ಪಂಚಮಸಾಲಿ ಸಮುದಾಯದವರ ಮೇಲೆ ಹಲ್ಲೆ: ಗದಗದಲ್ಲಿ ಪ್ರತಿಭಟನೆ: ಹೋರಾಟದ ವೇಳೆ ಎಡವಟ್ಟು

Gadag News: ಗದಗ: ಗದಗದಲ್ಲಿ ಪಂಚಮಸಾಲಿ ಹೋರಾಟ ಮುಂದುವರೆದಿದ್ದು, ಮೀಸಲಾತಿಗಾಗಿ ಆಗ್ರಹಿಸಿ, ಸುವರ್ಣ ಸೌಧ ಮುತ್ತಿಗೆ ಹಾಕುವ ವೇಳೆ ಪಂಚಮಸಾಲಿಗಳ ಮೇಲೆ ಲಾಠಿಚಾರ್ಜ್ ಹಾಗೂ ಸರ್ಕಾರ ದೌರ್ಜನ್ಯ ಖಂಡಿಸಿ ಧರಣಿ ನಡೆಸಲಾಯಿತು.

ಗದಗನ ಕಾರ್ಯಪ್ಪ ವೃತ್ತದಲ್ಲಿ ಬಹು ಸಂಖ್ಯಾತ ಪಂಚಮಸಾಲಿ ಸಮಾಜದಿಂದ ಧರಣಿ ನಡೆದಿದ್ದು, ಪ್ರತಿಭಟನಾಾಕಾರರು ಪ್ರಮುಖ ರಸ್ತೆಗಳನ್ನು ತಡೆದು ಹೋರಾಟ ನಡೆಸಿದರು. ಹಲ್ಲೆ ಮಾಡಿದ ಸರ್ಕಾರ ಹಾಗೂ ಪೋಲೀಸ್ ಸಿಬ್ಬಂದಿಗಳನ್ನು ವಜಾಮಾಡುವಂತೆ ಒತ್ತಾಯಿಸಿ,  ಕಾರ್ಯಪ್ಪ ಸರ್ಕಲ್‌ನಲ್ಲಿ ಟಾಯರ್ ಬೆಂಕಿ ಹಚ್ಚಿ ಪ್ರತಿಭಟನೆಕಾರರ ಆಕ್ರೋಶ ಹೊರಹಾಕಿದ್ದಾರೆ.

ಈ ವೇಳೆ ಅಲ್ಲೇ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತನ ಮೇಲೆ ಪೆಟ್ರೋಲ್ ಬಿದ್ದು, ಟೈರ್‌ಗೆ ಬೆಂಕಿ ಹಚ್ಚಿದಾಗ, ಕಾರ್ಯಕರ್ತನಿಗೂ ಬೆಂಕಿ ತಗುಲಿದೆ. ಇದಾದ ಬಳಿಕ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಸುಮಾರು 2 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದ್ದಾರೆ.

About The Author