Sandalwood News: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು ಎಲ್ಲರಿಗೂ ಗೊತ್ತು. ದರ್ಶನ್ ಮತ್ತು ಹದಿನಾರು ಮಂದಿ ಜೈಲಿಗೆ ಹೋಗೋಕೆ ಕಾರಣ ಪವಿತ್ರಾಗೌಡ ಅನ್ನೋದು ಆರೋಪ. ಅದೇನೆ ಇದ್ದರೂ ಇದೀಗ ಜಾಮೀನು ಮೇಲೆ ಪವಿತ್ರಾಗೌಡ ಹೊರ ಬಂದಿದ್ದಾರೆ. ಪವಿತ್ರಾ ಗೌಡ ಬಗ್ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದರೂ, ಅವರ ಮಾಜಿ ಪತಿ ಸಂಜಯ್ ಸಿಂಗ್ ಮಾತ್ರ ಪವಿತ್ರಾ ಗೌಡ ಮುಗ್ಧೆ. ಆಕೆ ತಪ್ಪೇ ಮಾಡಿಲ್ಲ. ಅವಳಿಗೆ ಜಾಮೀನು ಸಿಕ್ಕಿದ್ದು ಖುಷಿಯಾಗಿದೆ. ಅವಳಿಗಾಗಿ ಹರಕೆ ಹೊತ್ತಿದ್ದೇನೆ ಅಂತ ಹೇಳಿಕೊಂಡಿದ್ದಾರೆ.
ಸಂಜಯ್ ಸಿಂಗ್ ಪವಿತ್ರಾ ಗೌಡ ಅವರ ಮಾಜಿ ಪತಿ. ಪವಿತ್ರಾ ಗೌಡ ಕೊಲೆ ಆರೋಪ ಮೇಲೆ ಜೈಲು ಸೇರಿದ್ದರು. ಈಗ ಜಾಮೀನು ಮೇಲೆ ಹೊರಬಂದಿದ್ದಾರೆ. ಕಾಕತಾಳೀಯ ಎಂಬಂತೆ ಸಂಜಯ್ ಸಿಂಗ್ ಪವಿತ್ರಾಗೆ ಜಾಮೀನು ಸಿಕ್ಕ ಸಂದರ್ಭವೇ ಬೆಂಗಳೂರಿಗೆ ಬಂದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ.
ಇಷ್ಟಕ್ಕೂ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದೇನು ಅಂತ ನೋಡುವುದಾದರೆ, ಪವಿತ್ರಾ ಗೌಡಗೆ ಜಾಮೀನು ಸಿಕ್ಕಿರುವುದಕ್ಕೆ ಸಂತಸವಾಗಿದೆ. ಮಾಜಿ ಪತ್ನಿ ಸಲುವಾಗಿ ತಾವು ಹರಕೆ ಹೊತ್ತಿರುವುದಾಗಿಯೂ ತಿಳಿಸಿದ್ದಾರೆ. ‘ನಾನು ಬೆಂಗಳೂರಿಗೆ ಬಂದಿದ್ದು ಪವಿತ್ರಾ ಗೌಡ ಮೇಲಿನ ಒಲಿವಿನಿಂದ. ಬೇರೆ ಕೆಲಸದ ಮೇಲೆ ನಾನು ಇಲ್ಲಿಗೆ ಬಂದಿದ್ದೇನೆ. ಆದರೆ ವಿಮಾನ ನಿಲ್ದಾಣಕ್ಕೆ ಬಂದಾಗ, ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ ಎಂಬ ವಿಷಯ ಗೊತ್ತಾಯ್ತು. ಆ ದೇವರೇ ನನ್ನನ್ನು ಈ ಸಮಯದಲ್ಲಿ ಇಲ್ಲಿಗೆ ಕಳಿಸಿರುವುದು ಅನಿಸುತ್ತೆ. ಮಾಜಿ ಪತಿ ಅನ್ನುವುದನ್ನು ಬಿಡಿ, ನಾನು ಪತಿ ಅಲ್ವಾ.. ಹಾಗಾಗಿ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದ್ದಕ್ಕೆ ಸಂತೋಷ ಆಗುತ್ತದೆ. ಹೇಗಾದರೂ ಅವರು ಹೊರಗೆ ಬರಲಿ ಅಂತ ನಾನು ಪ್ರತಿ ದಿನ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಪವಿತ್ರಾ ಗೌಡ ಈ ಕೇಸ್ ನಿಂದ ಶಾಶ್ವತವಾಗಿ ಹೊರಗೆ ಬರಲಿ ಅಂತ ಹರಕೆ ಹೊತ್ತುಕೊಂಡಿದ್ದೇನೆ’ ಎಂದಿದ್ದಾರೆ ಸಂಜಯ್ ಸಿಂಗ್.
ಅಂದಹಾಗೆ, 2007ರ ಜುಲೈ ನಲ್ಲಿ ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಮದುವೆ ಆಗಿತ್ತು. ಈ ಜೋಡಿಗೆ ಹೆಣ್ಣು ಮಗು ಜನಿಸಿತ್ತು. 2013ರ ಆಗಸ್ಟ್ ನಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ‘ಟೈಮಿಂಗ್ ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೇ ನಮ್ಮ ವಿಚ್ಛೇದನ ಆಯಿತು. ಅದನ್ನು ಹೊರತುಪಡಿಸಿ ಬೇರೆ ಏನೂ ಕಾರಣ ಇರಲಿಲ್ಲ’ ಎಂದಿರುವ ಸಂಜಯ್ ಸಿಂಗ್, ಮುಂದೆಯೂ ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತೇನೆ ಅಂದರೆ ಇರಲಿ ಎಂದಿದ್ದಾರೆ.
