Tuesday, December 31, 2024

Latest Posts

ಹುಬ್ಬಳ್ಳಿಯಲ್ಲಿ ನಟೋರಿಯಸ್ ದರೋಡೆಕೋರನ ಮೇಲೆ ಫೈರಿಂಗ್: ಕಿಮ್ಸ್ ಆಸ್ಪತ್ರೆಗೆ ದಾಖಲು

- Advertisement -

Hublli News: ಹುಬ್ಬಳ್ಳಿ: ಧಾರವಾಡ ನವಲೂರಿನಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿ ಮನೆ ದರೋಡೆಗೆ ಪ್ರಯತ್ನಿಸಿ, ಮನೆಯವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಅಂತರರಾಜ್ಯ ನಟೋರಿಯಸ್ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಈ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ‌ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು, ಧಾರವಾಡದ ನವಲೂರಿನ ಹೊರವಲಯದಲ್ಲಿರುವ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ವಿಕಾಸ್ ಕುಮಾರ್ ಎಂಬುವವರ ಮನೆಗೆ ರಾತ್ರೋರಾತ್ರಿ ದರೋಡೆಗೆ ದರೋಡೆಕೋರರು ಯತ್ನಸಿದ್ದಾರೆ. ಘಟನೆ ನಡೆದ ಕೂಡಲೇ ರೌಂಡ್ಸ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಆರೋಪಿ ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣ ಕುಮಾರ್ ಎಂಬಾತ ಸೆರೆ ಸಿಕ್ಕಿದ್ದಾನೆ. ‌ವಿಚಾರಣೆ ವೇಳೆ ಇನ್ನೂ ಮೂರ್ನಾಲ್ಕು ಜನ ಆತನೊಂದಿಗೆ ಬಂದಿದ್ದಾರೆ ಎಂಬುದನ್ನು ಆರೋಪಿ ತಿಳಿಸಿದ್ದಾನೆ ಎಂದರು.

ಇಲ್ಲಿನ ಇಂಡಸ್ಟ್ರಿಯಲ್ ಏರಿಯಾದ ಗಾರ್ಡನ್ ಸುತ್ತಮುತ್ತ‌ ಬೆಳಗಿನ ಜಾವದಲ್ಲಿ ಅವರು ಸೇರುವ ಮಾಹಿತಿ ಮೇರೆಗೆ ತೆರಳಲಾಗಿತ್ತು, ಈ ವೇಳೆ ಏಕಾಏಕಿ ಹಲ್ಲೆ ಮಾಡಲು ಬಂದು ತಪ್ಪಿಸಿಕೊಂಡು ಹೋಗಲು ಪ್ರಯತ್ನಪಟ್ಟಿದ್ದ ದರೋಡೆಕೋರನ ಕಾಲಿಗೆ ಸ್ಥಳದಲ್ಲೇ ಇದ್ದ ಪಿಎಸ್ಐ ಪ್ರಮೋದ್ ಅವರು ಎರಡು ರೌಂಡ್ ಫೈರಿಂಗ್ ಮಾಡಿದ್ದು, ಸ್ಥಳದಲ್ಲೇ ಬಿದ್ದಿದ್ದಾನೆ. ಅಲ್ಲಿಂದ ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.

ಜೂನ್ 6 ನೇ ತಾರೀಖಿನಂದು ಇದೇ ವ್ಯಕ್ತಿ ಅಶೋಕ ಕದಂಬರ ಮನೆಗೆ ನುಗ್ಗಿ ಬಾಗಿಲು ಹೊಡೆದು ಥಳಿಸಿದ್ದರು. ಮನೆಯಲ್ಲಿ ದಂಪತಿಗಳಿಗೂ ಕೂಡಾ ಹಲ್ಲೆ ಮಾಡಿದ್ದರು. ಅದೇ ಪ್ರಕರಣ ಆರೋಪಿ ಅನ್ನೋದು ಕೂಡಾ ಈಗ ತಿಳಿದು ಬಂದಿದೆ. ನಮ್ಮ ರಾಜ್ಯ ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ 50 ಕ್ಕೂ ಹೆಚ್ಚು ಪ್ರಕರಣದಲ್ಲಿ ಈ ಆರೋಪಿ ಭಾಗಿಯಾಗಿದ್ದಾನೆ. ಈತನ ಮೇಲೆ ಆಂಧ್ರದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಪ್ರಕರಣ ದಾಖಲಾಗಿವೆ. ಪಿಎಸ್ಐ ಪ್ರಮೋದ್ ಹಾಗೂ ಸಿಬ್ಬಂದಿ ಆನಂದ್ ಬಡಿಗೇರ ಅವರಿಗೆ ಸ್ವಲ್ಪ ಗಾಯವಾಗಿದೆ. ಬೇರೆ ಆರೋಪಿಗಳ ಬಗ್ಗೆ ಕೂಡ ವಿಚಾರಣೆ ಮಾಡಲಾಗಿದೆ. ಈತ ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವನಾಗಿದ್ದಾನೆ. ಇವರು ವಂಶಾವಳಿಯಾಗಿ ದರೋಡೆಕೋರರು ಆಗಿದ್ದು ಇವರ ಅಪ್ಪ, ಅಜ್ಜ ಸೇರಿ ಎಲ್ಲರೂ ಸಂಪೂರ್ಣ ಡಕಾಯಿತಿ ಮಾಡುತ್ತಿದ್ದರು ಎಂದು ಕಮೀಷನರ್ ಮಾಹಿತಿ ನೀಡಿದರು.

- Advertisement -

Latest Posts

Don't Miss