ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎಸ್.ಷಡಕ್ಷರಿ

Bengaluru News: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಸಿ.ಎಸ್.ಷಡಕ್ಷರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ಕೃಷ್ಣಗೌಡರು 442 ಮತಗಳನ್ನು ಗಳಿಸಿದ್ದರೆ, ಷಡಕ್ಷರಿ 507 ಮತಗಳನ್ನು ಗಳಿಸಿ, 65 ಹೆಚ್ಚಿನ ಅಂಕ ಪಡೆದು, ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಸ್ಥಾನದ ಚುನಾವಣೆ ಶಿವರುದ್ರಯ್ಯ ಪಿ.ವಿ. ಮತ್ತು ನಾಗರಾಜ್ ಆರ್.ಜುಮ್ಮನವರ್ ಎಂಬುವವರು ಸ್ಪರ್ಧಿಸಿದ್ದು, 18 ಮತಗಳ ಅಂತರದಿಂದ ಶಿವರುದ್ರಯ್ಯ ಗೆಲುವು ಸಾಧಿಸಿದ್ದಾರೆ.

ಸಿ.ಎಸ್.ಷಡಕ್ಷರಿ ಮತ್ತು ಶಿವರುದ್ರಯ್ಯ ಅವರಿಗೆ ಸಾಗರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಎನ್, ರಾಜ್ಯ ಪರಿಷತ್ ಸದಸ್ಯರಾದ ದೇವೇಂದ್ರಪ್ಪ, ಖಜಾಂಚಿ ಸಹದೇವ ಎಸ್ ಬಡಿಗೇರ್ ಸೇರಿ ಹಲವರು ಅಭಿನಂದನೆ ತಿಳಿಸಿದರು.

About The Author