Kannada Fact check: ಕೇಸರಿ ಬಟ್ಟೆ ಧರಿಸಿದ ಕೆಲವು ವ್ಯಕ್ತಿಗಳು ಮತ್ತು ಸಾಮಾನ್ಯ ಉಡುಪು ಧರಿಸಿದ ಇನ್ನೊಂದು ವ್ಯಕ್ತಿಗಳ ಗುಂಪು, ಒಬ್ಬರ ಮೇಲೊಬ್ಬರು ಕಲ್ಲು, ಇತರೆ ವಸ್ತುಗಳನ್ನು ಎಸೆದು ಜಗಳವಾಡುತ್ತಿರುವ ವೀಡಿಯೋ, ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಮತ್ತು ಅದು ಕುಂಭ ಮೇಳದಲ್ಲಿ ನಡೆಯುತ್ತಿರುವ ಕಲ್ಲು ತೂರಾಟವೆಂದು ಹೇಳಲಾಗಿದೆ.
ಉತ್ತರಪ್ರದೇಶದ ಪ್ರಯಾಗರಾಜ್‌ದಲ್ಲಿ ಮಹಾಕುಂಭ ಮೇಳ ನಡೆದಿದ್ದು, ಜನವರಿ 13ರಿಂದ ಫೆಬ್ರವರಿ 26ರಂದು ನಡೆಯಲಿರುವ ಮಹಾಶಿವರಾತ್ರಿವರೆಗೂ ಕುಂಭ ಮೇಳ ನಡೆಯಲಿದೆ. ಈ ಮೇಳದಲ್ಲಿ 45 ಕೋಟಿ ಜನ ಭಾಗಿಯಾಗಲಿದ್ದಾರೆಂದು ಹೇಳಲಾಗಿದ್ದು, ಮೌನಿ ಅಮಾವಾಸ್ಯೆಯ ಒಂದೇ ದಿನದಂದು 10 ಕೋಟಿಗೂ ಹೆಚ್ಚು ಜನ ಅಮೃತ ಸ್ನಾನಕ್ಕಾಗಿ ಬಂದಿದ್ದರು. ಇದರ ಪರಿಣಾಮವಾಗಿ, 30ಕ್ಕೂ ಹೆಚ್ಚು ಜನ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು.
ಇದೀಗ ವೀಡಿಯೋ, ಫೋಟೋ ವೈರಲ್ ಆಗುತ್ತಿದ್ದು, ಇದರಲ್ಲಿ ಮಹಾಕುಂಭ ಮೇಳದಲ್ಲಿ ಹಿಂದೂ ಮತ್ತು ಮುಸಲ್ಮಾನರು ಪರಸ್ಪರ ಕಲ್ಲು ತೂರಾಟ ನಡೆಸುತ್ತಿದ್ದಾರೆಂದು ಬರೆಯಲಾಗಿದೆ. ಆದರೆ ಇದು ಆಗಸ್ಟ್ 20, 2024ರಂದು ನಡೆದ ಬಗ್ವಲ್ ಹಬ್ಬದ ದೃಶ್ಯವಾಗಿದೆ. ಈ ಹಬ್ಬದ ವಿಶೇಷತೆ ಅಂದ್ರೆ, ಒಬ್ಬರಿಗೊಬ್ಬರು ಪರಸ್ಪರ ಕಲ್ಲಿನಿಂದ ಎಷ್ಟು ಜೋರಾಗಿ ಹೊಡೆಯಬಹುದೋ, ಅಷ್ಟು ಜೋರಾಗಿ ಬಡಿದಾಡಬೇಕು. ಹೀಗೆ ಬಡಿದಾಡಿಕೊಂಡೇ, ಕೆಲವರು ಆಸ್ಪತ್ರೆ ಸೇರಿದ್ದರು. ಇದೇ ಹಬ್ಬದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಶೇರ್ ಮಾಡಲಾಗುತ್ತಿದೆ.
The Verdict False: The video dates back To 2024 and shows a tradition at thee bagwal mela held in Uttarakhand.
Original Fact check by Logically Facts