Gadag News: ಗದಗ: ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಮಾಜಿ ಸಚಿವ ಬಿ.ಶ್ರೀರಾಾಮುಲು, ದೆಹಲಿಗೆ ಅಪಾಯಿಂಟ್ಮೆಂಟ್ ಮೇಲೆ ಹೋಗು ಬೇಕು ಅಂತಾನೆ ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿರುತ್ತೇನೆ.. ಮತ್ತೆ ಮುಂದೇನು ಹೋಗುತ್ತೇನೆ. ಎಲ್ಲಾ ವಿಚಾರವನ್ನು ಹೇಳಿ ಬರುತ್ತೇನೆ.. ರಾಮುಲು ಸುಮ್ಮನೆ ಇದ್ರು.. ಇದ್ರು.. ಅಂತಾ ಹೇಳುತ್ತಿದ್ರು.. ಇನ್ನು ಮುಂದೇ ಸುಮ್ಮನೆ ಇರೋದಿಲ್ಲ.. ಇನ್ನು ಮುಂದೇ ನಾನು ಮಾತಾಡುತ್ತೇನೆ.. ಯಾರ ಮುಲಾಜು ಇಲ್ದೆ ಮಾತಾಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಅಲ್ಲದೇ, ಮಾತಾಡಿದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗಬಾರದೆಂದು ಸುಮ್ಮನೆ ಇದ್ದೆ. ಈ ಬಾರಿ ನಮ್ಮಂತಹರನ್ನ ಅಪಮಾನ ಮಾಡಿದ್ರೆ. ಬೀದಿಗೆ ಇಳಿದು ಮಾತಾಡುವ ಮಂದಿನೇ.. ಯಾವುದನ್ನು ಲೆಕ್ಕ ಮಾಡೋಲ್ಲ. ಕಾಂಗ್ರೆಸ್ ನವರು ಕರೆಯುತ್ತಿದ್ದಾರೆ. ರಾಮುಲು ಅವರು ಯಾವತ್ತೂ ಪಾರ್ಟಿ ಬಿಟ್ಟು ಹೋಗಲ್ಲ ಇದು ರಾಜ್ಯದ ಜನ್ರಿಗೆ ಗೊತ್ತಿದೆ. ಈವಾಗ ಕೈ ಬಿಟ್ಟಿರುವ ಕಾರಣ.. ಒಳ್ಳೆಯ ವ್ಯಕ್ತಿ ಆಗಿರುವ ಕಾರಣ ಕರೆದಿರಬಹುದು. ಹೋಗಬೇಕು ಅನ್ನೋದು ನನ್ನ ಮನಸ್ಥಿತಿ ಅಲ್ವಾ.
ನಾನು ಹೋಗಬೇಕೆಂದ್ರೆ ನನ್ನನ್ನು ತಡೆಯೋಕೆ ಆಗುತ್ತಾ..? ಜೈಲ್ ನಲ್ಲಿ ಇಡೋಕ್ಕೆ ಆಗುತ್ತಾ.? ಈಗಿನ ಕಾಲದಲ್ಲಿ ಯಾರು ಯಾರ ಮಾತು ಕೇಳೋಲ್ಲ..ನನ್ನ ಮನಸ್ಥಿತಿ ಬಿಜೆಪಿ.. ನರೇಂದ್ರ ನೇತೃತ್ವದಲ್ಲಿ ಮತ್ತೆ ಕರ್ನಾಟಕದಲ್ಲಿ ಬಹುಮತದಿಂದ ಬಿಜೆಪಿ ಬರಬೇಕೆಂದು ಕೆಲಸ ಮಾಡಬೇಕು.. ಕೆಲಸ ಮಾಡೋಕೆ ನಮ್ಗೆ ಆಕ್ಸಿಜನ್ ಯಾರು ತುಂಬಬೇಕು.. ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ತುಂಬಬೇಕು. ಎನರ್ಜಿ ತುಂಬಲಿಲ್ಲ.. ಕಾಂಪಿಡೆನ್ಸ್ ತುಂಬಲಿಲ್ಲ. ಶಕ್ತಿವಂತಹರು ಇದ್ರು.. ಇವರು ನಿಸಾಯಕರು..ಕೆಲಸ ಬರೋಲ್ಲ.. ಅಂತಾ ಹೇಳಿದ್ರೆ ನಾನು ಮಾತಾಡಬೇಕಾಗುತ್ತೆ. ನಮ್ಮ ಶಕ್ತಿ ತೋರಿಸಬೇಕಾಗುತ್ತೆ ಎಂದು ಶ್ರೀರಾಮುಲು ಹೇಳಿದರು..
