Political News: ಬಿಜೆಪಿ ಗೃಹಮಂತ್ರಿ ಅಮಿತ್ ಷಾ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿದ್ದು, ಅಮೃತ ಸ್ನಾನ ಮಾಡಿದ್ದಾರೆ.
ಗಂಗೆಯಲ್ಲಿ ಮುಳುಗೆದ್ದ ಅಮಿತ್ ಷಾ ಬಗ್ಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದು, ಈ ವಿರುದ್ಧ ಬಿಜೆಪಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಮಾನ್ಯ ಖರ್ಗೆ ಅವರೇ, ನಕಲಿ ಗಾಂಧಿ ಕುಟುಂಬದ ನಕಲಿ ಕಾಂಗ್ರೆಸ ಪಕ್ಷದ ನವಾಬರಂತೇಕೆ ವರ್ತಿಸುತ್ತಿದ್ದೀರಿ. ಮಹಾಕುಂಭ ಹಿಂದೂಗಳ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ, ಇಡೀ ಜಗತ್ತೆ ಅತ್ಯಂತ ಭಕ್ತಿ, ನಂಬಿಕೆ, ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುತ್ತಿರುವಾಗ, ದಿನಕ್ಕೆ ಕೋಟ್ಯಾಂತರ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನಮಾಡಿ ಪುನೀತರಾಗುತ್ತಿರುವಾಗ ಇದರಲ್ಲೂ ರಾಜಕೀಯ ಮಾಡುತ್ತಿರುವದು ಯಾರ ಓಲೈಕೆಗಾಗಿ.. ಇಂತಹ ಕ್ಷುಲ್ಲಕ ಹೇಳಿಗೆ ನೀಡಿ ಹಿಂದೂ ಧಾರ್ಮಿಕ ಶ್ರದ್ಧೆಮತ್ತು ಕೋಟ್ಯಾಂತರ ಹಿಂದೂಗಳನ್ನು ಅಪಮಾನಿಸದಿರಿ. ಪ್ರಧಾನಿ ಮೋದಿ ಜೀ ಹಾಗೂ ಅಮಿತ್ ಶಾ ಜೀ ಅವರ ಗಂಗಾ ನದಿಯ ತೀರ್ಥ ಸ್ನಾನದ ಕುರಿತು ನೀವು ಆಡಿದ ವ್ಯಂಗ್ಯದ ಮಾತುಗಳು ಸಮಸ್ತ ಹಿಂದೂಗಳ, ಅವರ ಭಾವನೆಗಳ, ಅವರ ಶೃದ್ಧೆಯನ್ನು ಅವಮಾನಿಸಿ ಆಡಿದ ಮಾತುಗಳು. ನಿಮ್ಮ ಹೇಳಿಕೆಗೆ ಕ್ಷಮೆ ಯಾಚನೆ ಮಾಡಿ. Indi Alliance ಸಮಸ್ತ ಸನಾತನ ಧರ್ಮದ ವಿರೋಧಿ ಎಂಬುವದು ಈ ಹೇಳಿಕೆಯಿಂದ ಮತ್ತೊಮ್ಮೆ ಸಾಬಿತಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಜೋಶಿ ಆಕ್ರೋಶ ಹೊರಹಾಕಿದ್ದಾರೆ.