Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದ್ದು, ಕೇಂದ್ರ ಸರ್ಕಾರದ ಬಜೆಟ್ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತಂದಿದೆ. ಇದೊಂದು ಇನ್ನಷ್ಟು ಆಸಕ್ತಿ ಮಾಡಿದೆ. ಕರ್ನಾಟಕಕ್ಕೆ ಮತ್ತೆ ನಿರಾಶೆ ಆಗಿದೆ. ಈ ಹಿಂದೆ ಕರ್ನಾಟಕಕ್ಕೆ ಕೊಟ್ಟ ಭರವಸೆ ಕೊಡಲಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಅಂತಾ ಪರಿಗಣನೆ ಏನಾದರೂ ಕೊಡತ್ತಾರೆ ಅಂತಾ ಮಾಡಿದ್ದವು. ಇದಕ್ಕೋ ಸಹ ಏನು ಕೊಡಲಿಲ್ಲ. ಇಲ್ಲಿಯೂ ಕೂಡಾ ನಿರಾಶೆ ಮಾಡಿದರು.
ಇದರಿಂದಾಗಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಯಿತು. ಯಾವುದೇ ಹೊಸ ಯೋಜನೆಗಳು ಕರ್ನಾಟಕಕ್ಕೆ ಬರಲೇ ಇಲ್ಲ. ಇದೊಂದು ಬಿಹಾರದ ಚುನಾವಣಾ ಘೋಷಣಾ ಪತ್ರ ಆಗಿದೆ. ಕೇಂದ್ರ ಸರ್ಕಾರದ ಬಜೆಟ್ ಬಿಹಾರದ ಚುನಾವಣಾ ಪ್ರಣಾಳಿಕೆ ಆಗಿದೆ. ಬಜೆಟ್ ಪಾವಿತ್ರತ್ಯೆಯನ್ನ ಮೋದಿ ಸರಕಾರ ಕೆಳಗೆ ಇಳಿಸಿತು. ಬೇಕಾಬಿಟ್ಟಿಯಾದ ರೀತಿಯಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡಿತು. ಜಾಗೃತ ಮನಸ್ಸುಗಳ ಮೇಲೆ ವ್ಯತಿರಿಕ್ತವಾಗಿದೆ. ಈ ಹಿಂದೆ ರಾಜ್ಯ ಸರ್ಕಾರದವರು ಕೊಟ್ಟಿಲ್ಲ ಅಂತಾ ಈಗ ಏನು ಕೊಡಲಿ ಎಂದು ಸಚಿವರು ಪ್ರಶ್ನಿಸಿದ್ದಾರೆ.
ಮೈಕ್ರೋಫೈನಾನ್ಸ್, ಬಡ್ಡಿ ದಂಧೆಕೋರರ ಹಾವಳಿ ತಡೆಯಬೇಕಾಗಿದೆ. ಬಡವರನ್ನ, ಜನಸಾಮಾನ್ಯರನ್ನ ರಕ್ಷಣೆ ಮಾಡಬೇಕಾಗಿದೆ. ಬಡವರನ್ನ ಮನಬಂದಂತೆ ಥಳಿಸಿ ವಸೂಲಿ ಮಾಡಲಾಗುತ್ತಿದೆ. ಬಡ್ಡಿ ದಂಧೆಕೋರರಿಗೆ ಲಗಾಮು ಹಾಕಬೇಕಾಗಿದೆ. ಇದಕ್ಕಾಗಿ ಸುಗ್ರಿವಾಜ್ಞೆ ತಯಾರು ಆಗಿದೆ. ಓಂಬಡ್ಸ್ ಮನ್ ನೇಮಕ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರಿ ನೀಡಲಾವುದು. ಜನರ ಭಾವನೆ ಹಾಗೂ ಬದಕುನ ವಿರುದ್ಧ ವಸೂಲಿ ಮಾಡುವ ಪ್ರಕ್ರಿಯೆ ನಾವು ಒಪ್ಪಲ್ಲ.
ಈ ಮಸೂದೆ ಜಾರಿಗೆ ಎಲ್ಲ ಬಗೆಯ ಸಿದ್ಧತೆ ಆಗಿದೆ. ಮುಖ್ಯಮಂತ್ರಿಗಳಿಗೆ ಸಹ ಈಗಾಗಲೇ ಕಳುಹಿಸಿ ಕೊಡಲಾಗಿದೆ. ಸುಗ್ರೀವಾಜ್ಞೆಯ ಪರಿಶೀಲನೆ ಸಿಎಂ ಮಾಡಬೇಕಾಗುತ್ತದೆ. ಇದರ ಪರಮಾಧಿಕಾರವನ್ನ ನಾವು ಸಿಎಂಗೆ ಕೊಟ್ಟಿದ್ದೇವೆ. ರಾಜ್ಯಪಾಲರಿಗೆ ಕಳುಹಿಸುವ ಮುನ್ನ ಸಿಎಂ ಅವರು ಪರಿಶೀಲನೆ ಮಾಡಬೇಕಾಗುತ್ತದೆ. ಸಚಿವ ಸಂಪುಟದಲ್ಲಿ ಪಾಸ್ ಮಾಡಲು ಸಿಎಂ ಅವರಿಗೆ ಅಧಿಕಾರ ನೀಡಲಾಗಿದೆ. ಈ ಮಸೂದೆಯನ್ನ ಸಿಎಂ ನೋಡಿ ರಾಜ್ಯಪಾಲರಿಗೆ ಕಳುಹಿಸಿ ಕೊಡುತ್ತಾರೆ. ಮೈಕ್ರೋಪೈನಾನ್ಸ್ ಕಂಪನಿ ಸಿಬ್ಬಂದಿ ,ಬಡ್ಡಿ ದಂಧೇಕೋರರ ದೌರ್ಜನ್ಯ ಸಹಿಸಲಾಗದು ಎಂದು ಪಾಾಟೀಲ್ ಹೇಳಿದ್ದಾರೆ.
ಇಂತಹ ದೌರ್ಜನ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿ ಮಾಡಲಾಗುತ್ತಿದೆ. ದೌರ್ಜನ್ಯಕ್ಕೆ ಒಳಗಾಗುವವರ ವಿರುದ್ಧ ರಕ್ಷಣೆ ನೀಡಲಾಗುವುದು. ಆರ್ ಬಿ ಐ ಮಾರ್ಗದರ್ಶಿ ಪಾಲನೆ ಮಾಡಬೇಕು. ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಆರ್ ಬಿಐ ಇದೆ. ಯಾವುದೇ ನಿಯಮ ಪಾಲನೆ ಆಗುತ್ತಾ ಇಲ್ಲ ಎಂದು ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ರಾಜಕೀಯ ಸಲಹೆಗಾರ ,ಶಾಸಕ ಬಿ.ಆರ್ ಪಾಟೀಲ್ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್, ನಾನು ಮಾಧ್ಯಮಗಳಲ್ಲಿ ನೋಡಿದೆ. ಯಾವ ಉದ್ದೇಶ ಇರಿಸಿಕೊಂಡು ರಾಜೀನಾಮೆ ಕೊಟ್ಟಿದ್ದಾರೆ ಗೊತ್ತಿಲ್ಲ. ಇದಕ್ಕೆ ಈಗಾಗಲೇ ಸಿಎಂ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿ. ಆರ್ ಪಾಟೀಲ್ ರನ್ನ ಕರೆದು ಮಾತನಾಡಿಸುವೆ ಎಂದು ಪಾಟೀಲ್ ಹೇಳಿದ್ದಾರೆ.