ಬಿಜೆಪಿಯಲ್ಲಿ ರಾಮುಲು ಅವರಿಗೆ ಅನ್ಯಾಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಮುಲು, ನಾನು ಇನ್ನೂ ಮುಂದೆ ಪಬ್ಲಿಕ್ ನಲ್ಲಿ ಮಾತನಾಡುತ್ತೇನೆ. ಇಷ್ಟು ದಿನ ಮಾತನಾಡಿಲ್ಲ, ಈವಾಗ ಮಾತನಾಡೋ ಕೆಲಸ ಮಾಡುತ್ತೇನೆ. ನಾನು ಮಾತನಾಡಿಲ್ಲ ಎಂದ್ರೆ ಅದು ನನ್ನ ದೌರ್ಬಲ್ಯ ಅಂತಾ ತಿಳಿದುಕೊಳ್ಳಬಾರದು. ನಾನು ಬುದ್ದಿವಂತನಿದ್ದೇನೆ, 30 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ನಮಗೆ ಎಲ್ಲರಿಗೂ ಪಾರ್ಟಿ ತಾಯಿ ಇದ್ದಹಾಗೇ. ಪಕ್ಷವನ್ನು ಬಿಡೋ ಪ್ರಶ್ನೇಯೇ ಇಲ್ಲಾ ಎಂದು ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.
ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಭಗವಂತ ಅವಕಾಶ ನೀಡಿದ್ರೆ ಸ್ಪರ್ಧೆ ಮಾಡುತ್ತೇನೆ. ನಿನ್ನೆ ಮೊನ್ನೆ ಲೀಡರ್ ಆದವರು ಬಾಯಿ ಚಪಲಕ್ಕೆ ಏನೋ ಮಾತನಾಡ್ತಾರೆ. ರಾಮುಲು ಏನೂ ಅಂತಾ ಇಡೀ ರಾಜ್ಯಕ್ಕೆ ಗೊತ್ತಿದೆ ಇವಾಗ ಗದಗನಲ್ಲಿ ಸ್ಪರ್ಧೆ ಮಾಡುವಂತೆ ಕರೆಯುತ್ತಾರೆ ಎಂದು ಶ್ರೀರಾಮುಲು ಹೇಳಿದರು.
ಜನಾರ್ದನ ರೆಡ್ಡಿ ಹಾಗೂ ರಾಮುಲು ವೈಮನಸ್ಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಈಗಾಲೇ ಎಲ್ಲ ವಿಚಾರವನ್ನು ಮಾತನಾಡಿದ್ದೇನೆ.ಬೇರೆ ಯಾರಾದ್ರು ಮಾತನಾಡಿದ್ರೆ ನಾನು ಮಾತನಾಡುತ್ತೇನೆ. ಮುಂದೆ ಅವರು ಏನಾದರೂ ಮಾತನಾಡಿದ್ರೆ ನಾವು ಮಾತನಾಡುವ ಕೆಲಸ ಮಾಡುತ್ತೇನೆ. ನಾನು ಯಾವ ಟೀಮ್ ಜೊತೆಗೆ ಹೋಗಲ್ಲ. ನನ್ನದು ಪಾರ್ಟಿ ಒಂದು ಟೀಮ್, ಪಾರ್ಟಿಗಾಗಿ ಇಷ್ಟು ದಿನ ಕಷ್ಟ ನುಂಗಿಕೊಂಡು ಬರುತ್ತೇನೆ. ಹೀಗಾಗಿ ಶ್ರೀ ರಾಮುಲು ಎಲ್ಲರು ಪ್ರೀತಿ ಮಾಡ್ತಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಯಡಿಯೂರಪ್ಪ ಸಿಎಂ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ನಾನು ಕೂಡಾ ಪಕ್ಷದಲ್ಲಿ ಅಳಿಲು ಸೇವೆ ಮಾಡಿದ್ದೇನೆ. ನಾನು ಯಾವುದಕ್ಕೂ ಲೀಡರ್ ಅನ್ಕೊಳೋದಿಲ್ಲ, ನಾನು ಅಳಿಲು ಸೇವೆ ಮಾಡಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.