Wednesday, April 16, 2025

Latest Posts

Web News: ಟ್ಯಾಕ್ಸ್ ಕಟ್ಟಲಾಗದೇ, ದೇಶ ಬಿಟ್ಟು ದುಬೈ ಓಡುತ್ತಿದ್ದಾರೆ ಹಲವರು..!

- Advertisement -

Web News: ದೇಶದಲ್ಲಿ ಚಿಕ್ಕ ಪುಟ್ಟ ವಸ್ತುಗಳಿಗೂ ಬೆಲೆ ಹೆಚ್ಚುತ್ತಿದೆ. ಟ್ಯಾಕ್ಸ್ ಹೆಚ್ಚುತ್ತಿದೆ. ಸೆಕೆಂಡ್ ಹ್ಯಾಂಡ್ ವಾಹನ ತೆಗೆದುಕೊಂಡರೆ ಟ್ಯಾಕ್ಸ್ ಹೆಚ್ಚು, ಕೆರೆಮಲ್ ಪಾಪ್‌ಕಾರ್ನ್‌ಗೆ ಟ್ಯಾಕ್ಸ್ ಹೆಚ್ಚು, ಹೀಗೆ ಎಲ್ಲದಕ್ಕೂ ಟ್ಯಾಕ್ಸ್ ಹೆಚ್ಚಾಗುತ್ತಲೇ ಹೋಗುತ್ತಿದೆ. ಕೆಲವರಿಗೆ ಸ್ಯಾಲರಿ ಬಂದರೂ, ಟ್ಯಾಕ್ಸ್ ಕಟ್ ಆಗಿ ಬರುತ್ತಿದೆ. ಈ ರೀತಿ ಜೀವನ ನಡೆದರೆ, ಬದುಕುವುದು ಹೇಗೆ..? ನಾವು ದುಡಿದಿದ್ದೆಲ್ಲ ದೇಶಕ್ಕೆ ತೆರಿಗೆ ಕಟ್ಟುವುದಕ್ಕೇ ಸರಿ ಹೋಯಿತು ಎಂದು ಜನ ಕೇಂದ್ರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಟ್ಯಾಕ್ಸ್‌ರಾಮನ್ ಎಂದು ಟ್ರೋಲ್ ಆಗುತ್ತಿದ್ದಾರೆ. ಅಲ್ಲದೇ ಯಾಕಾದ್ರೂ ಬಿಜೆಪಿಗೆ ಓಟ್ ಹಾಕಿದ್ವೋ ಅಂತಾ ಜನ ಬೇಸರಗೊಳ್ಳುತ್ತಿದ್ದಾರೆ. ಇನ್ನು ಹಲವು ಶ್ರೀಮಂತರು ದೇಶ ಬಿಡುವ ಪ್ಲಾನ್ ಕೂಡ ಮಾಡಿದ್ದಾರೆ. ಅದರಲ್ಲಿ ಮೊದಲನೇಯದಾಗಿ ವಿರಾಟ್ ಕೊಹ್ಲಿ, ಲಂಡನ್‌ಗೆ ಹೋಗಿ ಸೆಟಲ್ ಆಗಲಿದ್ದಾರೆ ಅನ್ನೋ ಸುದ್ದಿ ಎಲ್ಲರಿಗೂ ಗೊತ್ತೇ ಇದೆ.

