Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು,ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಜನತೆಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು, ಈಗ ಎಕ್ಸಪೋಸ್ ಆಗುತ್ತಿದೆ. 200 ಯುನಿಟ್ ಉಚಿತ ವಿದ್ಯುತ್ ಎಂದು ಹೇಳಿ, ಅದಕ್ಕಿಂತ ಜಾಸ್ತಿ ಬಳಸಿದ್ರೆ, ಹೆಚ್ಚಿನ ಹಣ ವಸೂಲಿ ಮಾಡಿದರು. ಹಾಲಿನ ದರ ಹೆಚ್ಚಳ ಮಾಡಿದ್ರು, ಡಿಸೇಲ್ ಪೆಟ್ರೋಲ್ ಸೆಸ್ಸ್ ಹೆಚ್ಚಳ ಮಾಡಿದ್ರು. ಆಸ್ತಿ ನೊಂದಣಿ ದರ ಹೆಚ್ಚಳವಾಯ್ತು, ಮದ್ಯದ ದರ ಸಹ ಹೆಚ್ಚಳವಾಯ್ತು. ಈಗ KSRTC ಬಸ್ ದರ 15% ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಎಂತಹ ಕೀಳುಮಟ್ಟಕ್ಕೆ ಬೇಕಾದ್ರೂ ಇಳಿಯುತ್ತೆ. ಈಗಾಗಲೇ ಸಾರಿಗೆ ಸಂಸ್ಥೆಗಳು ಎರಡು ಸಾವಿರ ಕೋಟಿ ಸಾಲ ಪಡೆಯುವ ಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೇಸರ ಹೊರಹಾಕಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಬೇಕಾದ್ದು ಸುಳ್ಳು ಹೇಳ್ತಾರೆ ಅಂತ ಜನ ಮಾತನಾಡ್ತಾರೆ. ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಲಾಭದಲ್ಲಿದೆ ಅಂದ್ರೆ, ಸಾಲ ಯಾಕೆ ತೆಗೆದುಕೊಳ್ಳರೆ? ಸರ್ಕಾರ ದಿವಾಳಿಯಾಗಿದೆ, ಸರ್ಕಾರ ಉಚಿತ ಯೋಜನೆ ಹಣ ನೀಡಿಲ್ಲ. ಅದಕ್ಕೆ ನಿಗಮಗಳು ಸಾಲದ ಸುಳಿಗೆ ಸಿಲುಕಿವೆ. ಭ್ರಷ್ಟಾಚಾರ ದುರಾಡಳಿತದ ಕಾರಣದಿಂದ ರಾಜ್ಯ ಆರ್ಥಿಕ ಸಂಕಷ್ಟದತ್ತು ಹೋಗುತ್ತಿದೆ. ಇದರಿಂದ ರಾಜ್ಯದಲ್ಲಿ ಕೊಲೆ, ಸುಲಿಗೆ ಜಾಸ್ತಿಯಾಗುತ್ತಿವೆ. ಓರ್ವ ಜನಪ್ರತಿನಿಧಿಯನ್ನು ಕೊಟ್ಟು ಹಣ ಕೊಟ್ಟು ಕೊಲೆ ಮಾಡಿಸುವ ಹಂತಕ್ಕೆ ಸರ್ಕಾರ ಹೋಗುತ್ತಿದೆ. ಯಾರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬಕ್ಕೆ ಬೆದರಿಕೆ ಹಾಕಿ ಕಳಿಸಿದ್ದಾರೆ ಎಂದು ಜೋಶಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಿಯಾಂಕಾ ಖರ್ಗೆ ಅವರದು ಎಷ್ಟು ಅಹಂಕಾರದ ಮಾತುರೀ..? ನಿಮ್ಮ ತಂದೆಯನ್ನು ನೋಡಿ ಕಲಿಯಿರಿ. ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣಿ ಇರುವ ತನಕ ಸಭ್ಯತೆಯಿಂದ ಮಾತನಾಡುತ್ತಿದ್ದರು. ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೆಚ್ಚಿಸಲು ಈಗ ಒಂದಿಷ್ಟು ಮಾತನಾಡುತ್ತಿದ್ದಾರೆ. ಕನಿಷ್ಠ ಅವರನ್ನು ನೋಡಿ ಪ್ರಿಯಾಂಕ್ ಖರ್ಗೆ ಕಲಿಯಬೇಕು. ಡಿ.ಕೆ ಶಿವಕುಮಾರ್ ಬೆಕ್ಕು ಕೊಂದಿದ್ರಾ? ಅವರನ್ನು ಬಿಟ್ಟು ನಿನ್ನೆ ಡಿನ್ನರ್ ಪಾರ್ಟಿ ಮಾಡಿದ್ದಾರೆ. ಸಿದ್ದರಾಮಯ್ಯನವರೇ ತಮ್ಮ ಪಕ್ಷದಲ್ಲಿ ಒಂದು ಹೊಸ ತಂಡ ರಚನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.




