Tuesday, December 17, 2024

Latest Posts

ಕ್ರಾಂತಿ ವೀರ ಬ್ರಿಗೇಡ್ ಧರ್ಮ ರಕ್ಷಣೆಗೆ ಹೋರಾಟ ಮಾಡಲಿದೆ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

- Advertisement -

Hubli News: ಹುಬ್ಬಳ್ಳಿ: ಹಿಂದೂತ್ವವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯದ ವಿವಿಧ ಮಠಾಧೀಶರು ಸೇರಿಕೊಂಡು ಕ್ರಾಂತಿ ವೀರ ಬ್ರಿಗೇಡ್ ರಚನೆ ಮಾಡಲಾಗಿದ್ದು, ಇದೀಗ ಈ ಬ್ರಿಗೇಡ್ ಫೆ.4 ರಂದು ಅಧಿಕೃತವಾಗಿ ಆರಂಭವಾಗಲಿದೆ ಎಂದು ಮಕರಾಪುರದ ಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಮಾಡಿದ ಅವರು, ಕ್ರಾಂತಿ ವೀರ 100 ಮಠಾಧೀಶರು ಸೇರಿಕೊಂಡು ನಾಮಕರಣ ಮಾಡಿದ್ದೇವೆ. ಈ ಬ್ರಿಗೇಡ್ ದೀನ, ದಲಿತರ, ನೊಂದವರ, ಬೆಂದವರಿಗೆ ನ್ಯಾಯ ಒದಗುಸುವ ಸಲುವಾಗಿ ಹುಟ್ಟು ಹಾಲಗಿದೆ. ಈಗಾಗಲೇ 25 ಜನರ ಮಠಾಧೀಶರ ಸಮಿತಿ ರಚಿಸಲಾಗುತ್ತಿದೆ ಎಂದರು.

ಈ ಬ್ರಿಗೇಡ್ ರಚನಾ ಬಳಿಕ ಮೊದಲ ಹೋರಾಟವಾಗಿ ಗುಲಬರ್ಗಾ ಜಿಲ್ಲೆಯ ಆಳಂದ ತಾಲೂಕಿನ ಬೀರೇಶ್ವರ ದೇವಸ್ಥಾನದ ಉತ್ತಾರದಲ್ಲಿ ವಕ್ಪ ಆಸ್ತಿಯಾಗಿ ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ಸ್ವಾಮೀಜಿಗಳು ಹೋರಾಟ ಮಾಡಿ ಪುನಃ ದೇವಸ್ಥಾನಕ್ಕೆ ಭೂಮಿಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಕ್ರಾಂತಿ ವೀರ ಬ್ರಿಗೇಡ್ ಧರ್ಮ ರಕ್ಷಣೆಗೆ ಹೋರಾಟ ಮಾಡಲಿದೆ. ಫೆ.4 ರಂದು ಕ್ರಾಂತಿ ಕಾರಿ ಬ್ರಿಗೇಡ್ ಬಸವನ ಬಾಗೇವಾಡಿಯಲ್ಲಿ ಪ್ರಾರಂಭ ಆಗುತ್ತದೆ.

ಅಂದು 1008 ಮಹಾತ್ಮರ ಪಾದಪೂಜೆ ಮಾಡಿ ಸನ್ಮಾನ ಮಾಡಿ ಈ ಬ್ರಿಗೇಡ್ ಆರಂಭ ಮಾಡಲಾಗುವುದು ಎಂದು ತಿಳಿಸಿದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಮಾಜದಲ್ಲಿ ಯಾರು ತುಳಿತಕ್ಕೆ ಒಳಗಾಗಿದ್ದಾರೆ ಅವರಿಗೆ ನ್ಯಾಯ ಕೊಡಿಸುವ ಕೆಲಸ ಕ್ರಾಂತಿ ವೀರ ಬ್ರಿಗೇಡ್ ದಿಂದ ಆಗಲಿದೆ ಎಂದರು.

ರಾಜ್ಯದ ಸಣ್ಣ ಸಣ್ಣ ಮಠಗಳು ರಾಜ್ಯ ಸರ್ಕಾರದಿಂದ ತಾತ್ಸಾರಕ್ಕೆ ಒಳಗಾಗಿವೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಎರಡು ಬಾರಿ ಮಠಗಳಿಗೆ ಹಣ ಬಿಡುಗಡೆ ಮಾಡಿದ್ದೇವು. ಆದರೆ ಕಾಂಗ್ರೆಸ್ ಈವರೆಗೆ ಒಂದು ಮಠಗಳಿಗೆ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಈ ಬ್ರಿಗೇಡ್ ಮೂಲಕ ಲಕ್ಷಾಂತರ ಮಠಗಳಿವೆ. ನ್ಯಾಯ ಸಿಗಬೇಕು ಎಂಬ ಪ್ರಯತ್ನ ಮಾಡಲಿದೆ ಎಂದರು.

ಬ್ರಿಗೇಡ್ ಮೂಲಕ ದೇವಸ್ಥಾನ ಅಭಿವೃದ್ಧಿಗೆ ಅವಕಾಶ ಮಾಡಿಕೊಡುವ ಕೆಲಸ ಮಾಡಕೊಡಲಾಗುವುದು. ಅರ್ಚಕರ ಮಕ್ಕಳಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಕೆಲಸ ಆಗಲಿದೆ ಎಂದು ತಿಳಿಸಿದರು.

ಬಿಜೆಪಿ ನನ್ನ ತಾಯಿ ಇದ್ದ ಹಾಗೇ, ಹೀಗಾಗಿ ತಾಯಿಯ ಬಗ್ಗೆ ಪ್ರೀತಿ ಇದ್ದೇ ಇರುತ್ತದೆ. ಕಾದು ನೋಡೋಣಾ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾಧುಲಿಂಗ ಮಹಾರಾಜರು, ಶಿವಕುಮಾರ್ ಸ್ವಾಮಿಗಳು, ಕೃಷ್ಣಾನಂದ ಸ್ವಾಮಿಗಳು ಜಗದೀಶಾನಂದ ಸ್ವಾಮೀಜಿ ಸೇರಿದಂತೆ ಇನ್ನಿತರರು ಇದ್ದರು.

- Advertisement -

Latest Posts

Don't Miss