Wednesday, February 5, 2025

Latest Posts

100 ರೂಪಾಯಿಯಿಂದ 21 ಲಕ್ಷ ಸಂಪಾದನೆ..! ಫೇಮಸ್ ಯೂಟ್ಯೂಬರ್‌ ದತ್ತು ವಿಶೇಷ ಸಂದರ್ಶನ

- Advertisement -

Web News: ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಶುರು ಮಾಡಿದವರಿಗೆ ಯಾವುದೇ ಬೆಂಬಲವಿರಲಿಲ್ಲ. ಅದೆಲ್ಲ ವೇಸ್ಟ್ ಆಪ್ ಟೈಮ್, ಓದಿನ ಕಡೆ ಗಮನ ಕೊಡಿ, ಕೆಲಸದ ಕಡೆ ಗಮನ ಕೊಡಿ ಅಂತಾ ಹೇಳುವವರೇ ಹೆಚ್ಚಾಗಿದ್ರು. ಆದರೆ ಇದೀಗ ಯೂಟ್ಯೂಬ್ ಅದೆಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ, ಯೂಟ್ಯೂಬ್ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಯೂಟ್ಯೂಬರ್‌ಗಳು, ಕೋಟಿ ಕೋಟಿ ದುಡಿದು, ಆಫೀಸ್ ಕಟ್ಟಿ, ನಾಲ್ಕು ಜನಕ್ಕೆ ಕೆಲಸ ಕೊಡುವ ಹಂತಕ್ಕೆ ಬೆಳೆದಿದೆ.

ಅಂಥ ಯೂಟ್ಯೂಬ್‌ಗಳಲ್ಲಿ ದತ್ತಾ ಅವರ ಯೂಟ್ಯೂಬ್ ಕೂಡ ಒಂದು. ದತ್ತಾ ಅವರ ಸಂದರ್ಶನವನ್ನು ಕರ್ನಾಟಕ ಟಿವಿ ಮಾಡಿದ್ದು, ತಮ್ಮ ಯೂಟ್ಯೂಬ್ ಜರ್ನಿ ಬಗ್ಗೆ ದತ್ತಾ ಅವರು ಅನುಭವದ ಮಾತುಗಳನ್ನಾಡಿದ್ದಾರೆ.

ದತ್ತಾ ಕಾಲೇಜು ಓದುತ್ತಿದ್ದಾಗ, ಅವರ ಸಂಬಂಧಿಕರೊಬ್ಬರು, ನೀನು ಕಾಲೇಜು ಮುಗಿದ ಬಳಿಕ ನಮ್ಮ ಕಂಪನಿಗೆ ಬಾ ನಿನಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದಿದ್ದರು. ಆದರೆ ಅದೇ ವ್ಯಕ್ತಿ ಈಗ ಆ ಕೆಲಸ ಬಿಟ್ಟು ಊರಿಗೆ ಬಂದಿದ್ದಾರೆ. ಏಕೆಂದರೆ ಕಂಪನಿಯ ಕೆಲಸ ಕಷ್ಟಸಾಧ್ಯವಾಗಿತ್ತು. ಇನ್ನು ದತ್ತು ಅವರ ಅಣ್ಣ 2019ರಲ್ಲಿ, ಆ್ಯಕ್ಸೆಂಚರ್ ಕಂಪನಿಯಿಂದ ಕೆಲಸ ಬಿಟ್ಟು, ಅವರು ಕೂಡ ಇದೇ ರೀತಿ ಯೂಟ್ಯೂಬ್ ಶುರು ಮಾಡಿದರು.

ಆ್ಯಕ್ಸೆಂಚರ್ನಲ್‌ಲಿ ದತ್ತು ಅವರ ಅಣ್ಣ ತಿಂಗಳಿಗೆ 2ವರೆ ಲಕ್ಷ ಸಂಬಳ ಪಡೆಯುತ್ತಿದ್ದಾಗ, ದತ್ತು ಅವರು ಯೂಟ್ಯೂಬ್ ಇಂಪ್ರೂವ್ ಮಾಡಿ, ತಿಂಗಳಿಗೆ 7 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಇವರ ಸಾಧನೆ ನೋಡಿ, ಅವರು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಯೂಟ್ಯೂಬ್ ತರಬೇತಿ ನೀಡುವ ಕೆಲಸ ಮಾಡಲು ಶುರು ಮಾಡಿದರು. ಅವರ ಯೂಟ್ಯೂಬ್ ಜರ್ನಿ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss