Sunday, December 22, 2024

Latest Posts

Sports News: ಕ್ರಿಕೇಟಿಗ ರಾಬಿನ್ ಉತ್ತಪ್ಪ ವಿರುದ್ಧ ವಂಚನೆ ಆರೋಪ, ದೂರು ದಾಖಲು

- Advertisement -

Sports News: ಟೀಂ ಇಂಡಿಯಾ ಮಾಜಿ ಕ್ರಿಕೇಟಿಗ ರಾಬಿನ್ ಉತ್ತಪ್ಪ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, 23 ಲಕ್ಷ ರೂಪಾಯಿ ಪಿಎಫ್ ಹಣ ನೀಡದೇ ವಂಚಿಸಿದ್ದಾರೆಂದು, ದೂರು ದಾಖಲಿಸಲಾಗಿದೆ.

ರಾಬಿನ್ ಉತ್ತಮ ಸೆಂಚ್ಯೂರಿಸ್ ಲೈಫ್‌ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಅನ್ನುವ ಕಂಪನಿ ನಡೆಸುತ್ತಿದ್ದರು. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವರ ಹಣವನ್ನು ರಾಬಿನ್ ಉತ್ತಪ್ಪ ನೀಡದೇ ವಂಚಿಸಿದ್ದಾರೆಂದು ಆರೋಪಿಸಲಾಗಿದೆ.

ಕೆಲಸಗಾರರ ಸ್ಯಾಲರಿಯಿಂದ ಪಿಎಫ್ ಹಣ ಕಟ್ ಆಗಿದೆ. ಆದರೆ ಅವರ ಪಿಎಫ್ ಖಾತೆಗೆ ಮಾತ್ರ ಆ ಹಣ ಸೇರಿಲ್ಲವೆಂದು ಆರೋಪಿಸಲಾಗಿದೆ. ಈ ಬಗ್ಗೆ ಷಡಕ್ಷರಿ ಗೋಪಾಲ್ ರೆಡ್ಡಿ, ರಾಬಿನ್ ಉತ್ತಪ್ಪ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ರಾಬಿನ್ ಉತ್ತಪ್ಪ ಮನೆಗೆ ನೋಟೀಸ್ ನೀಡಲಾಗಿತ್ತು. ಆದರೆ ಆ ಮನೆಯಲ್ಲಿ ರಾಬಿನ್ ಸದ್ಯ ವಾಸವಿರದ ಕಾರಣ, ಅವರಿಗೆ ವಾರೆಂಟ್ ಜಾರಿ ಮಾಡಲಾಗಿದೆ. ರಾಬಿನ್ ಉತ್ತಪ್ಪ ದುಬೈನಲ್ಲಿ ವಾಸವಿದ್ದು, ಪ್ರಕರಣ ದಾಖಲಾಗಿರುವ ಕಾರಣಕ್ಕೆ ಅವರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

- Advertisement -

Latest Posts

Don't Miss