German Kannadati: ಇಂದಿನ ಕಾಲದಲ್ಲಿ ಬೆಂಗಳೂರಿನಂಥ ಊರಿನಲ್ಲಿ ಇದ್ದು ಕೂಡ, ಕನ್ನಡ ಕಲಿಯದೇ ಗಾಂಚಾಲಿ ತೋರಿಸುವವರ ಮಧ್ಯೆ ಜರ್ಮನಿಗೆ ಹೋಗಿ, ಅಲ್ಲಿ ಕನ್ನಡ ಕಲಿಸಿರುವ ರಶ್ಮಿ ನಾಗರಾಜ್ ಎಂಬ ಕನ್ನಡತಿಯನ್ನು ಇಂದು ಕರ್ನಾಟಕ ಟಿವಿ ಸಂದರ್ಶನ ಮಾಡಿದೆ.
ಮೂಲತಃ ಶಿವಮೊಗ್ಗದವರಾದ ರಶ್ಮಿ ನಾಗರಾಜ್, ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವಂಥ ಗಿರೀಶ್ ಜೊಯೀಸ್ ಅವರನ್ನು ವರಿಸಿದ ಬಳಿಕ, ಜರ್ಮನಿಗೆ ಹೋಗಿ ನೆಲೆಸಿದರು. ಇಬ್ಬರು ಮಕ್ಕಳ ತಾಯಿಯಾಗಿರುವ ರಶ್ಮಿ, 24 ವರ್ಷಗಳಿಂದ ಜರ್ಮನಿಯಲ್ಲಿ ನೆಲೆಸಿದ್ದು, ತಾವು ಅನ್ನ ನೀಡುತ್ತಿರುವ ಜರ್ಮನ್ ಭಾಷೆಗೆ ಗೌರವಿಸಿದ್ದಲ್ಲದೇ, ಅಲ್ಲಿನ ಜನರಿಗೆ ಕನ್ನಡವನ್ನೂ ಕಲಿಸಿದ್ದಾರೆ.
ರಶ್ಮಿ ಅವರು ಹೇಳುವ ಪ್ರಕಾಾರ, ನಾವು ಎಲ್ಲೇ ಹೋದರು, ಅಲ್ಲಿನ ಭಾಷೆಯನ್ನು ಕಲಿಯಲೇಬೇಕು. ಯಾಕಂದ್ರೆ ನಾವು ಎಲ್ಲೇ ಹೋದರೂ, ಅಲ್ಲಿ ಧೈರ್ಯವಾಗಿ ನೆಲೆ ನಿಲ್ಲಲು ಬೇಕಾಗಿರುವುದೇ ಭಾಷೆ ಎನ್ನುವ ಅಸ್ತ್ರ. ಏದೇ ರೀತಿ ನಮ್ಮೊಂದಿಗೆ ವಿದೇಶದಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ನಮ್ಮ ಮಾತೃ ಭಾಷೆ ಮಾತನಾಡಲು, ಬರೆಯಲು ಬಂದಾಗಲೇ, ತವರೂರ ಬೇರು ಗಟ್ಟಿಯಾದಂತೆ ಅನ್ನೋದು ರಶ್ಮಿ ಅವರ ಅಭಿಪ್ರಾಯ.
ಇಂಥ ಅಭಿಪ್ರಾಯ ಹೊಂದಿರುವ ರಶ್ಮಿ ಅವರು ಜರ್ಮನಿಯಲ್ಲಿ ಒಂದು ಜಾಗ ತೆಗೆದುಕೊಂಡು, ಅಲ್ಲೊಂದು ಶಾಲೆ ಪ್ರಾರಂಭಿಸಿ, ಅಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಶುರು ಮಾಡಿದರು. ಅವರ ಜರ್ಮನಿ ಕನ್ನಡ ಶಾಲೆಯ ಜರ್ನಿ ಯಾಾವ ರೀತಿ ಇತ್ತು ಅಂತಾ ತಿಳಿಯಲು ಈ ವೀಡಿಯೋ ನೋಡಿ.