ಕೊಹ್ಲಿ ಚೆನ್ನಾಗಿ ದುಡ್ಡು ಮಾಡಿ, ಲಂಡನ್‌ಗೆ ಹೋಗಿ, ಅಲ್ಲಿ ನೆಮ್ಮದಿಯಾಗಿ ಜೀವನ ಮಾಡ್ತಾರೆ ಅನ್ನೋ ಗ್ಯಾರಂಟಿ ಹಲವರಿಗಿದೆ. ಯಾಕಂದ್ರೆ, ಭಾರತಕ್ಕೆ ಹೋಲಿಸಿದರೆ, ಬೇರೆ ಬೇರೆ ದೇಶದಲ್ಲಿ ಟ್ಯಾಕ್ಸ್ ಕಡಿಮೆ ಇದೆ. ಅದರಲ್ಲೂ ದುಬೈನಲ್ಲಿ ಟ್ಯಾಕ್ಸ್ ಕಟ್ಟುವ ಗೊಡವೆಯೇ ಇಲ್ಲ. ಅಲ್ಲಿ ಏನೇ ಖರೀದಿಸಿದರು, ಎಷ್ಟೇ ಹೆಚ್ಚು ಸಂಬಳ ಬಂದರೂ, ಲಾಭ ಬಂದರೂ ಟ್ಯಾಕ್ಸ್ ಕಟ್ಟುವ ಅವಶ್ಯಕತೆಯೇ ಇಲ್ಲ.

ಹಾಗಾಗಿ ಭಾರತದ ಹಲವು ಉದ್ಯಮಿಗಳು ದುಬೈಗೆ ಹೋಗಿ ಸೆಟಲ್ ಆಗಿದ್ದಾರೆ. ಇನ್ನು ಕೆಲವರು ಅಲ್ಲಿ ಹೋಗಿ ಸೆಟಲ್ ಆಗುವ ಎಲ್ಲ ತಯಾರಿ ನಡೆಸಿದ್ದಾರೆ. ಈ ಬಗ್ಗೆ ಸ್ವತಃ ದುಬೈಗೆ ಹೋಗಿ, ಸೆಟಲ್ ಆದ ಉದ್ಯಮಿಗಳೇ ಮಾತನಾಡಿದ್ದು, ಭಾರತದಲ್ಲಿ ಜನ 5ರಿಂದ 10 ವರ್ಷ ಕಷ್ಟಪಟ್ಟು ದುಡಿಯುವ ಹಣವನ್ನು ನಾನು, ದುಬೈನಲ್ಲಿ ಒಂದೇ ವರ್ಷದಲ್ಲಿ ದುಡಿದೆ ಎಂದಿದ್ದಾರೆ.

ಅಲ್ಲದೇ, ದುಬೈ ತುಂಬ ಸೇಫ್ ದೇಶ. ಅಲ್ಲಿ ಕ್ರೈಮ್ ರೇಟ್ ಸಿಕ್ಕಾಪಟ್ಟೆ ಕಡಿಮೆ. ಕಳ್ಳತನ, ರೇಪ್, ಮೋಸ ಇದಕ್ಕೆಲ್ಲ ಅತ್ಯಂತ ಕಠಿಣ ಶಿಕ್ಷೆ ಇರುವ ಕಾರಣ, ಅಂಥ ಕೆಲಸ ಮಾಡಲು ಯೋಚಿಸುವುದಕ್ಕೂ ಜನ ಹೆದರುತ್ತಾರೆ. ಅಲ್ಲದೇ, ಅಲ್ಲಿ ಟ್ಯಾಕ್ಸ್ ಕಟ್ಟುವ ಗೊಡವೆ ಇಲ್ಲ. ಅದಕ್ಕೆ ನಾನು ದುಬೈನಲ್ಲೇ ಸೆಟಲ್ ಆಗಿದ್ದೇನೆ ಅಂತಾ ಹೇಳುತ್ತಾರೆ.

ಒಟ್ಟಾರೆಯಾಗಿ ದುಬೈ ಸೇಫ್ ಕಂಟ್ರಿ, ಟ್ಯಾಕ್ಸ್ ಫೀ ದೇಶವಾಗಿರುವ ಕಾರಣ, ಭಾರತದ ಹಲವು ಶ್ರೀಮಂತರು ಆ ದೇಶವನ್ನೇ ಆಯ್ಕೆ ಮಾಡುತ್ತಿದ್ದಾರೆ. ಇದೇ ಹೀಗೆ ಮುಂದುವರಿದರೆ, ನಾಳೆ ಬದುಕು ಹೇಗೆ ಅಂತಿದ್ದಾರೆ ಭಾರತೀಯರು.

- Advertisement -

Latest Posts

Don't Miss