Horoscope: ಪ್ರತೀ ವರ್ಷದಂತೆ ಈ ವರ್ಷ ಕೂಡ ರಾಜ್ಯ ಮತ್ತು ರಾಷ್ಟ್ರದಲ್ಲಿ ಏನೇನಾಗಲಿದೆ ಎಂದು ಶ್ರೀ ನಾರಾಯಣ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇವರು ನುಡಿದಿರುವ ಹಲವು ಭವಿಷ್ಯ ಸತ್ಯವಾಗಿದೆ. ವರ್ಷದ ಹೊಸತರಲ್ಲೇ ಕೆಡುಕಾಗಲಿದೆ ಎಂದಿದ್ದರು. ಅದೇ ರೀತಿ ನೇಪಾಳದಲ್ಲಿ ಭೂಕಂಪ ಸಂಭವಿಸಿದೆ.
ಈ ವರ್ಷ ಆಗಸ್ಟ್ ಬಳಿಕ ಸಮಸ್ಯೆ ಬರಲಿದೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಆಗಸ್ಟ್ ಬಳಿಕ ಕೇಂದ್ರ ಸರ್ಕಾರಕ್ಕೆ ತೊಂದರೆಯಾಗಲಿದೆ. ಮಿತ್ರ ಪಕ್ಷಗಳು ಕಿರಿಕ್ ತೆಗೆದು, ಕೇಂದ್ರ ಸರ್ಕಾರಕ್ಕೆ ತೊಂದರೆ ಕೊಡುವ ಸಾಧ್ಯತೆ ಇದೆ. ಸೆಪ್ಟೆಂಬರ್ ಬಳಿಕ ಮೋದಿ, ಅಮಿತ್ ಶಾ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಸಾಧ್ಯತೆ ಇದೆ ಎಂದು ಗುರೂಜಿ ಹೇಳಿದ್ದಾರೆ.
ಆದರೆ ಈ ವರ್ಷ ಆಗಸ್ಟ್ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಯೋಗವಿದ್ದು, ಎಲ್ಲವೂ ಒಳಿತಾಗಲಿದೆ. ಸ್ತ್ರೀಯರು ಅಧ್ಯಕ್ಷತೆ ವಹಿಸಿಕೊಂಡಲ್ಲಿ, ಎಲ್ಲವೂ ಉತ್ತಮವಾಗಲಿದೆ. ಮುಂದಿನ 5 ವರ್ಷ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೂ ಬರಬಹುದು.
ಇನ್ನು ಈ ವರ್ಷ ಮಂಗಳನ ವರ್ಷವಾಗಿರುವ ಕಾರಣ, ಅಗ್ನಿ ಅವಘಡಗಳು ಹೆಚ್ಚಾಗುತ್ತದೆ. (ಈ ವರ್ಷದ ಆದಿ ಮತ್ತು ಅಂತ್ಯದಲ್ಲಿ ಭೂಕಂಪವಾಗಬಹುದು ಎಂದು ಗುರೂಜಿ ಹೇಳಿದ್ದರು. ಅದೇ ರೀತಿ ನೇಪಾಳದಲ್ಲಿ ಭೂಕಂಪನ ಸಂಭವಿಸಿದೆ). ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




