, ಪಿಲ್ಲೋ, ಟೀ ಮಗ್, ಟೀ ಶರ್ಟ್ ಅಂಥಾ ವಿಶೇಷತೆ ಏನಿದೆ ಅಂದ್ರಾ. ಹೌದು ವಿಶೇಷತೆ ಇರೋದೇ ಇದ್ರಲ್ಲಿ. ನೀವು ಯಾರಿಗೆ ಈ ಗಿಫ್ಟ್ ನೀಡಲಿದ್ದೀರೋ ಅವರ ಫೋಟೋವನ್ನ ನೀವು ಕೀಬಂಚ್, ಪಿಲ್ಲೋ, ಮಗ್, ಟೀ ಶರ್ಟ್‌ನಲ್ಲಿ ಪ್ರಿಂಟ್ ಮಾಡಿಸಬಹುದು.
ಇಂಥಹ ಗಿಫ್ಟ್ ಕೊಡೋದಷ್ಟೇ ಅಲ್ಲ. ನೀವು ಕೂಡ ಇಂಥದ್ದೊಂದು ಉದ್ಯಮವನ್ನ ಶುರು ಮಾಡಬಹುದು. ಅದ್ರಲ್ಲೂ ಇಂಥ ಗಿಫ್ಟ್‌ಗಳು ಈಗ ಟ್ರೆಂಡ್ ಆಗಿರೋದ್ರಿಂದ ಈ ಉದ್ಯಮ ಮಾಡಿದ್ರೆ ಒಳ್ಳೆ ಪ್ರಾಫಿಟ್ ಮಾಡಬಹುದು. ಈ ಉದ್ಯಮ ಮಾಡೋಕ್ಕೆ ಒಂದು ಮಷಿನ್ ಅವಶ್ಯಕತೆ ಇದೆ. ಆ ಬಗ್ಗೆ ತಿಳಿಯೋಣ ಬನ್ನಿ.
25 ಸಾವಿರದಿಂದ 35 ಸಾವಿರದವರೆಗೆ ಈ ಮಷಿನ್ ಆನ್‌ಲೈನ್ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಈ ಒಂದೇ ಮಷಿನ್ ಉಪಯೋಗಿಸಿ ನೀವು ಕೀಬಂಚ್, ಪಿಲ್ಲೋ, ಟೀ ಮಗ್, ಟೀ ಶರ್ಟ್, ಮೌಸ್ ಪ್ಯಾಡ್, ಬೆಡ್ ಶೀಟ್, ವಾಲ್‌ಕ್ಲಾಕ್, ಸ್ಮೈಲಿ ಪಿನ್ಸ್, ಫೋಟೋ ಫ್ರೇಮ್ ಡಿಸೈನ್ ಮಾಡಬಹುದು.
ಮಷಿನ್ ಜೊತೆ ಕೆಲ ಟೂಲ್ಸ್‌ಗಳನ್ನ ಕೂಡ ನೀಡಲಾಗುತ್ತದೆ. ಅಲ್ಲದೇ ಇದನ್ನ ಬಳಸುವ ರೀತಿ ಕೂಡ ಅದರಲ್ಲಿ ನೀಡಲಾಗುತ್ತದೆ. ಬಳಸುವ ರೀತಿ ಕಲಿತು ನೀವು ಈ ಉದ್ಯಮ ಶುರು ಮಾಡಬಹುದು. ಗಿಫ್ಟ್ ಸೆಂಟರ್, ಮಾಲ್, ಅಥವಾ ಆನ್‌ಲೈನ್ ಮೂಲಕ ಈ ಪ್ರಾಡಕ್ಟ್ ಮಾಡಿ ಮಾರಬಹುದು.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.