Friday, December 13, 2024

Latest Posts

Horoscope: ಆತ್ಮವಿಶ್ವಾಸ ಕಡಿಮೆ ಇರುವ ರಾಶಿಯವರು ಇವರು

- Advertisement -

Horoscope: ಆತ್ಮವಿಶ್ವಾಸ ಪ್ರತೀ ಸಮಯದಲ್ಲೂ ಇರಬೇಕಾದ ಅಸ್ತ್ರ. ಆದರೆ ಕೆಲವು ರಾಶಿಗಳಲ್‌ಲಿ ಇದರ ಅಭಾವವಿರುತ್ತದೆ. ಅವರು ಧೈರ್ಯದಿಂದ ಮುನ್ನುಗ್ಗುವ ಸಾಹಸ ಮಾಡುವುದು ಕಡಿಮೆ. ಹಾಗಾದ್ರೆ ಯಾವುದು ಅಂಥ ರಾಶಿ ಅಂತಾ ತಿಳಿಯೋಣ ಬನ್ನಿ.

ಕಟಕ ರಾಶಿ: ಕಟಕ ರಾಶಿಯವರಿಗೆ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಇವರು ತಮ್ಮ ಅಗತ್ಯತೆಗಳಿಗಿಂತ, ಇನ್ನೊಬ್ಬರ ಖುಷಿ ಬಯಸುತ್ತಾರೆ. ಹೀಗಾಗಿಯೇ ಅನೇಕ ಅವಕಾಶಗಳನ್ನು, ಖುಷಿಯಾಗಿರುವ ಕ್ಷಣಗಳನ್ನು ಇವರು ಮಿಸ್ ಮಾಡಿಕೊಳ್ಳುತ್ತಾರೆ. ವಿಪರ್ಯಾಸದ ಸಂಗತಿ ಏನೆಂದರೆ, ಇನ್ನೊಬ್ಬರ ಕಷ್ಟಕ್ಕೆ ಸದಾ ಸ್ಪಂದಿಸುವ ಇವರಿಗೆ ಬೆಲೆ ಸಿಗುವುದು ಕಡಿಮೆ.

ತುಲಾ ರಾಶಿ: ತುಲಾ ರಾಶಿಯವರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹೆಚ್ಚು ಇಷ್ಟಪಡೋದಿಲ್ಲ. ಎಲ್ಲ ಕೆಲಸವೂ ಸರಾಗವಾಗಿ ನಡೆಯಬೇಕು. ಕಷ್ಟ ಬಂದರೆ, ಕಂಗಾಲಾಗಿ ಹೋಗುತ್ತಾರೆ. ಹೀಗಾಗಿ ಇವರಿಗೆ ಆತ್ಮವಿಶ್ವಾಸ ಕಡಿಮೆ ಎನ್ನಬಹುದು.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಆದರೆ ಜೀವನದಲ್ಲಿ ಎಲ್ಲರೂ ಎಲ್ಲ ಕೆಲಸದಲ್ಲಿ ಪರ್ಫೆಕ್ಟ್ ಆಗಿರಲು ಸಾಧ್ಯವಿಲ್ಲ. ಖುದ್ದು ಕನ್ಯಾ ರಾಶಿಯವರೇ ಪರ್ಫೆಕ್ಟ್ ಆಗಿರುವುದಿಲ್ಲ. ಹೀಗಾಗಿ ಎದುರಿನವರು ಇವರಿಗಿಂತ ಸ್ವಲ್ಪ ಪರ್ಫೆಕ್ಟ್ ಎಂದು ಗೊತ್ತಾದರೂ, ಆತ್ಮವಿಶ್ವಾಸ ಕಳೆದುಕೊಂಡು ಬಿಡುತ್ತಾರೆ.

ಮೀನ ರಾಶಿ: ಮೀನ ರಾಶಿಯವರು ಶಾಂತ ಸ್ವಭಾವದವರು. ಯಾರ ಸುದ್ದಿಗೂ ಹೋಗಲು ಇಚ್ಛಿಸುವುದಿಲ್ಲ. ಹಾಗಾಗಿ ಇವರಿಗೆ ಆತ್ಮವಿಶ್ವಾಸ ಕಡಿಮೆ. ಸೂಕ್ಷ್ಮ ಮನಸ್ಸು ಹೊಂದಿದವರು. ಹೆಚ್ಚು ಭಾವನಾತ್ಮಕ ಜೀವಿಗಳು. ಹಾಗಾಗಿ ಧೈರ್ಯವಾಗಿ ಮುನ್ನುಗ್ಗುವ ಸ್ವಭಾವ ಕಡಿಮೆ ಎನ್ನಬಹುದು.

- Advertisement -

Latest Posts

Don't Miss