ಆಫೀಸಿನಲ್ಲಿ ಲಂಚ್ ಟೈಮಲ್ಲಿ ಬಿಸಿ ಬಿಸಿ ಊಟ ಮಾಡ್ಬೇಕಾ..? ಹಾಗಾದ್ರೆ ಈ ಲಂಚ್ ಬಾಕ್ಸ್ ನೋಡಿ

Tech News: ಬೆಳಿಗ್ಗೆ ಬೇಗ ಎದ್ದು, ಅರ್ಜೆಂಟ್ ಅರ್ಜೆಂಟ್ ಆಗಿ ತಿಂಡಿ ತಿಂದು, ಆಫೀಸಿಗೆ ಹೋಗುವವರು, ಮಧ್ಯಾಹ್ನದ ಊಟವಾದ್ರೂ ನೆಮ್ಮದಿಯಾಗಿ ಮಾಡಬೇಕು ಅಂದುಕೊಳ್ಳುತ್ತಾರೆ. ಆದರೆ ಕೆಲವು ಸಾರಿ ಎಷ್ಟೇ ಬಿಸಿ ಬಿಸಿ ಆಹಾರವನ್ನು ಡಬ್ಬಿಗೆ ತುಂಬಿಸಿ ಕೊಟ್ರೂ, ಆಫೀಸಿಗೆ ಹೋಗುವಾಗ, ಅದು ತಣ್ಣಗಾಗುತ್ತದೆ. ಹಾಗಾಗಿ ನಾವಿಂದು ಒಂದು ಲಂಚ್ ಬಾಕ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಈ ಲಂಚ್‌ ಬಾಕ್ಸ್‌ನಲ್ಲಿ ನೀವು ಮಾಮೂಲಿ ಊಟವನ್ನು ತೆಗೆದುಕೊಂಡು ಹೋಗಿ, ಊಟದ ಸಮಯದಲ್ಲಿ ಬಾಕ್ಸ್ ಚಾರ್ಜ್‌ ಮಾಡಿದ್ರೆ ಸಾಕು. ನಿಮ್ಮ ಊಟ ಬಿಸಿ ಬಿಸಿಯಾಗತ್ತೆ. ಅಲ್ಲದೇ, ನೀವು ಒಂದು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಅದರಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಟೆಂಪ್ರೆಚರ್ ಮಾಡಿಡಬಹುದು. ಒಂದು ಬಾಕ್ಸ್‌ನಲ್ಲಿ 1 ಕಂಟೇನರ್ ಇರುತ್ತದೆ. ಆ ಕಂಟೇನರ್‌ನಲ್ಲಿ ಊಟ ಬಿಸಿ ಮಾಡಿ, ಸಂಪರೇಟ್ ಆಗಿ ಕಂಟೇನರ್ ಬಳಸಿ, ಊಟ ಮಾಡಬಹುದು.

ಆದರೆ ಈ ಕಂಟೇನರ್‌ನಲ್ಲಿ ಕಡಿಮೆ ಪ್ರಮಾಣದ ಊಟ ಹಿಡಿಯುತ್ತದೆ. ಹೆಚ್ಚು ತಿನ್ನುವವರು ಇನ್ನೊಂದು ನಾರ್ಮಲ್ ಬಾಕ್ಸ್ ಬಳಸಬೇಕಾಗುತ್ತದೆ. ಇನ್ನು ಇದರ ಬೆಲೆ ಬಂದು 12ರಿಂದ 13 ಸಾವಿರ ರೂಪಾಯಿ ಇರುತ್ತದೆ.

About The Author