Alanda News: ಆಳಂದದ ಮಾದನ ಹಿಪ್ಪರಗಿ ಗ್ರಾಮದಲ್ಲಿ ಶಾಸಕ ಬಿ.ಆರ್.ಪಾಾಟೀಲ್ ವಿರುದ್ಧ ಜನಾಕ್ರೋಶ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತಿಗೆದಾರ ಮಾತನಾಡಿ, ಬಿ.ಆರ್.ಪಾಟೀಲ್ ಶಾಸಕರಾದ ಬಳಿಕ ತಾಲೂಕಿನಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ನೆಟೆ ರೋಗದಿಂದ ತೊಗರಿ ನಾಶವಾಗಿದೆ. ಪರಿಹಾರ ಕೊಡಿಸಲು ಶಾಸಕರು ಪ್ರಾಮಾಣಿಕವಾಗಿ ಯತ್ನಿಸಿಲ್ಲ. ಶಾಸಕರು ಆಳಂದವನ್ನು ಗೂಂಡಾರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ್ ಮಾತನಾಡಿ, ತೊಗರಿ ಬೆಳೆದ ರೈತರ ಹೊಲಗಳನ್ನು ಸರ್ವೇ ಮಾಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಹೊಲಗಳನ್ನು ಮಾತ್ರ ಸರ್ವೇ ಮಾಡಲಾಗಿದೆ. ಇದು ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪಾರ್ಷಿಯಾಲಿಟಿ ಅಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು.



