Sunday, December 22, 2024

Latest Posts

ರೋಲ್ಸ್ ರಾಯ್ಸ್ ಕಾರನ್ನು ಕಸದ ಗಾಡಿ ಮಾಡಿಕೊಡಿದ್ದರು ಭಾರತದ ಈ ರಾಜ

- Advertisement -

Special Story: ರೋಲ್ಸ್ ರಾಯ್ಸ್ ಕಾರ್ ಅಂದ್ರೆ ಅದು ಆಗರ್ಭ ಶ್ರೀಮಂತರ ಕಾರು. ಆದರೆ, ಆ ಕಾರನ್ನು ಭಾರತದ ರಾಜರೊಬ್ಬರು ಕಸ ಹಾಕುವುದಕ್ಕೆ, ಕಸದ ಗಾಡಿಯ ರೀತಿ ಬಳಸಿದ್ದರು. ಇದಕ್ಕೂ ಒಂದು ಕಾರಣವಿತ್ತು. ಆ ಕಾರಣವೇನು ಅಂತಾ ಹೇಳ್ತೀವಿ ಕೇಳಿ.

1920ರಲ್ಲಿ ಮಹಾರಾಜ ಜೈ ಸಿಂಗ್ ಎಂಬುವವರು ಸಾಧಾರಣ ದಿರಿಸಿನಲ್ಲಿ ಲಂಡನ್‌ನ ರೋಲ್ಸ್ ರಾಯ್ಸ್ ಶೋ ರೂಮ್‌ಗೆ ಭೇಟಿ ನೀಡಿದ್ದರು. ಅವರ ಸಾಧಾರಣ ಬಟ್ಟೆಯನ್ನು ಕಂಡು, ಅಲ್ಲಿನ ಸಿಬ್ಬಂದಿ ಅವರನ್ನು ಕೀಳಾಗಿ ನೋಡಿ, ಇಗ್ನೋರ್ ಮಾಡಿದ್ದ. ಇದನ್ನು ಗಮನಿಸಿದ್ದ ರಾಜಾ ಜೈ ಸಿಂಗ್‌ಗೆ ಕೋಪ ಬಂದಿತ್ತು. ಇದೇ ಕೋಪದಲ್ಲಿ ತಮ್ಮ ಹೊಟೇಲ್‌ ರೂಮಿಗೆ ತೆರಳಿದ ಮಹಾರಾಜರು. ಆ ಶೋ ರೂಮ್‌ಗೆ ತಾವು ಬರುತ್ತಿದ್ದೇವೆ ಎಂಬ ಸಂದೇಶ ಹೊರಡಿಸಿದರು.

ಮತ್ತು ಮಹಾರಾಜರ ವೇಷ ಭೂಷಣದಲ್ಲಿ ಶೋ ರೂಮ್‌ಗೆ ಭೇಟಿ ನೀಡಿದರು. ಆಗ ಅವರಿಗೆ ಅಲ್ಲಿದ್ದ ಎಲ್ಲ ಸಿಬ್ಬಂದಿಗಳು ಸಾಲಾಗಿ ನಿಂತು ಗೌರವ ನೀಡಿದರು. ಅವರನ್ನು ಕೀಳಾಗಿ ನೋಡಿದ್ದ ಸಿಬ್ಬಂದಿ ಬಂದು ಅವರಲ್ಲಿ ಕ್ಷಮೆಯೂ ಕೇಳಿದ.

ಆದರೆ ರಾಜರು ಆ ಶೋ ರೂಮ್‌ನಲ್ಲಿ ಇದ್ದ ಅಷ್ಟೂ ರೋಲ್ಸ್ ರಾಯ್ಸ್ ಕಾರ್ ಖರೀದಿ ಮಾಡಿದರು. ಆದರೆ ಅವರು ತಮ್ಮ ಸ್ವಂತಕ್ಕೆ ಆ ಕಾರನ್ನು ಉಪಯೋಗಿಸಲಿಲ್ಲ. ಬದಲಾಗಿ, ಬ್ರಿಟೀಷರ ಸೊಕ್ಕು ಇಳಿಸಲು, ಆ ಎಲ್ಲ ಕಾರ್‌ಗಳನ್ನು ಭಾರತದಲ್ಲಿ ಕಸದ ಗಾಡಿಯಾಗಿ ಉಪಯೋಗಿಸಿದರು. ಹೀಗಾಗಿ ಅಂದಿನ ಕೆಲವು ಜನರಿಗೆ ರೋಲ್ಸ್ ರಾಯ್ಸ್ ಎಂದರೆ, ಕಸದ ಗಾಡಿ ಎಂದೇ ಪರಿಚಿತವಾಗುವಂತೆ ಮಾಡಿದ್ದರು.

ಅಲ್ಲದೇ, ಇಡೀ ಪ್ರಪಂಚಕ್ಕೆ ಈ ವಿಷಯ ಹರಡುವಂತೆ ಮಾಡಿದ್ದರು. ಈ ಕಾರಣಕ್ಕೆ ರೋಲ್ಸ್ ರಾಯ್ಸ್ ಗೌರವ ಬೀದಿಪಾಲಾಯಿತು. ಅದನ್ನು ಖರೀದಿಸುವವರ ಸಂಖ್ಯೆಯೂ ಕಡಿಮೆಯಾಯಿತು.

ಈ ವಿಷಯ ಗಾಡಿಯ ಓನರ್‌ಗೆ ಗೊತ್ತಾದ ಬಳಿಕ, ಆತ ರಾಜರಲ್ಲಿ ಕ್ಷಮೆ ಕೇಳಿದ. ಭೇಟಿಯಾಗಿ 6 ಹೊಸ ರೋಲ್ಸ್ ರಾಯ್ಸ್ ಗಾಡಿಯನ್ನು ಉಡುಗೊರೆಯಾಗಿ ರಾಜರಿಗೆ ನೀಡಿದ. ಹೀಗೆ ಕ್ಷಮೆ ಕೇಳಿದ ಬಳಿಕ, ರಾಜರು ರೋಲ್ಸ್ ರಾಯ್ಸ್ ಗಾಡಿಯನ್ನು ಕಸದ ಗಾಡಿಯಾಗಿ ಉಪಯೋಗಿಸುವುದನ್ನು ನಿಲ್ಲಿಸಿದರು.

- Advertisement -

Latest Posts

Don't Miss