Health Tips: ಈ ಮೊದಲ ಭಾಗದಲ್ಲಿ ನಾವು ಮೊಸರಿನ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳು ಏನು ಅನ್ನೋ ಬಗ್ಗೆ ಹೇಳಿದ್ದೆವು. ಇದೀಗ ಮೊಸರಿನ ಸೇವನೆ ಯಾವಾಗ ಮಾಡಬಾರದು..? ಮೊಸರು ಸೇವಿಸುವಾಗ ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.
ಮೊದಲನೇಯದಾಗಿ ಮೊಸರನ್ನು ಸೂರ್ಯಾಸ್ತದ ಬಳಿಕ ಸೇವಿಸಬಾರದು. ಏಕೆಂದರೆ ಇದು ಉಷ್ಣ ಮತ್ತು ತಂಪು ಎರಡೂ ಮಿಶ್ರವಿರುವ ಪದಾರ್ಥ. ಗಟ್ಟಿ ಮೊಸರು ದೇಹಕ್ಕೆ ಉಷ್ಣತೆ ನೀಡಿದರೆ, ನೀರು ಸೇರಿಸಿದಾಗ ಇದು ದೇಹವನ್ನು ತಂಪು ಮಾಡುತ್ತದೆ. ಆದ್ದರಿಂದ ಇದನ್ನು ಸೂರ್ಯನಿರುವ ವೇಳೆಯಲ್ಲೇ ಸೇವಿಸಬೇಕು. ಅಂದರೆ, ಬೆಳಿಗ್ಗೆ ಮತ್ತು ಮಧ್ಯಾಹ್ನ ಮೊಸರಿನ ಸೇವನೆ ಮಾಡುವುದು ಉತ್ತಮ. ಆಯುರ್ವೇದದ ಪ್ರಕಾರ, ರಾತ್ರಿ ಮೊಸರು ತಿನ್ನುವುದರಿಂದ ಕಫದೋಶ ಉಂಟಾಗುತ್ತದೆ.
ಇನ್ನು ಎರಡನೇಯದಾಗಿ ನೀವು ಹಾಲು ಕುಡಿಯುತ್ತಿದ್ದರೆ, ಅಥವಾ ಟೀ, ಕಾಫಿ ಸೇವಿಸುತ್ತಿದ್ದರೆ, ಅಂಥ ವೇಳೆ ಮೊಸರು ತಿನ್ನಬೇಡಿ. ಅದರಲ್ಲೂ ಹಾಲು ಕುಡಿಯುವಾಗ ಮೊಸರು ತಿನ್ನಬಾರದು. ಇದರಿಂದ ದೇಹದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಮೊಸರಿಗೆ ಉಪ್ಪು ಸೇರಿಸಿ ತಿನ್ನಬಾರದು. ಏಕೆಂದರೆ, ಮೊಸರಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾ ಇರುತ್ತದೆ. ಅದು ನಮ್ಮ ದೇಹಕ್ಕೆ ಜೀವಂತವಾಗಿ ಹೋಗಬೇಕು. ಹಾಗಾಗಬೇಕು ಅಂದ್ರೆ ಮೊಸರಿಗೆ ಉಪ್ಪು ಹಾಕಬಾರದು. ಮೊಸರಿಗೆ ಉಪ್ಪು ಹಾಕಿದರೆ, ಆ ಬ್ಯಾಕ್ಟೀರಿಯಾಗಳು ಹಾಳಾಗುತ್ತದೆ. ಇದರಿಂದ ಮೊಸರು ತಿಂದರೂ ಏನೂ ಪ್ರಯೋಜನವಾಗುವುದಿಲ್ಲ.