Saturday, July 5, 2025

Latest Posts

ತಂದೆ ದಾನ ಮಾಡಿದ ಆಸ್ತಿಯ ಬಗ್ಗೆ ಮಗನ ತಕರಾರು: ಉರಿ ಬಿಸಿಲಲ್ಲಿ ಪಾಠ ಕೇಳುವ ಪರಿಸ್ಥಿತಿಗೆ ಬಂದ ಮಕ್ಕಳು

- Advertisement -

Kalaghatgi: ಕಲಘಟಗಿ: ತಂದೆಯ ಕಾಲದಲ್ಲಿ ದಾನವಾಗಿ ಕೊಟ್ಟ ಜಾಗದಲ್ಲಿ ಶಾಲೆ ನಿರ್ಮಾಣವಾಗಿದ್ದು ಈಗ ಜಾಗ ನನ್ನ ತಂದೆಯದು ಜಾಗ ಖಾಲಿ ಮಾಡಿ ಎಂದು ಮಾಲಿಕ ಶಾಲೆಯಿಂದ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಹರದಬ್ಬಿದ ಘಟನೆ ಕಲಘಟಗಿ ತಾಲೂಕಿನ ಕಲಕುಂಡಿ ಗ್ರಾಮದಲ್ಲಿ ನಡೆದಿದೆ.

ಮಕ್ಕಳು ಉರಿ ಬಿಸಿಲಿನಲ್ಲಿ ಗೇಟ್ಸ್ ಆಚೆ ಕುಳಿತಿದ್ದು. ಶಿಕ್ಷಕರು ಕೂಡಾ ಅವರ ಜೊತೆ ಕುಳಿತಿದ್ದಾರೆ. ನಮ್ಮ ತಂದೆ ಈ ಜಾಗವನ್ನು ಶಾಲೆಗೆ ದಾನವಾಗಿ ನೀಡಿದ್ದರು. ಈ ಜಾಗ ನಮ್ಮದು ಎಂದು ಅವರ ಪುತ್ರ ಕೃಷ್ಣಪ್ಪ ತಾಂಬೆ ಎಂಬುವರು ತಕರಾರು ಎತ್ತಿದ್ದಾರೆ.

ಇದರ ಬಗ್ಗೆ ಈಗಾಗಲೇ ಹಲವಾರು ಬಾರಿ ಸಮಸ್ಯೆಯಾಗಿಗಿದ್ದು ಇಲ್ಲಿಯ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲದಂತೆ ಕೂತಿದ್ದಾರೆ. ಸುಮಾರು ಮುರುನಾಲ್ಕು ಗಂಟೆ ಚಿಕ್ಕಮಕ್ಕಳು ಬಿಸಿಲಲ್ಲಿ ಹೊರ ಕುಳಿತಿದ್ದರು ಇಲ್ಲಿಯ ಅಧಿಕಾರಿಗಳು ಇತ್ತ ಬರಾದೇ ಇರೋದು ವಿಪರ್ಯಾಸವೇ.

ಗಂಡ-ಹೆಂಡತಿ ಜಗಳ ನಡುವೆ ಕೂಸು ಬಡವಾಯಿತು ಎನ್ನುವ ಹಾಗೆ ಸರ್ಕಾರ ಹಾಗೂ ಜಾಗದ ಮಾಲೀಕರ ನಡುವೆ ಇಲ್ಲಿನ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಸಂಭಂದಪಟ್ಟ ಅಧಿಕಾರಿಗಳು ಹಾಗೂ ಸಚಿವರಾದ ಸಂತೋಷ್ ಲಾಡ್ ಅವರು ಇತ್ತ ಕಡೆ ಗಮನ ಹರಿಸಿ ಇಲ್ಲಿಯ ಸಮಸ್ಯೆ ಬಗೆ ಹರಿಸಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

- Advertisement -

Latest Posts

Don't Miss