Sandalwood News: ಪ್ರಯಾಗ್‌ರಾಜ್‌ಗೆ ಹೋಗಿ ಅಮೃತ ಸ್ನಾನ ಮಾಡಿದ ಪವಿತ್ರಾ ಗೌಡ

Sandalwood News: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಕೆಲವು ತಿಂಗಳುಗಳ ಕಾಲ ಜೈಲು ವಾಸ ಅನುಭವಿಸಿದ್ದ ಪವಿತ್ರಾ ಗೌಡ, ಇದೀಗ ಬೇಲ್‌ ಮೇಲೆ ಈಚೆ ಬಂದು, ನಾರ್ಮಲ್ ಆಗಿ ಜೀವನ ಸಾಗಿಸುತ್ತಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ, ಹಲವು ದೇವಸ್ಥಾನಗಳಿಗೆ ಹೋಗಿ ಹರಕೆ ಪೂರ್ಣಗೊಳಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪವಿತ್ರಾ ಶಿರಡಿ ಸಾಯಿಬಾಬಾ ಸನ್ನಿಧಿಗೆ ದೇವರ ದರ್ಶನ ಪಡೆದರು.

ಇದೀಗ ಉತ್ತರಪ್ರದೇಶದ ಅಲಹಾಾಬಾದ್‌ನ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿರುವ ಪವಿತ್ರಾ ಗೌಡ, ಅಮೃತ ಸ್ನಾನ ಮಾಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿರುವ ಪವಿತ್ರಾ, ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯಳು. ಅಮೃತಸ್ನಾನದ ಬಳಿಕ ನೆಗೆಟಿವ್ ಎನರ್ಜಿ ಎಲ್ಲ ಮಾಯ ಎಂದು ಬರೆದುಕೊಂಡಿದ್ದಾರೆ.

ರೇಣುಕಾಸ್ವಾಮಿ ಎಂಬಾತ, ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದನೆಂಬ ಕಾರಣಕ್ಕೆ, ದರ್ಶನ್‌ ಬಳಿ ಹೇಳಿಸಿ, ಪವಿತ್ರಾ ಗೌಡ ಆಪ್ತನೊಬ್ಬ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಸಿದ್ದ. ಬಳಿಕ ದರ್ಶನ್, ಪವಿತ್ರಾ ಮತ್ತು 12ರಿಂದ 13 ಜನ ಸಂಗಡಿಗರು ಸೇರಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು, ಸಾಯಿಸಿದ್ದರು. ಈ ವಿಷಯ ಎಲ್ಲೂ ಗೊತ್ತಾಗಬಾರದು ಎಂದು, ರೇಣುಕಾಸ್ವಾಮಿ ಮೃತದೇಹವನ್ನು ಗೌಪ್ಯ ಸ್ಥಳದಲ್ಲಿ ಎಸೆಯಲಾಗಿತ್ತು.

ಆದರೆ ಈ ವಿಷಯ ಬೆಳಕಿಗೆ ಬಂದು, ದರ್ಶನ್ ಗ್ಯಾಂಗ್ ಜೊತೆ ಪವಿತ್ರಾ ಕೂಡ ಜೈಲು ಸೇರಿದ್ದಳು. ಪರಪ್ಪನ ಅಗ್ರಹಾರದಲ್ಲಿ ಇಷ್ಟು ದಿನ ಕಳೆದಿರುವ ಪವಿತ್ರಾ, ಇದೀಗ ಹೊರಬಂದಿದ್ದು, ಪಾಪ ಕಳೆದುಕೊಳ್ಳಲು ಅಮೃತಸ್ನಾನ ಮಾಡಿದ್ದಾರೆ.

About The Author