Wednesday, February 5, 2025

Latest Posts

ಒಕ್ಕಲಿಗ ನವೋದ್ಯಮಿಗಳಿಗೆ ‘ಎಫ್‌ಸಿ’ಯಿಂದ ಏಂಜಲ್‌ ಫಂಡಿಂಗ್‌

- Advertisement -

Political News: ಸಮುದಾಯದ ಉದ್ಯಮಿಗಳ ಆರ್ಥಿಕ ನೆರವಿಗಾಗಿ ವಿನೂತನ ಪ್ರಯತ್ನವೊಂದು ಕೈಗೊಂಡಿದ್ದು, ಫಸ್ಟ್‌ ಸರ್ಕಲ್‌ ಸೊಸೈಟಿಯು ಒಕ್ಕಲಿಗರಿಗಾಗಿ ಎಫ್‌ಸಿ ಏಜಂಲ್ಸ್‌ ಫಂಡಿಂಗ್‌ ವೇದಿಕೆಯನ್ನು ಪ್ರಾರಂಭಿಸಿದೆ.

ಫಸ್ಟ್‌ ಸರ್ಕಲ್‌ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ 2025ರ ವೇದಿಕೆಯಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಯಶಸ್ವಿ ಉದ್ಯಮಕ್ಕೆ ಅಗತ್ಯವಾದ ಆರ್ಥಿಕವಾದ ಬೆಂಬಲ ನೀಡುವ ಕಾರ್ಯ ಈ ಮೂಲಕ ಆಗಲಿದೆ. ಒಕ್ಕಲಿಗ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮತ್ತು ಉದ್ಯಮದಲ್ಲಿ ಯಶಸ್ಸು ಕಾಣುವ ಗುರಿಯನ್ನು ಎಫ್‌ಸಿ ಹೊಂದಿದೆ.

ವೆಂಚರ್ ಕ್ಯಾಪಿಟಲ್ ಫರ್ಮ್ ಆಕ್ಸೆಲ್ ಪಾರ್ಟ್‌ನರ್ಸ್‌ನ ಸಂಸ್ಥಾಪಕರೂ ಮತ್ತು ಪಾಲುದಾರರಾದ ಪ್ರಶಾಂತ್ ಪ್ರಕಾಶ್ ಈ ಉಪಕ್ರಮದ ಬಗ್ಗೆ ಮಾತನಾಡಿ, ಉದ್ಯಮದಲ್ಲಿ ತೊಡಗಿಕೊಂಡಾಗ ಹಲವಾರು ಸವಾಲುಗಳು ಎದುರಾಗುತ್ತವೆ. ಈ ಪ್ರಯಾಣದಲ್ಲಿ ಉದ್ಯಮದಲ್ಲಿ ಯಶಸ್ವಿಯಾಗಲು 10 ರಿಂದ 15 ವರ್ಷಗಳು ತೆಗೆದುಕೊಳ್ಳುತ್ತದೆ. ಹಾಗಾಗಿ ಉದ್ಯಮಿಗಳಾಗುವವರಿಗೆ ಹಣ ಅಥವಾ ಬಂಡವಾಳದ ನೆರವು ನೀಡುವುದರಿಂದ ಕನಿಷ್ಟ 2 ರಿಂದ 5 ವರ್ಷದೊಳಗೆ ಯಶಸ್ಸು ಕಾಣಲು ಸಾಧ್ಯವಾಗಬಹುದು ಎಂಬ ನಿಟ್ಟಿನಲ್ಲಿ ಎಫ್‌ಸಿ ಏಂಜಲ್ಸ್‌ ಅನ್ನು ಹುಟ್ಟುಹಾಕಿದ್ದೇವೆ. ಈ ವೇದಿಕೆಯು ಕರ್ನಾಟಕ ಸರ್ಕಾರದ ಹಣಕಾಸು ಸೌಲಭ್ಯದ ವೇದಿಕೆಯಂತೆಯೇ ಒಂದು ಸಣ್ಣ ನಿಧಿಯಾಗಿ ಕಾರ್ಯನಿರ್ವಹಿಸಲಿದೆ. ಇದರ ಮೂಲಕ ಒಕ್ಕಲಿಗ ಉದ್ಯಮಿಗಳನ್ನು ಬೆಂಬಲಿಸಲು ನಾವು ಪಣತೊಟ್ಟಿದ್ದೇವೆ ಎಂದರು.

ಗ್ರಾಮೀಣ ಪ್ರದೇಶದಿಂದ ಬಂದಂತಹ ಉದ್ಯಮಿಗಳಿಗೆ 10 ರಿಂದ 50 ಲಕ್ಷದ ವರೆಗಿನ ಹಣಕಾಸಿನ ಬೆಂಬಲವನ್ನು ಒದಗಿಸುವುದು ವೇದಿಕೆಯ ಉದ್ದೇಶವಾಗಿದೆ. ಉದ್ಯಮದಲ್ಲಿ ತೊಡಗಿಕೊಂಡವರು ಮತ್ತು ವ್ಯಾಪಾರದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವವರು ಈ ವೇದಿಕೆಗೆ ಹಣವನ್ನು ನೀಡುವ ಮೂಲಕ ಸಮುದಾಯಕ್ಕೆ ಬೆಂಬಲಿಸಿ ಎಂದು ಕರೆ ನೀಡಿದರು.

