Bollywood News: ಅಪಘಾತದಲ್ಲಿ 23 ವರ್ಷ ವಯಸ್ಸಿನ ಧಾರಾವಾಹಿ ನಟನ ದರ್ಮರಣ

Bollywood News: ಹಿಂದಿಯ ಖ್ಯಾತ ಕಿರುತೆಗೆ ನಟ ಅಮನ್ ಜೈಸ್ವಾಲ್ (23) ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಧರ್ತಿಪುತ್ರ ನಂದಿನಿ ಧಾರಾವಾಹಿಯಲ್ಲಿ ನಟಿಸಿದ್ದ ಅಮನ್‌, ಆಡಿಷನ್‌ ಒಂದಕ್ಕೆ ತೆರಳುತ್ತಿದ್ದರು ಈ ಸಂದರ್ಭದಲ್ಲಿ, ಇವರ ಬೈಕ್‌ಗೆ ಟ್ರಕ್‌ ಡಿಕ್ಕಿಯಾಾಗಿದೆ. ಸ್ಥಳದಲ್ಲಿದ್ದವರು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸದ್ಯ ಟ್ರಕ್ ವಶಕ್ಕೆ ಪಡೆದಿರುವ ಪೊಲೀಸರು, ಚಾಲಕನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಂಬೋಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೂಲತಃ ಅಮನ್ ಉತ್ತರ ಪ್ರದೇಶದವರಾಗಿದ್ದು, ಮನೆಯವರ ವಿರೋಧದ ನಡುವೆಯೂ ಸಿನಿರಂಗಕ್ಕೆ ಬಂದು, ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದಿದ್ದರು.

About The Author