Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಉತ್ತರ ಕರ್ನಾಟಕದ ಅಭಿವೃದ್ಧಿ ಇಲ್ಲದೆ ಬೆಳಗಾವಿ ಅಧಿವೇಶನ ಕಾಟಾಚಾರಕ್ಕೆ ನಡೆಸಲಾಗಿದೆ. ಅಧಿವೇಶನ ಪಂಚಮಸಾಲಿ ಲಾಠಿ ಪ್ರಹಾರದಿಂದ ಆರಂಭವಾಗಿ, ಸಿ.ಟಿ.ರವಿ ಅವರ ಮಾನಸಿಕ ಹಿಂಸೆಯಿಂದ ಮುಗಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂದರೆ ಪೊಲೀಸರ ಲಾಠಿಯಿಂದ ಆರಂಭಗೊಂಡು ಪೊಲೀಸರ ಹಿಂಸೆಯಿಂದ ಅಂತ್ಯವಾಗಿದೆ. ರಾಜ್ಯದಲ್ಲಿ ಪೋಲಿಸ್ ರಾಜ್ಯ ಇದೆ ಎನ್ನುವುದಕ್ಕೆ ಇದು ಸಾಕ್ಷಿ. ಹಿರಿಯ ಅಧಿಕಾರಿಗಳು ಲಾಠಿ ಹಿಡಿದಿದ್ದು ಚಾರ್ಜ್ ಮಾಡಿದ್ದು ತನಿಖೆ ಆಗಬೇಕು. ಹಿರಿಯ ಅಧಿಕಾರಿಗಳು ಕಾನ್ಸ್‌ಟೇಬಲ್‌ಗಳ ತರ ವರ್ತನೆ ಮಾಡುತ್ತಿದ್ದಾರೆ. ಕರ್ನಾಟಕ ಪೊಲೀಸರಿಗೆ ಒಳ್ಳೆಯ ಹೆಸರು ಇದೆ. ಆದರೆ ಆ ಪೊಲೀಸರನ್ನು ಬಳಿಸಿಕೊಂಡು ಈ ರೀತಿ ವರ್ತನೆ ತೋರಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಉತ್ತರ ಕರ್ನಾಟಕದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಿಲ್ಲ. ನಮ್ಮ ಪಕ್ಷದ ನಾಯಕರು ಮಾಡಿದ ಪ್ರಶ್ನೆಗೆ ರಾಜ್ಯ ಸರ್ಕಾರದ ಮಂತ್ರಿಗಳು ಉತ್ತರ ಸಹ ನೀಡಿಲ್ಲ ಇದು ನಾಚಿಕೆ ಸಂಗತಿ. ಈ ಸರಕಾರ ನಕ್ಷೆಯಲ್ಲಿ ಉತ್ತರ ಕರ್ನಾಟಕವೇ ಇಲ್ಲ ಎಂಬ ಅನುಮಾನ ಮೂಡಿದೆ. ಉತ್ತರ ಕರ್ನಾಟಕ ಜನರ ಕಣ್ಣಿಗೆ ಮಣ್ಣುಹಾಕುವ ಕಾರ್ಯ ಪದೇ ಪದೆ ಈ ಸರ್ಕಾರದಲ್ಲಿ ನಡೆಯುತ್ತಿದೆ.. ಹುಡುಗಾಟದ ರೀತಿಯಲ್ಲಿ ಅಧಿವೇಶನ ನಡೆದಿದೆ.
ನಮ್ಮ ಪಕ್ಷ ನಾಯಕರು ಸಮರ್ಥವಾಗಿ ಸದನದ ನಿಭಾಯಿಸಿದ್ದಾರೆ ಆದರೆ ಸರ್ಕಾರ ಸ್ಪಂದನೆ ಮಾಡಿಲ್ಲ. ರಾಜ್ಯ ಸರ್ಕಾರದ ಹಣಕಾಸಿನ ಸ್ಥಿತಿ ಬಹಳಷ್ಟು ಗಂಭೀರವಾಗಿದೆ. ಪಶ್ಚಿಮಘಟದ ನೀರಿಗೂ ಟ್ಯಾಕ್ಸ್ ಹಾಕುವ ಚಿಂಚತನೆ ನಡೆಸಿದ್ದಾರೆ ಈ ಸರ್ಕಾರ ದಿವಾಳಿಯಾಗಿದೆ. ಇವರು ನಾಳೆ ಗಾಳಿಗೂ ಟ್ಯಾಕ್ಸ್ ಹಾಕುತ್ತಾರೆ. ಹಿಂದಿನ ಸರ್ಕಾರದ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಸಿಎಂ ಶೂರತ್ವ ತೋರುತ್ತಿದ್ದಾರೆ ಎಂದು ಬೊಮ್ಮಾಯಿ ವ್ಯಂಂಗ್ಯವಾಡಿದ್ದಾರೆ.