Dharwad News: ಧಾರವಾಡ: ಹಿಂದೂ ಎಂಬ ಕಾರಣಕ್ಕೆ ಅಂಗಡಿ ಬಾಡಿಗೆ ನೀಡಲಿಲ್ಲವೆಂದು ಸೌದಾಗರ್ ಮಸೀದಿಯ ಆಡಳಿತ ಮಂಡಳಿಯ ವಿರುದ್ಧ ಆರೋಪ ಮಾಡಲಾಗಿದೆ.
ಸೌಧಾಗರ್ ಮಸೀದಿ ವಕ್ಫ್ ಬೋರ್ಡ್ ಮಂಡಳಿಗೆ ಸೇರಿದೆ. ಧಾರವಾಡದ ಟಿಕಾರೆ ರಸ್ತೆಯಲ್ಲಿರುವ ಅಂಗಡಿಗಳು ಈ ಮಸೀದಿಯ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಟೆಂಡರ್ ಕರೆಯದೇ ತಮಗೆ ಬೇಕಿದ್ದವರಿಗೆ ಮಾತ್ರ ಅಂಗಡಿಗಳನ್ನು ಬಾಡಿಗೆ ನೀಡಿದ್ದಾರೆ ಎಂದು ಸೌದಾಗರ ಮಸೀದಿಯ ಆಡಳಿಂತ ಮಂಡಳಿ ವಿರುದ್ಧ ಹಿಂದೂ ಯುವಕ ಗಂಭೀರ ಆರೋಪ ಮಾಡಿದ್ದಾನೆ.
ಹಿಂದೂ ಯುವಕ ಪುನೀತ್ ಬಡಿಗೇರ್ ಅರ್ಜಿ ಹಾಕಿದ್ದರೂ, ಆತನಿಗೆ ಆಡಳಿತ ಮಂಡಳಿ ಅಂಗಡಿ ಬಾಡಿಗೆಗೆ ನೀಡಿಲ್ಲ ಎಂದು ಪುನೀತ್ ಗಂಭೀರ ಆರೋಪ ಮಾಡಿದ್ದಾರೆ. ಅಂಗಡಿಗಳನ್ನು ಬಾಡಿಗೆಗೆ ನೀಡಬೇಕಾದರೆ, ಟೆಂಡರ್ ಕರೆದು ಬಾಡಿಗೆಗೆ ನೀಡಬೇಕು ಎಂಬ ಆದೇಶವಿದೆ. ಆದರೆ ಈ ಆದೇಶವನ್ನು ಸೌದಾಗರ್ ಮಸೀದಿ ಆಡಳಿತ ಮಂಡಳಿ ಉಲ್ಲಂಘಿಸಿದೆ. ಇದರಿಂದ ನನಗೆ ಅನ್ಯಾಯವಾಗಿದೆ ಎಂದು ಧಾರವಾಡ ವಕ್ಫ್ ಬೋರ್ಡ್ ಕಚೇರಿಗೆ ಪುನೀತ್ ಬಡಿಗೇರ್ ದೂರು ಸಲ್ಲಿಸಿದ್ದಾರೆ.
ಈ ದೂರಿನಲ್ಲಿ ಪುನೀತ್, ತಾನೋರ್ವ ಹಿಂದೂ ಎಂಬ ಕಾರಣಕ್ಕೆ ಅಂಗಡಿಯನ್ನು ಬಾಡಿಗೆ ನೀಡಿಲ್ಲವೆಂದು ಉಲ್ಲೇಖಿಸಿದ್ದಾರೆ. ಸದ್ಯ ಸೌದಾಗರ ಮಸೀದಿ ಆಡಳಿತ ಮಂಡಳಿಗೆ ಅಂಗಡಿಗಳನ್ನ ಬಾಡಿಗೆ ನೀಡಿದ ವರದಿ ಕೊಡುವಂತೆ ವಕ್ಪ್ ಬೋರ್ಡ ಅಧಿಕಾರಿಗಳು ಕೇಳಿದ್ದಾರೆ.