ಸದ್ಯ ಪವಿತ್ರಾಗೆ ಜಾಮೀನು ಸಿಕ್ಕಿರೋದು ಖುಷಿಯಾಗಿದೆ. ಈ ಕೇಸ್ ಮುಗಿದರೆ ಸಾಕು ಅನಿಸುತ್ತಿದೆ. ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆ ಸಿಗಲಿ. ನಾನು ಮೊದಲೂ ಹೇಳಿದ್ದೆ. ಈಗಲೂ ಹೇಳ್ತಿದ್ದೀನಿ, ಪವಿತ್ರಾ ಮುಗ್ಧೆ ಆಕೆ ಯಾವ ತಪ್ಪು ಮಾಡಿಲ್ಲ. ಇನ್ಮುಂದೆಯೂ ದರ್ಶನ್ ಜೊತೆ ಪವಿತ್ರಾ ಚೆನ್ನಾಗಿರುತ್ತಾಳೆ ಅಂದರೆ ಇರಲಿ. ಆಕೆ ಸ್ಟ್ರಾಂಗ್ ಲೇಡಿ, ಈ ಪ್ರಕರಣದಲ್ಲಿ ಪವಿತ್ರಾದ್ದೇನೂ ತಪ್ಪಿಲ್ಲ. ಆಕೆಗೆ ಕೆಟ್ಟ ಮೆಸೇಜ್ ಬಂದಿರೋದಕ್ಕೆ ಯಾರಿಗೆ ಹೇಳಬೇಕಿತ್ತೋ ಅವರಿಗೆ ಹೇಳಿದ್ದಾರೆ. ಇದರಲ್ಲಿ ಆಕೆಯದ್ದು ತಪ್ಪಿಲ್ಲ . ಇನ್ನು ದರ್ಶನ್ ಆಸ್ಪತ್ರೆಯಲ್ಲಿದ್ದಾರೆ ಅಂತ ಗೊತ್ತಾಯ್ತು, ಅವರು ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ ಸಂಜಯ್ ಸಿಂಗ್.
ಜಾಮೀನು ಸಿಕ್ಕ ಬಳಿಕ ಪವಿತ್ರಾ ಮತ್ತು ಕುಟುಂಬ ತಮ್ಮ ಮನೆ ದೇವರು ವಜ್ರಮುನೇಶ್ವರ ದೇವಾಲಯಕ್ಕೆ ಹೋಗಿ ಹರಕೆ ತೀರಿಸಿದ್ದಾರೆ. ಈ ಹಿಂದೆ ನಾನು ಮತ್ತು ಪವಿತ್ರಾ ಎಷ್ಟೋ ಸಲ ಆ ದೇವಸ್ಥಾನಕ್ಕೆ ಹೋಗಿದ್ದೇವೆ. ನಮ್ಮ ಮಗಳ ಮುಡಿ ಕೊಡುವ ಶಾಸ್ತ್ರವನ್ನು ಅಲ್ಲೇ ಮಾಡಿದ್ದೇವೆ. ಅಲ್ಲಿ ನಮ್ಮ ಕೆಲಸ ಆಗೋದಿದ್ರೆ ದೇವರು ಬಲಗಡೆಯಿಂದ ಹೂ ಪ್ರಸಾದ ಕೊಡುತ್ತದೆ. ಪವಿತ್ರಾಗೆ ಆ ದೇವರ ಬಗ್ಗೆ ಭಾರೀ ನಂಬಿಕೆ ಇದೆ ಎಂದು ಹಳೆಯ ನೆನಪುಗಳನ್ನೂ ಮೆಲುಕು ಹಾಕಿದ್ದಾರೆ ಅವರು.
ಅದೇನೆ ಇರಲಿ, ಜಾಮೀನು ಸಿಕ್ಕಿದ್ದು ಖುಷಿಯಾಗಿದೆ. ಆ ದೇವರು ನನ್ನ ಮಾತು ಕೇಳಿದ್ದಾರೆ. ಸದ್ಯ ಈ ಕೇಸ್ ಮುಗಿದರೆ ಸಾಕೆನಿಸುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ. ಅವರಿಗೆ ಶಿಕ್ಷೆಯಾಗಲಿ. ನಾನು ಮೊದಲಿಂದಲೂ ಹೇಳ್ತಿದ್ದೆ ಈಗಲೂ ಹೇಳ್ತಿದ್ದೀನಿ, ಪವಿತ್ರಾ ಇನೋಸೆಂಟ್ ಆಕೆ ತಪ್ಪು ಮಾಡಿಲ್ಲ. ಆಕೆ ಬಹಳ ಮಹತ್ವಾಕಾಂಕ್ಷಿ ಎಂದು ಹೇಳಿರುವ ಸಂಜಯ್ ಸಿಂಗ್, 6 ತಿಂಗಳ ಹಿಂದೆ ಒಮ್ಮೆ ನಮ್ಮ ಮಾವನಿಗೆ ಕಾಲ್ ಮಾಡಿದ್ದೆ. ಆಗ ಪವಿತ್ರಾ ಬಗ್ಗೆ ವಿಚಾರಿಸಿದೆ. ಈಗಲೂ ಪವಿತ್ರಾಗಾಗಿಯೇ ಕಾಯುತ್ತಿದ್ದೇನೆ. ಮುಂದೆಯೂ ಕಾಯುತ್ತೇನೆ ಎಂದಿದ್ದಾರೆ ಸಂಜಯ್ ಸಿಂಗ್.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