Health Tips: ನೀವು ಹೊಟೇಲ್‌ಗೆ ಹೋದಾಗ, ಅಥವಾ ಯಾವುದೇ ಸಮಾರಂಭಗಳಿಗೆ ಹೋದಾಗ, ಅಲ್ಲಿ ಊಟವಾದ ಬಳಿಕ, ನಿಮಗೆ ತಿನ್ನಲು ಸೋಂಪು ನೀಡಲಾಗುತ್ತದೆ. ಹಾಗಾದ್ರೆ ಯಾಕೆ ಹೊಟ್ಟೆ ತುಂಬ ಊಟವಾದ ಬಳಿಕ ನಾವು ಸೋಂಪಿನ ಸೇವನೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ಸೋಂಪಿನ ಸೇವನೆ ಮಾಡುವುದರಿಂದ ಕಣ್ಣಿನ ಮತ್ತು ಲಿವರ್ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ ಊಟವಾದ ಬಳಿಕ ಸೋಂಪು ಸೇವಿಸುವುದರಿಂದ ನಾವು ತಿಂದ ಆಹಾರ ಜೀರ್ಣವಾಗುತ್ತದೆ. ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ.
ಇನ್ನು ನೀವು ಮುಟ್ಟಿನ ಹೊಟ್ಟೆನೋವಿನಿಂದ ಬಳಲುತ್ತಿದ್ದರೆ, ಒಂದು ಗ್ಲಾಸ್ ನೀರಿಗೆ, 1 ಸ್ಪೂನ್ ಸೋಂಪು ಹಾಕಿ, ಅದನ್ನು ಅರ್ಧ ಲೋಟ ಆಗುವಷ್ಚು ಕುದಿಸಿ, ಕಶಾಯ ಮಾಡಿ, ತಣಿಸಿ ಮುಟ್ಟಿನ ಸಮಯದಲ್ಲಿ ಕುಡಿದರೆ, ಹೊಟ್ಟೆ ನೋವು ಮಾಯವಾಗುತ್ತದೆ.
ಇನ್ನು ನಿಮಗೆ ಪ್ರತೀ ತಿಂಗಳು ಸರಿಯಾಗಿ ಮುಟ್ಟಾಗುತ್ತಿಲ್ಲವೆಂದಲ್ಲಿ, ನೀವು ಸೋಂಪಿನೊಂದಿಗೆ ಬೆಲ್ಲವನ್ನು ಮಿಕ್ಸ್ ಮಾಡಿ, ಸೇವಿಸಿ. ಕೊಂಚ ಬೆಲ್ಲ ಮತ್ತು ಕೊಂಚ ಸೋಂಪು ಸೇರಿಸಿ ತಿನ್ನಿ. ಇದರಿಂದ ಪ್ರತೀ ತಿಂಗಳು ಸಮಯಕ್ಕೆ ಸರಿಯಾಗಿ ಮುಟ್ಟಾಗುತ್ತದೆ.
ಅಸ್ತಮಾ ಮತ್ತು ಕೆಮ್ಮಿನ ಸಮಸ್ಯೆ ಇದ್ದಲ್ಲಿ, ಸೋಂಪಿನ ಸೇವನೆ ಮಾಡಿದ್ದಲ್ಲಿ, ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇನ್ನು ಪುಟ್ಟ ಶಿಶುಗಳು 1 ವಾರ ಕಳೆದೂ ಮಲ ವಿಸರ್ಜನೆ ಮಾಡುವುದಿಲ್ಲ. ಆಗ ಸೋಂಪಿನ ಕಶಾಯ ಮಾಡಿ, 2 ಸ್ಪೂನ್ ಕುಡಿಸಿದರೆ ಸಾಕು, ಮಕ್ಕಳ ಹೊಟ್ಟೆ ಕ್ಲೀನ್ ಆಗುತ್ತದೆ. ಆದರೆ ಈ ಬಗ್ಗೆ ಒಮ್ಮೆ ವೈದ್ಯರಲ್ಲಿ ವಿಚಾರಿಸುವುದು ಉತ್ತಮ.