ನಮ್ಮ ಸಮುದಾಯದ ಉದ್ಯಮಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ರೀತಿಯ ಉಪಕ್ರಮ ತೆಗೆದುಕೊಂಡವರಲ್ಲಿ ರಾಜ್ಯದಲ್ಲಿ ನಾವೇ ಮೊದಲಿಗರು ಎಂಬುದಕ್ಕೆ ಹೆಮ್ಮೆಯಾಗುತ್ತದೆ. ಗ್ರಾಮೀಣ ಭಾಗದಿಂದ ಬಂದವರಿಗೆ ತಮ್ಮ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಹಣದು ನೆರವು ಬೇಕಾಗುತ್ತದೆ. ಹಾಗಾಗಿ ನಮ್ಮೆಲ್ಲರ ಬೆಂಬಲದಿಂದ ಅವರೂ ಬಹು ಬೇಗ ಬೆಳೆಯಬಹುದು. ಮುಂದಿನ ದಿನಗಳಲ್ಲಿ ವಾಣಿಜ್ಯೋದ್ಯಮಿಗಳು ನಮ್ಮ ಸಮುದಾಯಕ್ಕೆ 50 ಲಕ್ಷದಿಂದ 1 ಕೋಟಿವರೆಗೂ ಫಂಡಿಂಗ್ ಮಾಡುವಂತಾಗಲಿ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಕಾಶ್‌ ಅವರು ಎಫ್‌ಸಿ ಏಂಜಲ್ಸ್‌ ವೇದಿಕೆಗೆ ಸ್ವತಃ 1 ಕೋಟಿ ಹಣ ನೀಡುವುದಾಗಿ ಘೋಷಿಸಿದರು. ಮುಂಬರುವ ಎಕ್ಸ್‌ಪೋ ವೇಳೆಗೆ 10 ರಿಂದ 15 ಸಾಮಾರ್ಥ್ಯವುಳ್ಳ ಹಾಗೂ ವಿಭಿನ್ನ ಸ್ಟಾರ್ಟ್‌ಅಪ್‌ಗಳಿಗೆ ಎಫ್‌ಸಿ ಏಂಜಲ್ಸ್‌ ಮೂಲಕ ಹಣ ನೀಡಲಾಗುವುದು. ಈ ಮೂಲಕ ಒಕ್ಕಲಿಗ ಸಮುದಾಯಗೊಳಗಿನ ಉದ್ಯಮಶೀಲತೆ ಬೆಳವಣಿಗೆಗೆ ಮತ್ತು ನಾವೀನ್ಯತೆಗೆ ಸೂಕ್ತ ಪರಿಸರ ಮತ್ತು ವ್ಯವಸ್ಥೆಯನ್ನು ಕಟ್ಟಿಕೊಡಲಾಗುವುದು ಎಂದರು.

ಈ ಕುರಿತು ಕಿಯೋನಿಕ್ಸ್‌ ಅಧ್ಯಕ್ಷ ಹಾಗೂ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, “ಎಲ್ಲಾ ಒಕ್ಕಲಿಗ ನವೋದ್ಯಮಗಳನ್ನು ಒಂದೇ ಸೂರಿನಡಿ ತರಲು ಇದೊಂದು ಒಳ್ಳೆಯ ಉಪಕ್ರಮ. ಆರ್ಥಿಕವಾಗಿ ಪ್ರಬಲ ಹೊಂದಿರುವ ಸಮುದಾಯದ ಸದಸ್ಯರ ಹಣ ನೆರವನ್ನು ಎಫ್‌ಸಿ ಏಜಂಲ್ಸ್‌ ಫಂಡ್‌ ಗೆ ಪಡೆಯುವ ಮೂಲಕ 50 ಕೋಟಿ ಸಹಾಯ ಧನವಾಗಿ ಪರಿವರ್ತಿಸಿಕೊಳ್ಳಬಹುದು. ಇದರ ಮೂಲಕ ಒಕ್ಕಲಿಗ ಸಮುದಾಯದ ನವೋದ್ಯಮಗಳಿಗೆ ಹೂಡಿಕೆ ಮಾಡಬಹುದು ಮತ್ತು ಉದ್ಯಮವನ್ನು ಬೆಳೆಸಲು ಸಹಾಯವಾಗಬಹುದು ಎಂದು ಅಭಿಪ್ರಾಯಪಟ್ಟರು.

ಈ ಉಪಕ್ರಮಕ್ಕೆ ಎಫ್‌ಸಿ ಚೀಫ್‌ ಮೆಂಟರ್ ಜಯರಾಮ್‌ ರಾಯಪುರ ಮತ್ತು ಎಫ್‌ಸಿ ರಾಜ್ಯಾಧ್ಯಕ್ಷರಾದ ನಂದೀಶ್‌ ರಾಜೇಗೌಡ ಹರ್ಷ ವ್ಯಕ್ತಪಡಿಸಿ, ಈ ಪ್ರಯತ್ನ ಒಕ್ಕಲಿಗ ಸಮುದಾಯವು ಉದ್ಯಮ ಕ್ಷೇತ್ರದಲ್ಲಿ ಅಗಾಧ ಯಶಸ್ಸು ಕಾಣಲು ಮುನ್ನುಡಿಯಾಗಲಿದೆ.

- Advertisement -

Latest Posts

Don't Miss