Sports News: ಕ್ರಿಕೇಟಿಗ ರಿಂಕು ಸಿಂಗ್ ಇತ್ತೀಚೆಗೆ ತುಂಂಬ ಸುದ್ದಿಯಾಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಿಂಕು ಸಿಂಗ್ ಮದುವೆ ಫಿಕ್ಸ್ ಆಗಿದ್ದು, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ವಿವಾಹ ನಿಶ್ಚಯವಾಗಿದೆ. ಹೀಗಾಗಿ ರಿಂಕು ಪ್ರಿಯಾ ಜೊತೆ ಇರಲು ಒಂದು ಐಶಾರಾಮಿ ಬಂಗಲೆ ಖರೀದಿಸಿದ್ದಾರೆ. ಕೋಟಿ ಕೋಟಿ ಬೆಲೆ ಬಾಳುವ ಬಂಗಲೆಯನ್ನು ಪ್ರಿಯಾ ಅವರಿಗೆ ಬೇಕಾಗುವಂತೆ ಡಿಸೈನ್ ಮಾಡಲಾಗಿದೆ.
ಇನ್ನು ಬಂಗಲೆ ಖರೀದಿಸಿದ ಬಳಿಕ ರಿಂಕು ತಮ್ಮ ತಂದೆಗೆ ಲಕ್ಷ ಲಕ್ಷ ಬೆಲೆ ಬಾಳುವ ಗಾಡಿಯನ್ನು ಕೊಡಿಸಿದ್ದಾರೆ. ಇದಾದ ಬಳಿಕ ರಿಂಕು ಸಿಂಗ್ ಫೋಟೋವನ್ನು ಎಐ ಮೂಲಕ ಎಡಿಟ್ ಮಾಡಿ, ರಿಂಕು ಎದೆಯ ಮೇಲೆ ಅಂಬೇಡ್ಕರ್ ಫೋಟೋ ಇರುವಂತೆ ವೈರಲ್ ಮಾಡಲಾಗಿತ್ತು. ಹೀಗೂ ರಿಂಕು ಸುದ್ದಿಯಾಗಿದ್ದರು. ಆದರೆ ಇದು ಕೂಡ ಸುಳ್ಳು ಸುದ್ದಿ ಅಂತಾ ಗೊತ್ತಾಯಿತು.
ಇದೀಗ ರಿಂಕು ತಮ್ಮ ಹೊಸ ಮನೆಯ ವಿಚಾರವಾಗಿಯೇ ಸುದ್ದಿಯಲ್ಲಿದ್ದಾರೆ. ಹೊಸ ಐಷಾರಾಮಿ ಮನೆಯಲ್ಲಿ ತಾನು- ಪ್ರಿಯಾ ಮತ್ತು ತನ್ನ ಕುಟುಂಬಸ್ಥರು ವಾಾಸಿಸಬೇಕು ಅಂತಾ ರಿಂಕು ಅಂದುಕೊಂಡಿದ್ದರು. ಆದರೆ ತಮ್ಮ ಹಳೆಯ ಮನೆಯನ್ನು ಬಿಟ್ಟು ತಾವು ಐಷಾರಾಮಿ ಬಂಗಲೆಗೆ ಬರೋದಿಲ್ಲ ಅಂತಾ ರಿಂಕು ಅಪ್ಪ ಅಮ್ಮ ನಿರ್ಧರಿಸಿದ್ದಾರೆ.
ಈ ನಿರ್ಧಾರಕ್ಕೆ ಒಂದು ಮುಖ್ಯವಾದ ಕಾರಣವೂ ಇದೆಯಂತೆ. ಅದೇನೆಂದರೆ, ನಮ್ಮ ಸುಖ ದುಃಖಗಳಿಗೆ ಸಾಕ್ಷಿಯಾದ, ನಗು ಅಳುವಿಗೆ ಸಾಕ್ಷಿಯಾದ ಮನೆ ಬಿಟ್ಟು ಬರಲು ನಮಗೆ ಮನಸ್ಸಿಲ್ಲ. ಈ ಮನೆಯಲ್ಲಿ ಇದ್ದು ದುಡಿದು, ಇಲ್ಲಿಯತನಕ ಬಂದಿದ್ದೇವೆ. ರಿಂಕು ಕೂಡ ಇದೇ ಮನೆಯಲ್ಲೇ ಹುಟ್ಟಿ ಬೆಳೆದಿದ್ದಾನೆ. ಹಳೆ ನೆನಪುಗಳೆಲ್ಲ ಈ ಮನೆಯಲ್ಲಿದೆ. ಹಾಗಾಗಿ ನಾವು ಕೊನೆಯವರೆಗೂ ಇಲ್ಲೇ ಇರಲು ಬಯಸುತ್ತೇವೆ. ಹಾಗಾಗಿ ರಿಂಕು ಮತ್ತು ಪ್ರಿಯಾ ಇಬ್ಬರೇ ಆ ಮನೆಯಲ್ಲಿರಲಿ. ನಾವು ಇಲ್ಲೇ ಇರುತ್ತೇವೆ ಎಂದು ರಿಂಕು ತಂದೆ ತಾಯಿ ಹೇಳಿದ್ದಾರೆ.