Saturday, July 5, 2025

Latest Posts

ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು..?

- Advertisement -

Web Story: ಸಂಬಂಧಿಕರು, ಸ್ನೇಹಿತರು ಯಾರದ್ದಾದರೂ ಮದುವೆ ಇದ್ದಾಗ, ಏನಾದರೂ ಉಡುಗೊರೆ ನೀಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಯಾವ ಉಡುಗೊರೆ ನೀಡಬೇಕು ಎಂಬ ಕಳವಳವಿರುತ್ತದೆ. ಹಾಗಾಗಿ ನಾವಿಂದು ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು ಎಂದು ವಿವರಿಸಲಿದ್ದೇವೆ.

ನೀವು ಪಾತ್ರೆ ಸಾಮಾನು, ಬಟ್ಟೆ, ಬ್ಯಾಗ್ ಸೇರಿ ಉಪಯುಕ್ತ ವಸ್ತು ಕೊಟ್ಟಾಗ, ಅದರಿಂದ ಅವರಿಗೆ ಸಹಾಯವಾಗಬಹುದು. ಆದರೆ ಶೋಕೇಸ್‌ನಲ್ಲಿ ಇಡುವಂಥ ವಸ್ತು, ಫೋಟೋ ಕೊಟ್ಟಾಗ ಅದು ಕೆಲ ವರ್ಷಗಳ ಕಾಲ ಗೋಡೆ ಮೇಲಿರುತ್ತದೆ ಬಿಟ್ಟರೆ, ಅದರಿಂದ ಅವರಿಗೇನೂ ಉಪಯೋಗವಾಗುವುದಿಲ್ಲ. ನಾವು ಕೊಟ್ಟ ಗಿಫ್ಟ್‌ನಿಂದ ಇನ್ನೊಬ್ಬರಿಗೆ ಉಪಯೋಗವಾಗಬೇಕೇ ಹೊರತು, ನಮ್ಮ ಉಡುಗೊರೆಯ ನೆನಪು ಅವರಿಗಿರುವುದು ಮುಖ್ಯವಲ್ಲ.

ಹಾಗಾಗಿ ಮದುವೆ, ಮುಂಜಿ, ಗೃಹಪ್ರವೇಶದ ಸಂದರ್ಭದಲ್ಲಿ ನೀವು ಹಣವನ್ನೇ ಉಡುಗೊರೆಯಾಗಿ ನೀಡಬಹುದು. ಏಕೆಂದರೆ, ಈ ಕಾರ್ಯಕ್ರಮ ಮುಗಿದ ಬಳಿಕ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚು. ಕೆಲವರು ಗಿಫ್ಟ್ ಆಗಿ ಬಂದ ಹಣದಿಂದಲೇ ಅರ್ಧ ಅಥವಾ ಕಾಲು ಭಾಗ, ಸಾಲ ತೀರಿಸಬಹುದು ಎಂದುಕೊಂಡಿರುತ್ತಾರೆ. ಅಂಥವರಿಗೆ ನೀವು ಕೊಟ್ಟ ಹಣದ ಉಡುಗೊರೆ ತುಂಬಾ ಸಹಾಯವಾಗುತ್ತದೆ.

ಅಲ್ಲದೇ, ಹಣವನ್ನು ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ತಮಗೆ ಬೇಕಾದ ವಸ್ತುಗಳನ್ನು ಅವರೇ ಖರೀದಿಸುತ್ತಾರೆ. ಆದರೆ ನೀವು ಕೊಟ್ಟ ಕೆಲ ಉಡುಗೊರೆಗಳು ಅವರ ಕೆಲಸಕ್ಕೆ ಬಾರದೆಯೂ ಇರಬಹುದು. ವೇಸ್ಟ್ ಆಗಬಹುದು. ಆದರೆ ಹಣ ಹಾಗಲ್ಲ. ಹಣ ಎಲ್ಲರ ಸಹಾಯಕ್ಕೂ, ಎಲ್ಲ ಸಮಯದಲ್ಲೂ ಸಹಾಯಕ್ಕೆ ಬರುವಂಥ ವಸ್ತು. ಹಾಗಾಗಿ ಹಣವನ್ನೇ ಉಡುಗೊರೆಯಾಗಿ ಕೊಡುವುದು ಉತ್ತಮ.

- Advertisement -

Latest Posts

Don't Miss